ಹಿಂದು ಧರ್ಮದವರು ಆರತಿಗೆ ಒಂದು, ಕಿರ್ತಿಗೆ ಒಂದು ಎನ್ನುವ ಬದಲಾಗಿ, ಹೆಚ್ಚು ಮಕ್ಕಳು ಹೆತ್ತು ಧರ್ಮದ ಬಲ ಹೆಚ್ಚಿಸುವ ಜವಾಬ್ದಾರಿ ನವ ಯುವಕರ ಮೇಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಇಂಡಿ : ಹಿಂದು ಧರ್ಮದವರು ಆರತಿಗೆ ಒಂದು, ಕಿರ್ತಿಗೆ ಒಂದು ಎನ್ನುವ ಬದಲಾಗಿ, ಹೆಚ್ಚು ಮಕ್ಕಳು ಹೆತ್ತು ಧರ್ಮದ ಬಲ ಹೆಚ್ಚಿಸುವ ಜವಾಬ್ದಾರಿ ನವ ಯುವಕರ ಮೇಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಾಂತೇಶ್ವರ ಜಾತ್ರೆಯ ನಿಮಿತ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸಾಮೂಹಿಕ ವಿವಾಹ ಕೈಯಿಂದ ಆಗದವರ ಮದುವೆ, ಬಡವರ ಮದುವೆ ಎಂಬುದು ಶುದ್ಧ ತಪ್ಪು. ಮಧ್ಯಪ್ರದೇಶದ ಮುಖ್ಯಮಂತ್ರಿಯವರು ತಮ್ಮ ಮಗನ ಮದುವೆಯನ್ನು ಉಜ್ಜಯಿನಿಯಲ್ಲಿ ಕೇವಲ ವಾರದ ಹಿಂದೆ ಅಷ್ಟೇ ನಡೆದ ಸಾಮೂಹಿಕ ವಿವಾಹದಲ್ಲಿ ಮಾಡಿ ಆದರ್ಶರಾಗಿದ್ದಾರೆ.
ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮಾದರಿ
ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮಾದರಿಯಾಗಿದ್ದಾರೆ. ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಬಡ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡುತ್ತವೆ. ನಾಡಿನ ಸಂತ ಶರಣ ಸ್ವಾಮೀಜಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು. ಕುಟುಂಬದಲ್ಲಿ ಮದುವೆಗಳು ಒಪ್ಪಂದದ ಪ್ರಕಾರ ನಡೆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಮದುವೆಯಾಗುವವರು ಎಲ್ಲರಿಗೂ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯರರು, ಜೈನಾಪುರದ ರೇಣುಕಾ ಶಿವಾಚಾರ್ಯರು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಶಿರಶ್ಯಾಡದ ಮುರಗೇಂದ್ರ ಶಿವಾಚಾರ್ಯರು,ವೇ. ಮರುಳಯ್ಯ ಶಾಸ್ತ್ರೀ, ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ,ಸಿದ್ದು ಲಾಳಸಂಗಿ, ವೈ.ಜಿ.ಬಿರಾದಾರ ಮಾತನಾಡಿದರು.
ವಿವಿಧ ಗಣ್ಯರು ಭಾಗಿ
ಶಾಂತಯ್ಯ ಹಿರೇಮಠ, ಅಜೀತ ಹಿರೇಮಠ, ಮಹಾಂತಯ್ಯ ಹಿರೇಮಠ, ಚಂದ್ರಕಾಂತ ಪಂಡಿತ, ಪರಮಾನಂದ ಶ್ರೀಗಳು, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ರವಿಗೌಡ ಪಾಟೀಲ, ಭೀಮು ಪ್ರಚಂಡಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಸತ್ತಾರ ಬಾಗವಾನ, ಶ್ರೀಕಾಂತ ಕುಡಿಗನೂರ, ಅನೀಲಗೌಡ ಬಿರಾದಾರ, ಅಶೋಕ ಪಾಟೀಲ, ಅಪ್ಪು ಮಾನೆ, ಅಂತುಲೆ ರಹಮಾನ, ಭೀಮಣ್ಣ ಕವಲಗಿ, ಸಿಡಿಪಿಒ ಗೀತಾ ಗುತ್ತರಗಿಮಠ, ಸಂತೋಷ ಗವಳಿ, ಯಲ್ಲಪ್ಪ ಹದರಿ, ಯಮನಾಜಿ ಸಾಳುಂಕೆ, ದೇವೆಂದ್ರ ಕುಂಬಾರ, ಅಶೋಕ ಹದಗಲ್ಲ, ಈರಣ್ಣ ಮೈದರಗಿ,ಮಂಜುನಾಥ ತೆನೆಹಳ್ಳಿ, ಶಿವಯೋಗಪ್ಪ ಚನಗೊಂಡ, ಬಿ.ಸಿ.ಸಾವಕಾರ, ಈರನಗೌಡ ಪಾಟೀಲ, ಮಲ್ಲು ಗುಡ್ಲ, ಸೋಮು ನಿಂಬರಗಿಮಠ, ಸಂಜು ನಾವಿ, ಸದಾಶಿವ ಪ್ಯಾಟಿ ಮೊದಲಾದವರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಕುಂಭ ಹೊತ್ತ ಮಹಿಳೆಯರಿಂದ ಮಹಾವೀರ ವೃತ್ತದಿಂದ ದೇವಸ್ಥಾನದ ವರೆಗೆ ಭವ್ಯ ಮೆರವಣೆಗೆ ನಡೆಯಿತು.