ಸಾರಾಂಶ
ಮುಧೋಳ: ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ. ಭಾಷಾವಾರು ಪ್ರಾಂತಗಳಾಗಿ ಹಂಚಿಹೋದ ದೇಶವನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಲಾಯಿತು. ನಾವೆಲ್ಲರೂ ಬಡತನ, ಭ್ರಷ್ಟಾಚಾರ ನಿರ್ಮೂಲನೆಯ ಮೂಲಕ ಸಂವಿಧಾನ ಸಾಕ್ಷಾತ್ಕಾರಗೊಳಿಸಬೇಕೆಂದು ಕಾಲೇಜಿನ ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರು ಹೇಳಿದರು. ಸ್ಥಳೀಯ ಬೀಳೂರು ಗುರುಬಸವ ಮಹಾಸ್ವಾಮೀಜಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ (ಬಿಜಿಎಂಐಟಿ) ಶುಕ್ರವಾರ 75ನೇ ಗಣರಾಜೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಸಂವಿಧಾನದ ಪೂರ್ವದಲ್ಲಿ ಭಾರತ ದೇಶದಲ್ಲಿದ್ದ ಉಸಿರು ಗಟ್ಟಿಸುವಂತಹ ಕಾನೂನು, ತೊಂದರೆಗಳನ್ನು ಸರಿಪಡಿಸಿ ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಡಾ.ಬಿ.ಆರ್. ಅಂಬೆಡ್ಕರ್ ಅವರ ನೇತೃತ್ವದಲ್ಲಿ ಜಾರಿಗೆ ತರಲಾಯಿತು. ಭಾಷಾವಾರು ಪ್ರಾಂತಗಳಾಗಿ ಹಂಚಿಹೋದ ದೇಶವನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಲಾಯಿತು. ನಾವೆಲ್ಲರೂ ಬಡತನ, ಭ್ರಷ್ಟಾಚಾರ ನಿರ್ಮೂಲನೆಯ ಮೂಲಕ ಸಂವಿಧಾನ ಸಾಕ್ಷತ್ಕಾರಗೊಳಿಸಬೇಕೆಂದು ಕಾಲೇಜಿನ ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರು ಹೇಳಿದರು.ಸ್ಥಳೀಯ ಬೀಳೂರು ಗುರುಬಸವ ಮಹಾಸ್ವಾಮೀಜಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ (ಬಿಜಿಎಂಐಟಿ) ಶುಕ್ರವಾರ 75ನೇ ಗಣರಾಜೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತತನಾಡಿದರು.
ವಿಧ್ಯಾರ್ಥಿಗಳಾದ ವಿದ್ಯಾಶ್ರೀ, ಅಶ್ವಿನಿ ಮತ್ತು ಕಿರಣ ಅನಿಸಿಕೆ ಹಂಚಿಕೊಂಡರು. ಸಂಸ್ಥೆಯ ವತಿಯಿಂದ ಮುಧೋಳ ನಗರಸಭೆ ಪೌರಕಾರ್ಮಿಕರಾದ ನಾಗರಾಜ ಕೋರವರ, ಕಾಶವ್ವ ಮೇತ್ರಿ, ಜಯಶ್ರೀ ದೊಡಮನಿ, ಗೋಪಾಲ ಹರಿಜನ, ಚಿಕ್ಕಪ್ಪ ಮಾದರ, ರಾಜು ಮೇತ್ರಿ ಅವರನ್ನು ಸನ್ಮಾನಿಸಲಾಯಿತು.ಜಿಮಖಾನಾ ಚೇಮನ್, ಪ್ರೊ.ಮಲ್ಲು ಹುಣಶಿಕಟ್ಟಿ, ಕಾಲೇಜಿನ ಮಾಧ್ಯಮ ಪ್ರತಿನಿಧಿ ಪ್ರೊ.ವಿನಯ ಶೆಟ್ಟರ, ದೈಹಿಕ ನಿರ್ದೇಶಕ ಮೌನೇಶ ಎಂಡಿಗೇರಿ ಇದ್ದರು, ಸಹನಾ, ಜಯಶ್ರೀ ಮತ್ತು ಪಾರ್ವತಿ ನಿರೂಪಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.