ಸಾರಾಂಶ
ಇಂಡಿಯನ್ ಬ್ಯಾಂಕ್‌ನಿಂದ ಸಹಕಾರಿ ಬ್ಯಾಂಕ್ ಸಮಾವೇಶ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬ್ಯಾಂಕುಗಳು ಪ್ರಸ್ತುತ ಕಾಲಮಾನದಲ್ಲಿ ಸಮುದಾಯವನ್ನು ತಲುಪಲು ಫಿನ್‌ಟೆಕ್, ಸಹಕಾರಿ ಬ್ಯಾಂಕ್ ಹಾಗೂ ತಂತ್ರಜ್ಞಾನದ ಪರಿಣಾಮಕಾರಿ ಪಾಲುದಾರಿಕೆ ಹೊಂದುವುದು ಅಗತ್ಯವಿದೆ ಎಂದು ಇಂಡಿಯನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ಬಜಾಜ್ ತಿಳಿಸಿದರು.ಈಚೆಗೆ ನಗರದಲ್ಲಿ ಇಂಡಿಯನ್ ಬ್ಯಾಂಕ್‌ನಿಂದ ನಡೆದ ‘ಸಹಕಾರಿ ಬ್ಯಾಂಕ್ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಸ್ವದೇಶಿ ಚಳವಳಿಯ ಕಾಲದಿಂದ ಇಂಡಿಯನ್ ಬ್ಯಾಂಕ್ ನಡೆದುಬಂದ ಹಾದಿ ವಿವರಿಸಿದ ಅವರು ಪ್ರಸ್ತುತ ದೇಶದ 7ನೇ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಾಗಿ ಬೆಳೆದಿದೆ. ಕಳೆದ 21 ವರ್ಷದಿಂದ ನಿರಂತರವಾಗಿ ಲಾಭದಾಯಕ ಸ್ಥಿತಿಯೊಂದಿಗೆ ಸ್ಥಿರವಾಗಿದೆ ಎಂದರು.
ಕ್ಷೇತ್ರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್ ಕುಮಾರ್ ಗುಪ್ತಾ, ಹನುಮಂತನಗರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಮೇಗೌಡ, ಶಿರಸಿ ಅರ್ಬನ್ ಬ್ಯಾಂಕ್ ಮುಖ್ಯ ಹಣಕಾಸು ಅಧಿಕಾರಿ ಶ್ರೀಪತಿ ಭಟ್, ಬಾಲುಸ್ಸೆರಿ ಅರ್ಬನ್ ಸಹಕಾರಿ ಬ್ಯಾಂಕ್ ಮುಖ್ಯ ಪ್ರಬಂಧಕ ನಿಧೀಶ್ ಟಿ., ಸೇರಿದಂತೆ 25 ಸಹಕಾರಿ ಬ್ಯಾಂಕ್‌ಗಳಿಂದ 48 ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಇಂಡಿಯನ್ ಸಹಕಾರಿ ಬ್ಯಾಂಕ್ ಸಮಾವೇಶ
ಇಂಡಿಯನ್ ಬ್ಯಾಂಕ್‌ನಿಂದ ‘ಸಹಕಾರಿ ಬ್ಯಾಂಕ್ ಸಮಾವೇಶ’ನಡೆಯಿತು. ಕ್ಷೇತ್ರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್ ಕುಮಾರ್ ಗುಪ್ತಾ, ಹನುಮಂತನಗರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಮೇಗೌಡ, ಶಿರಸಿ ಅರ್ಬನ್ ಬ್ಯಾಂಕ್ ಮುಖ್ಯ ಹಣಕಾಸು ಅಧಿಕಾರಿ ಶ್ರೀಪತಿ ಭಟ್, ಬಾಲುಸ್ಸೆರಿ ಅರ್ಬನ್ ಸಹಕಾರಿ ಬ್ಯಾಂಕ್ ಮುಖ್ಯ ಪ್ರಬಂಧಕ ನಿಧೀಶ್ ಟಿ., ಸೇರಿದಂತೆ 25 ಸಹಕಾರಿ ಬ್ಯಾಂಕ್‌ಗಳಿಂದ 48 ಪ್ರತಿನಿಧಿಗಳು ಪಾಲ್ಗೊಂಡಿದ್ದರು.