ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿದ ಮಳೆ ಮತ್ತು ಅಲ್ಲಿನ ಜಾಲಶಯಗಳಿಂದ ಹೊರಬಿಡುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಕೃಷ್ಣಾ ನದಿಗೆ ದಾಖಲೆಯ 1,23,238 ಕ್ಯುಸೆಕ್ ನೀರು ಒಳ ಹರಿವು ಹೆಚ್ಚಿದೆ.

ಭಾನುವಾರ ಮಧ್ಯಾಹ್ನದಿಂದ ಕುಡಚಿ ಸೇತುವೆ ಜಲಾವೃತಗೊಂಡಿದೆ. ಮಿರಜ್, ಸಾಂಗ್ಲಿ ಮಾರ್ಗದ ವಾಹನಗಳು ಅಥಣಿ ಮಾರ್ಗವಾಗಿ ಸಾಗುತ್ತಿವೆ. ನದಿ ಪಾತ್ರದ ಜನತೆ ತಮ್ಮ ಜನ ಜಾನುವಾರುಗಳ ಸಮೇತ ಜಾಗೃತಿಯಿಂದ ಇರಲು ಹಾಗೂ ನದಿ ಪಾತ್ರದತ್ತ ತೆರಳದಂತೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ತಿಳಿಸಿದ್ದಾರೆ.