ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಧರ್ಮ ಪ್ರಜ್ಞೆ ಹಾಗೂ ಭಾರತೀಯ ನೈಜ ಸಂಸ್ಕೃತಿ ಇಂದಿಗೂ ಈ ನೆಲದಲ್ಲಿ ಊರ್ಜಿತಗೊಳ್ಳುತ್ತಿದ್ದರೇ ಅದಕ್ಕೆ ಕಾರಣ ಇಲ್ಲಿನ ಅಸಂಖ್ಯಾತ ಮಠಮಾನ್ಯಗಳು ಮತ್ತು ಧರ್ಮಗುರುಗಳ ಸಮರ್ಥ ನೇತೃತ್ವ. ಅಲ್ಲದೇ ಪ್ರಾಚೀನ ಋಷಿ ಮುನಿಗಳು ಹಾಗೂ ಮಧ್ಯಯುಗದ ಸಾಧಕರು ಹಾಕಿಕೊಟ್ಟಿರುವ ಸತ್ಯತೆಯಿಂದಲೇ ನಮ್ಮನ್ನು ಮುನ್ನಡೆಸುತ್ತಿರುವ ಗುರು ಸಮೂಹ ಎಲ್ಲ ಬಗೆಯ ಆಕ್ರಮಣಗಳನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದಾರೆ ಎಂದು ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ನುಡಿದರು.ಅಫಜಲಪೂರದ ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾದ ಗುರು ಮಳೇಂದ್ರ ಶಿವಾಚಾರ್ಯ ಸಂಸ್ಥಾನ ಹಿರೇಮಠಕ್ಕೆ ಭೇಟಿ ನೀಡಿ ಅಲ್ಲಿಯ ಷ.ಬ್ರ.ವಿಶ್ವರಾಧ್ಯಮಳೇಂದ್ರ ಶಿವಾಚಾರ್ಯರಿಗೆ ನಮಸ್ಕರಿಸಿ ಅವರು, ಭಕ್ತೋದ್ದಾರ, ಜನೋದ್ದಾರಕ್ಕಾಗಿ ಇತ್ತೀಚಗೆ ಕೈಕೊಂಡ ದುಶ್ಚಟಗಳಿಂದ ದೂರಿಕರಿಸುವ ವಿಚಾರ ಹಾಗೂ ಭಕ್ತರನ್ನು ಉದ್ದರಿಸುವ ಕಾರ್ಯಕ್ಕೆ ಮುಂದಾಗಿರುವುದನ್ನು ಶ್ರೀಗಳ ಮುಂದೆ ಬಣ್ಣಿಸಿದ ಅವರು, ಶ್ರೀಗಳ ಕಾರ್ಯ ವೈಖರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ತಮ್ಮ ಮಠಕ್ಕೆ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಆಗಿಮಿಸಿದ್ದಾರೆಂಬುವುದರ ಕುರಿತು ಸಂತಸ ವ್ಯಕ್ತಪಡಿಸಿದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಖಾಸ್ಗತೇಶ್ವರ ಮಠದ ಇತಿಹಾಸ ಬಿಚ್ಚಿಟ್ಟರಲ್ಲದೇ ಇತ್ತೀಚಗೆ ವೇ.ಮುರುಘೇಶ ವಿರಕ್ತಮಠ ಅವರು ತಮ್ಮ ಪುತ್ರನನ್ನೇ ಖಾಸ್ಗತೇಶ್ವರ ಮಠಕ್ಕೆ ತಮ್ಮ ಏಕೈಕ ಪುತ್ರನನ್ನು ಪೀಠಾಧಿಕಾರಿಯನ್ನಾಗಿ ನೇಮಿಸಿದನ್ನು ಬಣ್ಣಿಸಿದರು. ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ.ವಿರಕ್ತ ಮಹಾಸ್ವಾಮಿಗಳ ಅಪೇಕ್ಷೆಯನ್ನು ಈಡೇರಿಸಿದ್ದಾರೆಂದರು. ಖಾಸ್ಗತೇಶ್ವರ ಮಠದ ಎಲ್ಲ ಜವಾಬ್ದಾರಿಯನ್ನು ವೇ.ಮುರುಘೇಶ ಅವರು ನಡೆಸಿಕೊಂಡು ಸಾಗಿದ್ದರ ಕುರಿತು ಬಾಲ ಶಿವಯೋಗಿ ಸಿದ್ದಲಿಂಗ ದೇವರಿಗೆ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿದ್ದರ ಕುರಿತು ಶ್ರೀಗಳು ಬಣ್ಣಿಸಿದರಲ್ಲದೇ ಸಿದ್ದಲಿಂಗ ದೇವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆಯಾ ಕಾರ್ಯಕ್ರಮಕ್ಕೆ ತಕ್ಕಂತೆ ತಮ್ಮ ಆಶಿರ್ವಚನದಲ್ಲಿ ನುಡಿಯುತ್ತಿರುವುದನ್ನು ನಾನು ಆಲಿಸಿದ್ದೇನೆ. ಅವರಿಗೆ ಖಾಸ್ಗತೇಶ್ವರರ ಆಶೀರ್ವಾದ ಅವರ ಮೇಲಿದೆ. ಅವರು ಸಾಮಾನ್ಯ ವ್ಯಕ್ತಿಯಾಗುವುದಿಲ್ಲ. ಅವರೊಬ್ಬ ಯೋಗಿಯೇ ಆಗುತ್ತಾರೆ ಎಂದರು.
ಅಫಜಲಪೂರ ಹಿರೇಮಠದ ವಿಶ್ವರಾಧ್ಯಮಳೇಂದ್ರ ಶಿವಾಚಾರ್ಯರು ೧೯ನೇ ಪೀಠಾಧಿಪತಿಗಳಾಗಿದ್ದು ಸುಮಾರು ೧೨೦ಕ್ಕೂ ಹೆಚ್ಚು ಗ್ರಾಮಗಳು ಶ್ರೀಗಳ ಮಠಕ್ಕೆ ಒಳಗೊಂಡಿವೆ ಸುಮಾರು ೫೦ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಹೊಂದಿದ್ದಾರಲ್ಲದೇ ಶ್ರೀಮಠವೂ ಕೂಡಾ, ಉಜ್ಜಯಿನಿ ಶಾಖಾ ಮಠವೂ ಕೂಡಾ ಇದಾಗಿದೆ ಎಂದು ವೇ.ಮುರುಘೇಶ ವಿರಕ್ತಮಠ ಅವರು ತಮಗೆ ತಿಳಿದಿರುವಷ್ಟು ಅಫಜಲಪೂರ ಶ್ರೀಮಠದ ನಡೆದುಬಂದ ಕಾರ್ಯ ವೈಖರ್ಯಗಳ ಕುರಿತು ಸಹ ಘಂಟೆ ಕಾಲ ಚರ್ಚಿಸಿದರು.ಇದೇ ಸಮಯದಲ್ಲಿ ಶ್ರೀಮಠಕ್ಕೆ ಆಗಮಿಸಿದ ವೇ.ಮುರುಘೇಶ ವಿರಕ್ತಮಠ ಅವರನ್ನು ಹಾಗೂ ಭಕ್ತರಾದ ಹಣಮೇಶ ಜೈನಾಪೂರ, ಸಿದ್ದನಗೌಡ ಓತಿಹಾಳ, ಶಶಿಕುಮಾರ ಸಜ್ಜನ ಅವರನ್ನು ಸನ್ಮಾನಿಸಿ ಗೌರವಿಸಿದರು.