ದೇವಸ್ಥಾನಗಳಿಂದ ಮನುಷ್ಯನ ಬಾಂಧವ್ಯ ವೃದ್ಧಿ

| Published : Nov 04 2025, 12:00 AM IST

ಸಾರಾಂಶ

ದೇವಸ್ಥಾನಗಳು ಮನುಷ್ಯನ ಬಾಂಧವ್ಯ ಬೆಸೆಯುವಂತಿರಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ದೇವಸ್ಥಾನಗಳು ಮನುಷ್ಯನ ಬಾಂಧವ್ಯ ಬೆಸೆಯುವಂತಿರಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಶಿರಾ ತಾಲೂಕಿನ ಕ್ಯಾದಿಗುಂಟೆ (ಶೇಷಾದ್ರಿಗಿರಿ) ಕರೆಕಲ್ಲು ಶ್ರೀ ರಂಗನಾಥ ಸ್ವಾಮಿ ಕಳಸ ಪ್ರತಿಷ್ಠಾಪನ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ದೇಗುಲಗಳು ಭಾವನೆ ಸುಲಭವಾಗಿ ವ್ಯಕ್ತಪಡಿಸುವ ಮುಕ್ತ ಅವಕಾಶ ನೀಡಲಿವೆ. ಧರ್ಮ ಪ್ರೀತಿಯನ್ನು ಹಂಚಬೇಕು. ನಾವೆಲ್ಲರೂ ಕೂಡ ಧರ್ಮವನ್ನು ಉಳಿಸುವಂತಹ ಕೆಲಸ ಮಾಡಬೇಕು. ನಮ್ಮ ಸ್ವಾರ್ಥಕ್ಕಾಗಿ ದೇವಾಲಯಗಳನ್ನು ನಿರ್ಮಾಣ ಮಾಡದೆ , ಎಲ್ಲರೂ ಒಗ್ಗೂಡಿ ಪ್ರೀತಿ ವಿಶ್ವಾಸ ಭಕ್ತಿಯೊಂದಿಗೆ ದೇವಸ್ಥಾನ ಕಟ್ಟಿದಾಗ ಗ್ರಾಮಗಳಲ್ಲಿ ನೆಮ್ಮದಿ ಜೊತೆಗೆ ದೇವರ ಕೃಪಾಕಟಾಕ್ಷ ದೊರಕಲಿದೆ ಎಂದು

ಪ್ರಕೃತಿ, ಗಿಡ ಮರ, ಭೂಮಿ ನೀರು ಗಾಳಿಯಲ್ಲಿಯೂ ಕೂಡ ದೇವರನ್ನು ಕಾಣಲು ಸಾಧ್ಯ. ದೇವರು ಕಾಣದೇ ಇರುವ ಜಾಗದಲ್ಲಿ ನಮ್ಮ ನೋವು ನಲಿವುಗಳನ್ನು ಹೇಳಿಕೊಳ್ಳುವುದಕ್ಕಿಂತ, ದೇವರಿಗೆ ಭವ್ಯ ದೇಗುಲ ನಿರ್ಮಾಣ ಮಾಡಿ ದೇವರನ್ನು ಪ್ರತಿಷ್ಠಾಪನೆ ಮಾಡಿ ನಮ್ಮ ಅಹವಾಲುಗಳನ್ನು ದೇವರ ಮುಂದೆ ಕೇಳಿಕೊಂಡಾಗ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗಲಿವೆ. ಕ್ಯಾದಿಗುಂಟೆ ಕರೆ ಕಲ್ಲು ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಗುಡ್ಡದ ಪ್ರಕೃತಿ ಸೌಂದರ್ಯದಲ್ಲಿ ಇದ್ದು ಎಲ್ಲರೂ ಒಗ್ಗೂಡಿ ಭವ್ಯವಾದ ದೇಗುಲ ನಿರ್ಮಾಣ ಮಾಡಿ, ಭಕ್ತರ ಪ್ರವಾಸಿ ತಾಣವಾಗುವ ರೀತಿ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಬೇಕು ಎಂದರು.

ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೇಶ್ ಮಾತನಾಡಿ ನಮ್ಮ ಸಂಕಷ್ಟಗಳಿಗೆ ಪರಿಹಾರ ದೇವರಿಂದ ಮಾತ್ರ ಸಾಧ್ಯ ಎಂಬ ಭಾವನೆಯೊಂದಿಗೆ ಭಗವಂತನನ್ನು ಪೂಜಿಸಲು ದೇಗುಲಗಳ ಅವಶ್ಯಕತೆ ಇದೆ ಎಂಬ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ದೇವಸ್ಥಾನಗಳು ಅಭಿವೃದ್ಧಿ ಕಾಣುತ್ತಿವೆ. ಭಕ್ತರ ಇಷ್ಟಾರ್ಥ ಸಿದ್ಧಿಗೊಳಿಸುವ ಹತ್ತಿರುವ ಕರೆ ಕಲ್ಲು ಶ್ರೀ ರಂಗನಾಥ ಸ್ವಾಮಿ ನಾಡಿಗೆ ಸುಭಿಕ್ಷೆ ಕರುಣಿಸಲಿ ಎಂದರು.

ಮುಖಂಡರಾದ ವೆಂಕಟಪ್ಪ, ಈಶ್ವರಪ್ಪ, ನಿವೃತ್ತ ಅಭಿಯಂತರ ಚಿಕ್ಕದಾಸಪ್ಪ, ಕ್ಯಾದಿಗುಂಟೆ ತಿಪ್ಪೇಸ್ವಾಮಿ, ಬಸವರಾಜು, ಪೂಜಾರ್ ಗಂಗಾಧರ್, ಕೆಇಬಿ ಪಾಂಡುರಂಗಪ್ಪ, ಶ್ರೀನಿವಾಸ್, ನರಸಿಂಹಯ್ಯ ಸೇರಿದಂತೆ ಕರೆಕಲ್ಲು ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಅಣ್ಣತಮ್ಮಂದಿರು, ಅಕ್ಕ ತಂಗಿಯರು ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.