ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ

| Published : Mar 29 2025, 12:36 AM IST

ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ ಸರ್ವ ಋತುಗಳು ತಮ್ಮ ಪ್ರಭೆಯನ್ನು ಹೆಚ್ಚಾಗಿ ಉಂಟುಮಾಡಿವೆ, ಮಳೆಗಾಲದಲ್ಲಿ ಕಡಿಮೆ ಮಳೆ, ಚಳಿಗಾಲದಲ್ಲಿ ಚಳಿ ಜಾಸ್ತಿ, ಇದೀಗ ಬೇಸಿಗೆ ಆರಂಭವಾಗಿ ಎರಡು ತಿಂಗಳಲ್ಲಿ ತನ್ನ ಬಿಸಿಲಿನ ಪ್ರತಾಪ ತೋರಿಸುತ್ತಿದೆ, ಬೇಗ ಬೇಸಿಗೆ ಮುಗಿದರೆ ಸಾಕು ಎನ್ನುವ ಸ್ಥಿತಿ ನಾಗರಿಕರಲ್ಲಿ. ಇತ್ತೀಚೆಗೆ ಅಕಾಲಿಕ ಮಳೆ ನಡುವೆ ಮಡಿಕೆ ಮಾರಾಟ ಜೋರಾಗಿದೆ.

ರುದ್ರೇಶ್ ಹೊನ್ನೇನಹಳ್ಳಿ

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆಈ ವರ್ಷ ಸರ್ವ ಋತುಗಳು ತಮ್ಮ ಪ್ರಭೆಯನ್ನು ಹೆಚ್ಚಾಗಿ ಉಂಟುಮಾಡಿವೆ, ಮಳೆಗಾಲದಲ್ಲಿ ಕಡಿಮೆ ಮಳೆ, ಚಳಿಗಾಲದಲ್ಲಿ ಚಳಿ ಜಾಸ್ತಿ, ಇದೀಗ ಬೇಸಿಗೆ ಆರಂಭವಾಗಿ ಎರಡು ತಿಂಗಳಲ್ಲಿ ತನ್ನ ಬಿಸಿಲಿನ ಪ್ರತಾಪ ತೋರಿಸುತ್ತಿದೆ, ಬೇಗ ಬೇಸಿಗೆ ಮುಗಿದರೆ ಸಾಕು ಎನ್ನುವ ಸ್ಥಿತಿ ನಾಗರಿಕರಲ್ಲಿ. ಇತ್ತೀಚೆಗೆ ಅಕಾಲಿಕ ಮಳೆ ನಡುವೆ ಮಡಿಕೆ ಮಾರಾಟ ಜೋರಾಗಿದೆ.

ಇದರ ಮಧ್ಯೆ ತಂಪು ಪಾನೀಯ ಹಾಗೂ ಕಲ್ಲಂಗಡಿ, ಸೌತೆಕಾಯಿ, ಜೊತೆಗೆ ಮಣ್ಣಿನ ಮಡಿಕೆ ಪದಾರ್ಥಗಳಿಗೂ ಬೇಡಿಕೆ ಬಂದಿದೆ, 200 ರುಪಾಯಿಯಿಂದ ಪ್ರಾರಂಭವಾಗಿ 1000 ರುಪಾಯಿವರೆಗೂ ಮಡಿಕೆ ಮಾರಾಟವಾಗುತ್ತಿದೆ, ದಿನಕ್ಕೆ 3000 ರುಪಾಯಿ ಗಳಿಸುತ್ತಿದ್ದೇವೆ ಎನ್ನುತ್ತಾರೆ ಮಡಿಕೆ ವ್ಯಾಪಾರಿಗಳು.

ರಾಷ್ಟ್ರೀಯ ಹೆದ್ದಾರಿ- 48 ರಲ್ಲಿ ವ್ಯಾಪಾರ ಜೋರು:

ಬಿಸಿಲು ಹೆಚ್ಚಾದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ- 48ರ ಪಕ್ಕದಲ್ಲಿ ಸುಮಾರು 03ರಿಂದ 04 ಅಂಗಡಿಗಳಲ್ಲಿ ವಿವಿಧ ತರಹೇವಾರಿ ಪಾತ್ರೆ ಸ್ವರೂಪದ ಮಡಿಕೆಗಳ ಮಾರಾಟ ಕಂಡುಬಂದಿದೆ, ಪಾತ್ರೆ ತರಹದ ನೀರಿನ ಮಡಿಕೆ, ಅಡುಗೆ ಮಡಿಕೆಗಳು, ದೋಸೆ ಮಾಡುವ ತವೆ, ನೀರಿನ ಲೋಟಗಳು, ಕುಕ್ಕರ್ ರೀತಿ ಮಡಿಕೆ, ಹಲವಾರು ಬಗೆಗಳಲ್ಲಿ ಗ್ರಾಹಕರನ್ನು ಆಹ್ವಾನಿಸುತ್ತಿವೆ.

