(ಓಕೆ) ಭಾರತ ಬಹುತ್ವದ ರಾಷ್ಟ್ರ, ನಮ್ಮ ದೇಶದಲ್ಲಿ ಬರೀ ಹಿಂದೂಗಳು ಮಾತ್ರವಿಲ್ಲ

| Published : Dec 18 2023, 02:00 AM IST

(ಓಕೆ) ಭಾರತ ಬಹುತ್ವದ ರಾಷ್ಟ್ರ, ನಮ್ಮ ದೇಶದಲ್ಲಿ ಬರೀ ಹಿಂದೂಗಳು ಮಾತ್ರವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಬಹುತ್ವದ ರಾಷ್ಟ್ರವಾಗಿದೆ, ಅದು ನಮ್ಮ ಮೂಲ ತಳಹದಿ. ಅದನ್ನು ಬಿಟ್ಟು ನಾವು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗದಗದಲ್ಲಿ ಭಾನುವಾರ ಬಿಜೆಪಿಯವರ ಮಾತಿಗೆ ಆಕ್ರೋಶ ವ್ಯಕ್ತ ಪಡಿಸಿದರು.

ಬಿಜೆಪಿಯವರ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

ಗದಗ: ಭಾರತ ಬಹುತ್ವದ ರಾಷ್ಟ್ರವಾಗಿದೆ, ಅದು ನಮ್ಮ ಮೂಲ ತಳಹದಿ. ಅದನ್ನು ಬಿಟ್ಟು ನಾವು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರ ಮಾತಿಗೆ ಆಕ್ರೋಶ ವ್ಯಕ್ತ ಪಡಿಸಿದರು. ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರ ಉಳಿಯಬೇಕೆಂದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ವಿಚಾರ ಕುರಿತ ಪ್ರಶ್ನೆಗೆ ಮಾತನಾಡಿ ಅವರು, ಅದು ಬಿಜೆಪಿಗರ ಸ್ಲೋಗನ್, ಭಾರತ ಬಹುತ್ವದ ರಾಷ್ಟ್ರ, ನಮ್ಮ ದೇಶದಲ್ಲಿ ಬರೀ ಹಿಂದೂಗಳ ಮಾತ್ರ ವಾಸವಿಲ್ಲ, ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧರು, ಜೈನರು ಇದ್ದಾರೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂದರು.

ಹಿಂದೂ ರಾಷ್ಟ್ರ ನಿರ್ಮಾಣ ಎನ್ನುವುದು ಬಿಜೆಪಿಯವರ ಘೋಷವಾಕ್ಯ. ಹಿಂದೂ ರಾಷ್ಟ್ರವಾಗಬೇಕೆಂದು ಜನಸಂಘ 1950ರಲ್ಲಿ ಪ್ರಾರಂಭವಾದಾಗಲೇ ಹೇಳಿದ್ದರು. ಅದು ಸಾಧ್ಯವಾಗಿದೆಯೇ? ನಮ್ಮ ದೇಶ ಬಹುತ್ವದ ದೇಶ. ಬರೀ ಹಿಂದೂಗಳ ರಾಷ್ಟ್ರ ಮಾಡಿದರೆ ಆಗೋಲ್ಲ. ಅದು ಬಿಜೆಪಿಯ ಸಿದ್ಧಾಂತ. ದೇಶವನ್ನು ಹಿಂದೂಗಳ ರಾಷ್ಟ್ರ ಮಾಡೋಕೆ ಆಗೋಲ್ಲ ಎನ್ನುವುದನ್ನು ಅವರು ಅರಿತು ಮಾತನಾಡಬೇಕು. 1925ರಲ್ಲಿ ಡಾ. ಹೆಡಗೇವಾರರು ಆರ್.ಎಸ್.ಎಸ್‌. ಸ್ಥಾಪನೆ ಮಾಡಿದ್ದರು, ಅಂದಿನಿಂದಲೂ ಅದನ್ನು ಹೇಳಿಕೊಂಡೇ ಬರುತ್ತಿದ್ದಾರೆ. ಸುಮ್ಮನೇ ಬುರುಡೆ ಹೊಡೆಯುತ್ತಾರೆ ಎಂದು ಕಿಡಿಕಾರಿದರು.