ಭಾರತ ಬಹುಭಾಷೆಗಳ ದೊಡ್ಡ ಗ್ರಂಥಾಲಯ: ಡಾ. ಅಗ್ರಹಾರ ಕೃಷ್ಣಮೂರ್ತಿ.

| Published : Sep 05 2025, 01:00 AM IST

ಭಾರತ ಬಹುಭಾಷೆಗಳ ದೊಡ್ಡ ಗ್ರಂಥಾಲಯ: ಡಾ. ಅಗ್ರಹಾರ ಕೃಷ್ಣಮೂರ್ತಿ.
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಭಾರತದಲ್ಲಿ ಬೇರೆ-ಬೇರೆ ಭಾಷೆ ಪ್ರದೇಶ ಹಾಗೂ ರಾಜರ ಆಳ್ವಿಕೆ ನಂತರವೂ ಏಕತೆ ಸಾಧಿಸಲು ಸಾಧ್ಯವಾಗಿರುವುದು ಭಾಷಾ ಸಾಮರಸ್ಯದಿಂದಲೇ ಪ್ರ-ಪಂಚದ ಬೇರಾವ ದೇಶದಲ್ಲಿಯೂ ಇಲ್ಲದ ಇಂತಹ ಹೊಂದಾಣಿಕೆಯಿಂದ ಭಾರತ ಬಹುಭಾಷೆಗಳ ದೊಡ್ಡ ಗ್ರಂಥಾಲಯದಂತಿದೆ ಎಂದು ಹಿರಿಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ಪ್ರತಿಪಾದಿಸಿದರು.

- ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರದ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಭಾರತದಲ್ಲಿ ಬೇರೆ-ಬೇರೆ ಭಾಷೆ ಪ್ರದೇಶ ಹಾಗೂ ರಾಜರ ಆಳ್ವಿಕೆ ನಂತರವೂ ಏಕತೆ ಸಾಧಿಸಲು ಸಾಧ್ಯವಾಗಿರುವುದು ಭಾಷಾ ಸಾಮರಸ್ಯದಿಂದಲೇ ಪ್ರ-ಪಂಚದ ಬೇರಾವ ದೇಶದಲ್ಲಿಯೂ ಇಲ್ಲದ ಇಂತಹ ಹೊಂದಾಣಿಕೆಯಿಂದ ಭಾರತ ಬಹುಭಾಷೆಗಳ ದೊಡ್ಡ ಗ್ರಂಥಾಲಯದಂತಿದೆ ಎಂದು ಹಿರಿಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ಪ್ರತಿಪಾದಿಸಿದರು.

ರಂಗೇನಹಳ್ಳಿಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸದ್ಗುರು ಜನಸೇವಾ ಫೌಂಡೇಶನ್. ಅರಿವು ವೇದಿಕೆ ತರೀಕೆರೆ, ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ಸಮೀಪದ ರಂಗೇನಹಳ್ಳಿ ಶ್ರೀ ಅಂಬಾ ಭವಾನಿ ಸಮುದಾಯ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕವಿರಾಜ ಮಾರ್ಗದಲ್ಲಿನ ಉಲ್ಲೇಖದಂತೆ ಕನ್ನಡಂಗಳು, ಕನ್ನಡದ ವಿರಾಟ್ ಸ್ವರೂಪವೆಂದರೆ ಕನ್ನಡದ ಮೂಲ ಭಾಷೆಯೊಂದಿಗೆ ಇರುವ ಪ್ರಾದೇಶಿಕ ಭಾಷೆಗಳ ಜೊತೆಗಿನ ಸಂಯೋಗ ಅನುಪಮವಾದುದು. ಮಾತೃಭಾಷೆ ಯಾವುದೇ ಪರಿಸರದಲ್ಲಿದ್ದರು, ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಹಿಂದಿಯನ್ನು ಯಾರು ಕಲಿಸಬೇಕಾಗಿಲ್ಲ. ಅದು ಈಗಾಗಲೇ ಭಾರತದ ಬಹು ತೇಕರಿಗೆ ತಿಳಿದಿದೆ. ಹಿಂದಿ ಖಡ್ಡಾಯಗೊಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಶಾಲಾ-ಕಾಲೇಜು ಮಕ್ಕಳಿಗೂ ಕನ್ನಡ ಬಳಕೆ ಮತ್ತು ಇವರಿಗೆ ಕನ್ನಡ ಕಲಿಸುವುದರಿಂದಲೇ ಕನ್ನಡದ ಬೆಳವಣಿಗೆ ಸಾಧ್ಯ ಎಂದರು.ಡಾ.ಸಬಿತಾ ಬನ್ನಾಡಿ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಇಲ್ಲದಿರುವ ಯಾವ ಅಂಶಗಳು ಇಲ್ಲ. ಮನುಷ್ಯನ ತಿಳುವಳಿಕೆಗೆ ಮತ್ತು ಸಮೃದ್ಧ ಜೀವನಕ್ಕೆ ಬೇಕಾದ ಎಲ್ಲ ಅಂಶಗಳು ಕನ್ನಡ ಕಾವ್ಯದಲ್ಲಿವೆ. ಸತ್ಯವತಿ ತನ್ನ ಮಗುವನ್ನು ಸುಡಲು ಬಂದಾಗ ಸತ್ಯವತಿ ಮತ್ತು ಸತ್ಯಹರಿಶ್ಚಂದ್ರ ನಡುವಿನ ಭಾವುಕ ಸನ್ನಿವೇಶವನ್ನು ರಾಘವಾಂಕನಿಗಿಂತ ಅದ್ಭುತವಾಗಿ, ಭಾವುಕವಾಗಿ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡ ಸಾಹಿತ್ಯದಲ್ಲಿನ ವಚನಗಳ ಮಹತ್ವ ಅದ್ವಿತೀಯವೂ ಅಸಾದರಣವೂ ಆಗಿರುವಂತಹುದು. ಜನರ ಬದುಕಿಗೆ ಕುರಿತ ಮತ್ತು ಅಳವಡಿಸಿಕೊಳ್ಳಬಹುದಾದ ವಚನಗಳನ್ನು ವಚನಕಾರರು ಕಟ್ಟಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ರವಿಕುಮಾರ್ ನೀಹ ಮಾತನಾಡಿ ಆರಂಭದ ಕನ್ನಡಂಗಳು ನಿಂದ ಇಂದಿನ ಬಹು ಕನ್ನಡದವರೆಗೆ ನಡೆದಿರುವ ಈ ಚರ್ಚೆ ಕನ್ನಡದ ಬಹುತ್ವ, ವೈವಿಧ್ಯತೆಯನ್ನು ಪ್ರಧಾನವಾಗಿ‌ ಈ ಕಾರ್ಯಾಗಾರದಲ್ಲಿ ಚರ್ಚಿಸಿದೆ. ಕನ್ನಡ ಕೇವಲ ಭಾಷೆ, ಸಂಸ್ಕೃತಿ, ಅದಷ್ಟೇ ಅಲ್ಲ. ಅವುಗಳ ಜೊತೆಗೆ ಕನ್ನಡ ಅನ್ನುವುದು ಜೀವನ ಕ್ರಮ ವಾಗಿಯೂ, ಸಂಸ್ಕೃತಿಯ ಚರ್ಚೆಯಾಗಿಯೂ, ಕನ್ನಡ ಅನ್ನುವುದು ನಡೆದಾಡುವ ಭಾಷೆಯಾಗಿಯೂ, ಪ್ರಕಟಗೊಂಡಿರುವುದು ಇದೆ ಎಂದು ವಿವರಿಸಿದರು. ಕನ್ನಡ ಪರಂಪರೆಯಿಂದಲೂ ಭಾಷೆ, ದೇಶ ಕಟ್ಟುತ್ತಿದೆ. ಸಂಸ್ಕೃತಿ ಬೆಳೆಸುತ್ತಿದೆ. ಬಹುತ್ವವನ್ನು ಧ್ಯಾನಿಸುತ್ತಿದೆ. ಸಮಕಾಲಿನವು, ಪರಂಪರೆಯ ಧ್ಯಾನ ಕನ್ನಡಕ್ಕೆ ಒದಗಿ ಬಂದಿರುವ ಗುಣ. ಕನ್ನಡ ಧೀರೋದಾತ್ತವಾಗಿ ಬೆಳೆಯುತ್ತಿದೆ. ತನ್ನ ಅಸ್ಮಿತೆಯನ್ನು ಈ ಕಾಲಕ್ಕೂ ಉಳಿಸಿಕೊಳ್ಳುತ್ತಿದೆ. ಇದು ಕನ್ನಡಕ್ಕಿರುವಂತ ಜೀವಂತಿಕೆ ಗುಣ ಮತ್ತು ಸವಾಲುಗಳ ನಡುವೆ ಮತ್ತೆ ಮತ್ತೆ ಕನ್ನಡವನ್ನ ಧ್ಯಾನಿಸುತ್ತಾ ಬದುಕುತ್ತಿದ್ದೇವೆ ಎಂದು ನುಡಿದರು.

ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಕನ್ನಡದ ಕೆಲಸಗಳು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಚಿಂತನೆ ಮಾಡಬೇಕಿದೆ, ಭಾಷೆ ಬಳಕೆ, ಸಾಹಿತ್ಯ ಓದು, ಬರಹ, ಇತಿಹಾಸ, ಸಂಶೋಧನೆ, ವಿಷಯಾಧಾರಿತ ಚರ್ಚೆ, ಹೋರಾಡಿದ ಮಹನೀಯರ ಪರಿಚಯ ಹಾಗೂ ಕನ್ನಡ ಚರ್ಚೆ, ಸಂವಾದ, ವಿಷಯ ವಿನಿಮಯ ಈ ರೀತಿ ಹೊಸ ಹೊಸ ಆಲೋಚನೆ ಕುರಿತಾದ ಕನ್ನಡ ಪರ ಕೆಲಸಗಳು ಹೆಚ್ಚುಹೆಚ್ಚು ನಡೆಯಬೇಕು. ಕನ್ನಡದ ಬಗ್ಗೆ ಚಿಂತಿಸುವ ಮನಸ್ಥಿತಿಯನ್ನು ಹೆಚ್ಚುಸುವ ವಿಷಯಗಳು ಸೇರಿದಂತೆ 2 ದಿನ ನಡೆದ ಕಾರ್ಯಗಾರದಲ್ಲಿ ಬಹುಮುಖ ಪ್ರತಿಭೆಯ ಕನ್ನಡಾಸಕ್ತರು, ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಈ ಕಾರ್ಯಗಾರ ಸಾಕ್ಷಿಯಾಗಿ, ಯಶಸ್ವಿಯಾಗಿದೆ ಎಂದು ವ್ಯಾಖ್ಯಾನಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ವಿಶ್ವನಾಥ್ ಮಾತನಾಡಿ ಇಂತಹ ಕಾರ್ಯಾಗಾರ ನಮ್ಮೂರಲ್ಲಿ ನಡೆದದ್ದು ನಮಗೆ ಸಂತೋಷ ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನೊಟ್ಟಿಗೆ ನಾವಿದ್ದೇವೆ ಎಂದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರೀ ಶ್ರೀನಿವಾಸ್ ಮಾತನಾಡಿ, ಕನ್ನಡ ಸಾಹಿತ್ಯದ ನನ್ನ ಒಡನಾಟದಿಂದ ನನ್ನ ಜೀವನ ವಿಧಾನವೇ ಬದಲಾಗಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹೆಚ್ಚು-ಹೆಚ್ಚು ಆಗಬೇಕು ಎಂದು ಹೇಳಿದರು. ಸದ್ಗುರು ಜನಸೇವಾ ಪೌಂಡೇಶನ್ ಅಧ್ಯಕ್ಷ ಟಿ. ಎನ್. ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸದ್ಗುರು ಜನಸೇವಾ ಪೌಂಡೇಶನ್ ಗುರುತಿಸಿ ಈ ಕಾರ್ಯಾಗಾರ ಮಾಡಲು ಅನುಮತಿ ನೀಡಿದ್ದು ನನಗೆ ಮತ್ತು ನಮ್ಮ ಪಧಾಧಿಕಾರಿಗಳಿಗೆ ಸಂತೋಷ ತಂದಿದೆ ಎಂದು ತಿಳಿಸಿದರು. ತುಂಬಾಡಿ ರಾಮಯ್ಯ ಮಾತನಾಡಿ, ಡಾ. ಸಿ. ಜಿ. ಲಕ್ಷ್ಮೀಪತಿ ಕನ್ನಡ ಪರಂಪರೆಯಲ್ಲಿ ವೈಜ್ಞಾನಿಕ ಮನೋಧರ್ಮ , ವೈಜ್ಞಾನಿಕ ಕುರುಹುಗಳನ್ನು ತಿಳಿಸುವ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದು ವಿಶೇಷವಾಗಿ ಮೂಡಿಬಂತು ಎಂದರು.

ಡಾ. ಎಚ್. ಆರ್. ಸ್ವಾಮಿ, ನವೀನ್ ಪೆನ್ನಯ್ಯ, ರವಿ ಶಾಂತಿಪುರ, ದರ್ಶನ್, ಕೆ. ಎಸ್. ಶಿವಣ್ಣ ಮತ್ತಿತರರು, ಶಿಭಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಎಲ್ಲಾ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.-

3ಕೆಟಿಆರ್.ಕೆ.12ಃ

ತರೀಕೆರೆಯ ರಂಗೇನಹಳ್ಳಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಹಿರಿಯ ಚಿಂತಕರು ಡಾ.ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿ ದಳವಾಯಿ ಮತ್ತಿತರರು ಇದ್ದರು.