ಭಾರತದ ಕಿರಿಯ ಪೈಲಟ್‌ ಸಮೇರಾ ಹುಲ್ಲೂರ ಸಾಧನೆ

| Published : Dec 01 2024, 01:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: 18ನೇ ವಯಸ್ಸಿನಲ್ಲಿಯೇ ಕಮರ್ಷಿಯಲ್ ಫೈಲೆಟ್ ಲೈಸನ್ಸ್‌(ಸಿಪಿಎಲ್) ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ ಪೈಲಟ್ ಆಗಿ ಗುರುತಿಸಿಕೊಂಡು ಸಮೇರಾ ಹುಲ್ಲೂರ ಸಾಧನೆ ಮಾಡಿದ್ದಾಳೆ. ನಗರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾಳೆ

ಕನ್ನಡಪ್ರಭ ವಾರ್ತೆ ವಿಜಯಪುರ: 18ನೇ ವಯಸ್ಸಿನಲ್ಲಿಯೇ ಕಮರ್ಷಿಯಲ್ ಫೈಲೆಟ್ ಲೈಸನ್ಸ್‌(ಸಿಪಿಎಲ್) ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ ಪೈಲಟ್ ಆಗಿ ಗುರುತಿಸಿಕೊಂಡು ಸಮೇರಾ ಹುಲ್ಲೂರ ಸಾಧನೆ ಮಾಡಿದ್ದಾಳೆ. ನಗರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾಳೆ.

ಚಿಕ್ಕ ವಯಸ್ಸಿನಲ್ಲಿಯೇ ಪೈಲಟ್ ಆಗಿ ಸಾಧನೆ ಮಾಡಿ ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಸಮೇರಾ ಹುಲ್ಲೂರಗೆ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಚೇರಮನ್‌ ಡಾ.ಸುರೇಶ ಬಿರಾದಾರ, ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕ ಶರತ ಬಿರಾದಾರ, ದಿವ್ಯಾ ಬಿರಾದಾರ, ಪ್ರಾಚಾರ್ಯ ಶ್ರೀಧರ ಕುರಬೇಟ ಸೇರಿದಂತೆ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.