ಸಾರಾಂಶ
ಭಾರತೀಯ ಕಮರ್ಷಿಯಲ್ ಸಿನಿಮಾಗಳಲ್ಲಿ ಹಾಡು, ಹಾಸ್ಯ ಹಾಗೂ ಪ್ರೇಕ್ಷಕರ ಮನರಂಜನೆಗೆ ತಕ್ಕಂತೆ ಮಸಾಲೆ ಸೇರಿಸುವುದು ಸಾಮಾನ್ಯ. ಇದನ್ನು ಕೆಲವು ವಿಮರ್ಶಕರು ಕೀಳಾಗಿ ನೋಡುವರು ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತದ ಸಿನಿಮಾ ಕ್ಷೇತ್ರದಲ್ಲಿ ಭಾರತೀಯ ಅಜೆಂಡಾ ಅಥವಾ ಅಭಿವ್ಯಕ್ತಿ ಸ್ಪಷ್ಟತೆ ಕಾಣದಿರುವುದು ವಿಚಾರ ಮಾಡಬೇಕಾದ ವಿಷಯವಾಗಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಪ್ರಕಾಶ್ ಬೆಳವಾಡಿ ಹೇಳಿದರು.ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್‌ನಲ್ಲಿ ಶನಿವಾರ ಸಿನಿಮೀಯ-ಸಿನಿಕೀಯ: ಪುಸ್ತಕ ಬಿಡುಗಡೆ ಮತ್ತು ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಲವು ಸಿನಿಮಾಗಳಲ್ಲಿ, ಜಾತಿ, ಪ್ರಾದೇಶಿಕತೆ ಹಾಗೂ ಉಗ್ರ ಅಂಶಗಳನ್ನು ಅನಾವರಣ ಮಾಡಲಾಗುತ್ತಿದೆ. ಇದು ಭಾರತೀಯ ಆಡಳಿತ ವ್ಯವಸ್ಥೆಯ ಅಸ್ಪಷ್ಟ ಸ್ಥಿತಿಯನ್ನು ತೋರಿಸುತ್ತದೆ. ಪ್ರಸ್ತುತ ಚೀನಾದ ಮಾದರಿಯಲ್ಲಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ತಂತ್ರಜ್ಞಾನವನ್ನು ಪ್ರಭಾವಿಯಾಗಿ ಬಳಸುವ ಅಗತ್ಯ ಭಾರತೀಯ ಸಿನಿಮಾ ಕ್ಷೇತ್ರದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದು ಎಂದರು.ಭಾರತೀಯ ಕಮರ್ಷಿಯಲ್ ಸಿನಿಮಾಗಳಲ್ಲಿ ಹಾಡು, ಹಾಸ್ಯ ಹಾಗೂ ಪ್ರೇಕ್ಷಕರ ಮನರಂಜನೆಗೆ ತಕ್ಕಂತೆ ಮಸಾಲೆ ಸೇರಿಸುವುದು ಸಾಮಾನ್ಯ. ಇದನ್ನು ಕೆಲವು ವಿಮರ್ಶಕರು ಕೀಳಾಗಿ ನೋಡುವರು ಎಂದರು.
ಚಿಂತಕ ಹಾಗೂ ಸಿನಿಮಾ ನಿರ್ದೇಶಕ ಅರುಣ್ ಭಾರಧ್ವಾಜ್ ಹಾಗೂ ಶೈಲೇಶ್ ಕುಲಕರ್ಣಿ ಸಂವಾದದಲ್ಲಿ ಪಾಲ್ಗೊಂಡರು.