ಕರಕುಶಲತೆಗೆ ಒತ್ತು:

ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಮಡಿಕೆ, ನೀರು ಕುಡಿಯುವ ಮಡಿಕೆ ಗಮನಿಸಿರುತ್ತೇವೆ, ಆದರೆ ಈ ಮಡಿಕೆಗಳು ವಿಭಿನ್ನ ಆಕಾರದ ಕರಕುಶಲತೆಗೆ ಒತ್ತು ನೀಡಿ, ಸೌಂದರ್ಯೋಪಾಸಕವಾಗಿವೆ.

ಮಡಿಕೆ ವ್ಯಾಪಾರಿ ರಾಜೇಂದ್ರ ಮಾತನಾಡಿ, ಈ ಬಾರಿ ಎಲ್ಲಾ ವರ್ಷಗಳಿಗಿಂತ ವ್ಯಾಪಾರ ಉತ್ತಮವಾಗಿದೆ, ಶನಿವಾರ ಮತ್ತು ಭಾನುವಾರಗಳಲ್ಲಿ ಕೊಳ್ಳುವವರ ಸಂಖ್ಯೆ ಹೆಚ್ಚಿದೆ ಎಂದರು.

ನೀರಿನ ಮಡಿಕೆಗಳ ವ್ಯಾಪಾರ:

ಪಿಂಗಾಣಿ ಮಾದರಿಯ ವಿವಿಧ ನಮೂನೆಯ ನೀರಿನ ಮಡಿಕೆಗಳ ಮಾರಾಟ ಜೋರಾಗಿದೆ, ಬೇಸಿಗೆಯ ತಾಪ ಹೆಚ್ಚಾದಂತೆ 400 ರುಪಾಯಿಯಿಂದ 1500 ರುಪಾಯಿವರೆಗೆ ಮಾರಾಟ ಮಾಡುತ್ತಿದ್ದೇವೆ, ಗ್ರಾಹಕರಿಂದ ಉತ್ತಮ ಬೇಡಿಕೆಯಿದೆ ಎಂದು ಮಾರಾಟ ಮಾಡುವ ರಾಜಸ್ಥಾನಿ ಮಹಿಳೆ ತಿಳಿಸಿದರು.--------

ವಿವಿಧ ತರೇಹವಾರಿ ಮಡಿಕೆಯ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಾರಾಟ ಮಾಡಿ, ನಂತರ ನೆಲಮಂಗಲ ನಗರದಲ್ಲೂ ಮಾರಾಟ ಮಾಡುತ್ತಿದ್ದೇವೆ, ಪ್ರತಿದಿನ 3 ಸಾವಿರ ರುಪಾಯಿಯಷ್ಟು ವ್ಯಾಪಾರವಾಗುತ್ತಿರುವುದು ಸಂತಸ ತಂದಿದೆ, ಬೇಸಿಗೆ ಮುಗಿದ ನಂತರ ವ್ಯಾಪಾರ ನಿಲ್ಲಿಸುತ್ತೇವೆ, ನಮ್ಮ ಹುಟ್ಟೂರಾದ ಗುಜರಾತ್ ಗೆ ತೆರಳಿ ಮತ್ತೆ ಹೊಸ ನವೀನ ಮಾದರಿ ಮಡಿಕೆ ತಯಾರಿಸುತ್ತೇವೆ.

ಮುಕೇಶ್, ಮಡಿಕೆ ಮಾರಾಟಗಾರ, ರಾಜಸ್ಥಾನ

ಮನೆಯಲ್ಲಿ ವಿವಿಧ ಬಗೆಯ ಮಣ್ಣಿನ ಪಾತ್ರೆಗಳನ್ನು ಇಡಲು ಮಹಿಳೆಯರು ಇಷ್ಟಪಡುತ್ತಾರೆ, ಬೇಸಿಗೆಯಲ್ಲಿ ಮಡಿಕೆ ಪಾತ್ರೆಗಳಲ್ಲಿ ಹೆಚ್ಚು ಶೆತ್ಯಾಂಶವಿದ್ದು, ಆಹಾರ ಕೇಡದೆ ಮತ್ತು ರುಚಿಕರವಾಗಿರುತ್ತದೆ, ನೀರು ತಣ್ಣನೆಯದಾಗಿ ಬಡವರ ಫ್ರಿಡ್ಜ್ ರೀತಿ ಕಾರ್ಯನಿರ್ವಹಿಸುತ್ತದೆ.

- ನಳಿನಾ, ಗ್ರಾಹಕರು.