ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತ: ಸಿದ್ಧರಾಮೇಶ್ವರ ಶ್ರೀ

| Published : Mar 01 2025, 01:07 AM IST

ಸಾರಾಂಶ

ಭಾರತವು ಅಧ್ಯಾತ್ಮದ ತವರೂರಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿದೆ ಎಂದು ನಂದಿಗುಡಿ ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ನಂದಿ ಧ್ವಜಾರೋಹಣ, ಉಕ್ಕಡಗಾತ್ರಿ ಅಜ್ಜಯ್ಯನ ಜಾತ್ರೆಗೆ ಚಾಲನೆ- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಭಾರತವು ಅಧ್ಯಾತ್ಮದ ತವರೂರಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿದೆ ಎಂದು ನಂದಿಗುಡಿ ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಉಕ್ಕಡಗಾತ್ರಿ ಕರಿಬಸವೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಕರಿಬಸವೆಶ್ವರ ಗದ್ದುಗೆಗೆ ಪೂಜೆ ನೆರವೇರಿಸಿ, ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಕೆಲವು ರಾಷ್ಟ್ರಗಳು ದಿವಾಳಿಯಾಗಿವೆ. ಋಷಿಮುನಿಗಳ ನಾಡಾಗಿದ್ದ ಭಾರತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿದೆ ಎಂದರು.

ಪ್ರತಿ ವರ್ಷವೂ ಶಿವರಾತ್ರಿ ಹಬ್ಬ ಸಂದರ್ಭ ಭಜನೆ, ಭಕ್ತಿ, ಶಿವನಾಮ ಸ್ಮರಣೆ ಮಾಡುವ ಭಕ್ತರನ್ನು ಅಜ್ಜಯ್ಯನ ಕ್ಷೇತ್ರ ಆಕರ್ಷಿಸುತ್ತದೆ. ಮಾನವನ ಅಭ್ಯುದಯಕ್ಕೆ ಅಧ್ಯಾತ್ಮ ಸಹಕಾರಿಯಾಗಿದೆ. ಮಾನವ ಪ್ರಕೃತಿಯಲ್ಲಿನ ಯಾವುದೇ ವಸ್ತುಗಳನ್ನು ಹಾನಿ ಮಾಡದೇ ಕಾಪಾಡಿದಲ್ಲಿ ಮುಕ್ತಿ ಹೊಂದಬಲ್ಲನೆಂಬ ಭಾವನೆ ನಮ್ಮದಾಗಿದೆ ಎಂದರು.

ಶ್ರೀ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್ ಮಾತನಾಡಿ, ಪ್ರಯಾಗ್‌ರಾಜ್‌ನಲ್ಲಿ ಜರುಗಿದ ಮಹಾ ಕುಂಭಮೇಳವನ್ನು ನೆನಪಿಸುವ ಉಕ್ಕಡಗಾತ್ರಿ ಸುಕ್ಷೇತ್ರದ ಭಕ್ತರಿಗೆ ತುಂಗಾಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ತಮ್ಮ ಇಷ್ಟಾರ್ಥ ಕೈಗೊಳ್ಳುವರು. ಟ್ರಸ್ಟ್ ಭಕ್ತರಿಗೆ ಸಕಲ ಸವಲತ್ತುಗಳನ್ನು ಒದಗಿಸಿದ್ದು ಕೆಲವು ಭಕ್ತರಿಂದ ನದಿನೀರು ಮಲಿನವಾಗುತ್ತಿದೆ. ಸ್ವಚ್ಛತೆ ಹಾಳಾಗುತ್ತಿದೆ. ಇದರಿಂದ ಬೇರೆಯವರ ಆರೋಗ್ಯದಲ್ಲಿ ವ್ಯತ್ಯಾಸವಾಗಲು ಕಾರಣರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಟ್ರಸ್ಟ್ ನಿರ್ದೇಶಕ ಎನ್.ಆರ್. ಇಂದೂಧರ್ ಮಾತನಾಡಿ, ಭಕ್ತರ ಸಕಲ ಸೇವೆ ಮತ್ತು ಸಹಕಾರದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದ್ವೀಪದಂತಿರುವ ಉಕ್ಕಡಗಾತ್ರಿಯು ದಾವಣಗೆರೆ ಜಿಲ್ಲೆಯ ರಾಜಕಾರಣಿಗಳಿಂದ ಸಮರ್ಪಕ ರಸ್ತೆ, ಸೇತುವೆಗಳು ನಿರ್ಮಾಣವಾಗದೆ ಭಕ್ತರ ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೂರಿದರು.

ಟ್ರಸ್ಟ್ ನಿರ್ದೇಶಕರಾದ ನಾಗರಾಜ್ ದಿಲ್ಲಿವಾಲ, ಹೊಸಳ್ಳಿ ಗದಿಗೆಪ್ಪ, ಬಸವನಗೌಡ ಪಾಳ್ಯದ, ಪ್ರಕಾಶ್ ಕೋಟೇರ, ಗದಿಗೆಪ್ಪ ಎಚ್. ವಿವೇಕಾನಂದ ಪಾಟೀಲ್, ಗದಿಗಯ್ಯ ಪಾಟೀಲ್, ವೀರನಗೌಡ ಹಾಗೂ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ವೀರಭದ್ರಗೌಡ ಕೊಟೇರ, ಗದಿಗೇಶ್, ಅಜೇಯ್‌ ಗೌಡ, ಶಿಕ್ಷಕ ಮಹಾಂತಯ್ಯ, ಹಗರಿಬೊಮ್ಮನಹಳ್ಳಿ ಕರಿಬಸಪ್ಪ ಮತ್ತಿತರರು ಹಾಜರಿದ್ದರು.

- - - -ಚಿತ್ರ:೧.:

ನಂದಿಗುಡಿ ಸ್ವಾಮೀಜಿ ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಕರಿಬಸವೇಶ್ವರ ಜಾತ್ರೆಗೆ ಚಾಲನೆ ನೀಡಿದರು.