ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ಪರ್ಕಳದಲ್ಲಿ ಆಚರಿಸಲಾಯಿತು. ಪರ್ಕಳದ ಹೋಟೆಲ್ ಉದ್ಯಮಿ ಮೋಹನ್ ದಾಸ್ ನಾಯಕ್ ಧ್ವಜಾರೋಹನ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಬಗ್ಗೆ ಮಾತನಾಡಿದರು.
ಉಡುಪಿ: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ಪರ್ಕಳದಲ್ಲಿ ಆಚರಿಸಲಾಯಿತು. ಪರ್ಕಳದ ಹೋಟೆಲ್ ಉದ್ಯಮಿ ಮೋಹನ್ ದಾಸ್ ನಾಯಕ್ ಧ್ವಜಾರೋಹನ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಬಗ್ಗೆ ಮಾತನಾಡಿದರು. ವೇದಿಕೆ ಗೌರವಾಧ್ಯಕ್ಷ ಪ್ರಕಾಶ್ ಶೆಣೈ ಮಾತನಾಡಿ, ಸ್ವಾತಂತ್ರ್ಯದ ಮಹತ್ವದ ಬಗ್ಗೆ ತಿಳಿಸಿದರು. ವೇದಿಕೆ ಅಧ್ಯಕ್ಷ ಗಣೇಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್ ಸಣ್ಣಕ್ಕಿ ಬೆಟ್ಟು ನಿರೂಪಿಸಿದರು.
ವೇದಿಕೆ ಸದಸ್ಯರಾದ ಗೋಪಿ ಹಿರೇಬೆಟ್ಟು, ಗಣೇಶ್ ಸಣ್ಣಕ್ಕಿಬೆಟ್ಟು, ಸಂದೀಪ್ ನಾಯ್ಕ್ ಕಬ್ಯಾಡಿ, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ರಾಘವೇಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸುಧಾಕರ್ ನಾಯಕ್ ಕಬ್ಯಾಡಿ, ಬಸವರಾಜ್ ನಡಿದಾರೆ, ಸುಧೀರ್ ಕುಮಾರ್ ನಗರಬೆಟ್ಟು, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು, ಗುರುಪ್ರಸಾದ್ ಕಬ್ಯಾಡಿ, ಮೌನೇಶ್ ಆಚಾರ್ಯ ಪರ್ಕಳ, ರವಿರಾಜ್ ಆಚಾರ್ಯ ಪರ್ಕಳ, ಉದಯ ಕುಮಾರ್ ಆಲಂಬಿ, ಅನಂತರಾಮ ನಾಯಕ್, ಗಜೇಂದ್ರ ಆಚಾರ್ಯ ಬಾಳ್ಕಟ್ಟ, ಪ್ರಸಾದ್ ನಾಯಕ್ ಸಖರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು.