ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಪಿ. ಚಂದ್ರಕಲಾ ಕರೆ ನೀಡಿದ್ದಾರೆ.ಅವರು ಕುಶಾಲನಗರ ಭೂಮಿಕಾ ಮಹಿಳಾ ಹಿತ ರಕ್ಷಣಾ ವೇದಿಕೆಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಕನ್ನಿಕಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನೊಂದ ಮಹಿಳೆಯರಿಗೆ ಸಂಘಟನೆ ಮೂಲಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದ ಚಂದ್ರಕಲಾ, ಎಲ್ಲ ರೀತಿಯ ಸಲಹೆ ಸಹಕಾರಗಳನ್ನು ತಮ್ಮ ಮೂಲಕ ನೀಡುವುದಾಗಿ ತಿಳಿಸಿದರು.ಇದೇ ಸಂದರ್ಭ ಸಮಾಜ ಸೇವಕಿ ಕಮಲಾ ಕರಿಯಪ್ಪ, ಖ್ಯಾತ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಿರಿಯ ರಾಜಕೀಯ ಧುರೀಣರಾದ ಕೆ.ಪಿ. ಚಂದ್ರಕಲಾ, ವೇದಿಕೆ ಅಧ್ಯಕ್ಷೆ ಫಿಲೋಮಿನಾ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯೆ ರೂಪಾ ಉಮಾ ಶಂಕರ್ ಮಾತನಾಡಿದರು.ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಜೆ.ಫಿಲೋಮಿನಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪ್ರಮುಖರಾದ ಕಮಲಾ ಗಣಪತಿ, ಪಾರ್ವತಿ, ವನಿತಾ ಚಂದ್ರಮೋಹನ್, ನಿರ್ಮಲಾ ಶಿವದಾಸ್, ಪದ್ಮಾವತಿ ಪರಮೇಶ್, ಧರಣಿ ಸೋಮಯ್ಯ ಜಯಪ್ರಕಾಶ್ ಉಷಾ, ಲಲಿತಾ ಮೊಣ್ಣಪ್ಪ, ಜರೀನಾ ನವಮಣಿ, ಜಯಶ್ರೀ, ಸುನಂದ ಮತ್ತಿತರರು ಇದ್ದರು.