ಸಾರಾಂಶ
-ಐಯ್ಯಪ್ಪಸ್ವಾಮಿ ದೇವಸ್ಥಾನದ ರಜತಮಹೋತ್ಸವದಲ್ಲಿ ಎಂ.ಕೆ.ತಾಜ್ ಫೀರ್
----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಭಾರತ ಸೂಫಿ ಸಂತರು, ಶರಣ ಸನ್ಯಾಸಿಗಳ ನೆಲೆವೀಡು. ಭಾವೈಕ್ಯತೆ ಶ್ರದ್ಧಾ ಕೇಂದ್ರವೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಹೇಳಿದರು.ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ರಜತ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದ ಪ್ರಥಮ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಠಗಳು, ಮಸೀದಿಗಳು, ಚರ್ಚ್ ಗಳು, ದರ್ಗಾಗಳಿವೆ. ಎಲ್ಲಾ ಜಾತಿ, ಧರ್ಮ, ವಿವಿಧ ಸಮಾಜದವರು ಕೂಡಿ ಬಾಳುತ್ತಿದ್ದಾರೆ. ಪ್ರಪಂಚದಲ್ಲಿ ಇರುವ ವಿವಿಧ ಧರ್ಮಗಳು ಈಗ ಭಾರತದ ಕಡೆಗೆ ಬರುತ್ತಿವೆ. ಇಲ್ಲಿನ ವಾತಾವರಣ ಕಂಡು ಇಲ್ಲಿಯೇ ನೆಲೆ ಊರಿ ಶಾಂತಿಯನ್ನು ಪಡೆಯುತ್ತಿದ್ದಾರೆ ಎಂದರು.
ನ್ಯಾಯವಾದಿ ಫಾತ್ಯರಾಜನ್ ಮಾತನಾಡಿ, ಸಮಿತಿಯವರು ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರನ್ನು ಕರೆಯಿಸುವುದರ ಮೂಲಕ ಭಾವೈಕ್ಯತೆ ಬೆಸೆದಿದ್ದಾರೆ. ದೇವರ ಕಾರ್ಯಕ್ರಮವನ್ನು ಮಾಡುವಾಗ ಜಾತಿಯನ್ನು ನೋಡಬಾರದು. ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಿಸಲು ಡಾ.ರಾಜಕುಮಾರ್ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಮಾಡಿ ಹಣ ಸಂಗ್ರಹಿಸಲಾಗಿತ್ತು. ಈಗ ಉತ್ತಮ ದೇವಾಲಯ ನಿರ್ಮಾಣ ಮಾಡಲಾಗಿದೆ. ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಾಲಯ ದೇಶದಲ್ಲಿಯೇ ಎರಡನೇ ದೇವಾಲಯವಾಗಿದೆ ಎಂದರು.ಬಸವೇಶ್ವರ ಟ್ರೇಡಿಂಗ್ ಕಂಪನಿಯ ಹೆಚ್.ಕೋಟ್ರೇಶ್ ಶ್ರೇಷ್ಟಿ ಮಾತನಾಡಿ, ಇಂದಿನ ದಿನಮಾನದಲ್ಲಿ ಜಾತಿಯ ಹಾವಳಿ ಹೆಚ್ಚಾಗಿದ್ದು, ಇದನ್ನು ತೆಗೆದುಹಾಕಬೇಕಿದೆ. ಮನೆಯಲ್ಲಿ ಇದ್ದಾಗ, ಮಾತ್ರ ಜಾತಿಯಿರಬೇಕು ಹೊರಗಡೆ ಬಂದಾಗ ಇರಬಾರದು. ಗಂಡು-ಹೆಣ್ಣು ಎರಡೇ ಜಾತಿಗಳಿರಬೇಕೆಂದರು.
ಕರುನಾಡ ವಿಜಯಸೇನೆಯ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಶರಣ್ ಕುಮಾರ್, ಜಿಲ್ಲಾ ಆಸ್ಪತ್ರೆಯ ಮಲ್ಲಣ್ಣ, ವಿದ್ಯಾನಗರದ ಎಂ.ಸಿ.ಶಂಕರ್, ವರ್ತಕ ಉದಯಶೆಟ್ಟಿ, ಬಾಲಾಜಿ ಲಕ್ಷ್ಮಣ್ ಸೋನಿ, ಗುತ್ತಿಗೆದಾರ ಮಂಜುನಾಥ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೀವನ್, ಸುರೇಶ್ ಬಾಬು, ಭಾಗವಹಿಸಿದ್ದರು.-------------
ಪೋಟೋ ಕ್ಯಾಪ್ಸನ್ಚಿತ್ರದುರ್ಗ ಹೊರವಲಯದಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಹಮ್ಮಿಕೊಳ್ಳಲಾದ ರಜತ ಮಹೋತ್ಸವ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಉದ್ಘಾಟಿಸಿದರು.
-----------ಪೋಟೋ: 7 ಸಿಟಿಡಿ 10