ಕುಕನೂರು: ಬಿಜೆಪಿಯದ್ದು ಭಾರತದ ರಾಷ್ಟ್ರೀಯತೆಯ ದೃಷ್ಟಿಕೋನ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲದಲ್ಲಿ ಜರುಗಿದ ಪಂಡಿತ ದೀನ ದಯಾಳ ಪ್ರಶಿಕ್ಷಣ ವರ್ಗ ಮಹಾಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿ ಆಗಬೇಕು. ಅಂದಾಗ ಮಾತ್ರ ರಾಷ್ಟ್ರಾಭಿವೃದ್ಧಿ ಸಾಧ್ಯ. ದೇಶವನ್ನು ಮುನ್ನೆಡೆಸಲು ಆತ್ಮಬಲ, ಸಂಘಟನೆ ಬಲ ಸದಾ ಇರಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೀಯತೆ ದೃಷ್ಟಿಕೋನದಿಂದ ಭಾರತದಲ್ಲಿ ಬಿಜೆಪಿ ಮಹತ್ತರ ಹೆಜ್ಜೆ ಇಟ್ಟಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ದೀನದಯಾಳ್ ಉಪಾಧ್ಯಾಯರು ಬಿಜೆಪಿ ಬಲವರ್ಧನೆಗೆ ಶ್ರಮಿಸಿದರು. ಅವರ ಶ್ರಮ ಇಂದು ಹೆಮ್ಮರವಾಗಿ ಬೆಳೆದು ವಿಶ್ವದಲ್ಲಿ ಬಿಜೆಪಿ ಉನ್ನತ ಪಕ್ಷವಾಗಿ ಹೊರಹೊಮ್ಮಿದೆ ಎಂದರು.ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ರಾಜೂರು, ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಬಿಜೆಪಿ ಮುಖಂಡರಾದ ಹಂಚ್ಯಾಳಪ್ಪ ತಳವಾರ, ಶಿವಲೀಲಾ ದಳವಾಯಿ, ವೀರಣ್ಣ ಅಂಗಡಿ, ಅಯ್ಯನಗೌಡ ಕೆಂಚಮ್ಮನವರ, ಮಂಜುನಾಥ ನಾಡಗೌಡರ, ಶಿವಶಂಕರ ದೇಸಾಯಿ, ಶಂಭಣ್ಣ ಜೋಳದ, ಶಿವಕುಮಾರ ನಾಗಲಾಪೂರಮಠ, ಹಾಗೂ ಕಾರ್ಯಕರ್ತರು ಇದ್ದರು.