ಪುಟಾಣಿ ಲಾಸ್ಯ ತನ್ನ ೬ನೇ ವಯಸ್ಸಿನಲ್ಲಿ ೮ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ.

ತಿಪಟೂರು: ನಗರದ ಶ್ರೀ ಚಿಕ್ಕಮ್ಮ ಮತ್ತು ಪುಟ್ಟಯ್ಯ ಎಂಬುವರ ಮೊಮ್ಮಗಳು ಪುಟಾಣಿ ಲಾಸ್ಯ ತನ್ನ ೬ನೇ ವಯಸ್ಸಿನಲ್ಲಿ ೮ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. ೩ನೇ ವರ್ಷದಲ್ಲಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಮೂಡಿಗೇರಿಸಿದ್ದು ನಾಲ್ಕನೇ ವರ್ಷದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದಿದ್ದಾರೆ ಮತ್ತು ಆರನೇ ವರ್ಷದಲ್ಲಿ ಇಂಟರ್‌ ನ್ಯಾಷನಲ್ ಕಲಾಂ ಗೋಲ್ಡನ್ ಅವಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಸಾಧನೆಗೆ ಕಲ್ಪತರು ನಾಡಿನ ಮಠಾಧೀಶರು ವಿವಿಧ ಸಂಘ ಸಂಸ್ಥೆಗಳು ಕರೆದು ಸನ್ಮಾನಿಸಿದ್ದಾರೆ. ಈ ಮಗುವಿಗೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್‌, ತಿಪಟೂರಿನ ಉಪ ವಿಭಾಗಾಧಿಕಾರಿ ಸಪ್ತ ಶ್ರೀ, ಆದರ್ಶ ಅಧಿಕಾರಿಗಳಾಗಿದ್ದು ನಾನು ಸಹ ಐಎಎಸ್, ಕೆ ಎ ಎಸ್, ಅಧಿಕಾರಿ ಆಗುತ್ತೇನೆ ಎನ್ನುವ ಗುರಿ ಇಟ್ಟುಕೊಂಡಿದ್ದಾರೆ, ಈಕೆಯ ಹಂಬಲಕ್ಕೆ ಕುಟುಂಬದ ಸದಸ್ಯರು ಸದಾ ಬೆನ್ನೆಲುಬಾಗಿದ್ದೇವೆ ಎಂದು ತಿಳಿಸಿದರು.