ಇಂದಿರಾ ಕ್ಯಾಂಟೀನ್‌ ಸುಳ್ಳು ಲೆಕ್ಕ ಕಡಿವಾಣಕ್ಕೆ ಡಿಜಿಟಲ್‌ ಬಿಲ್‌ ಜಾರಿ

| Published : Aug 14 2024, 01:22 AM IST

ಇಂದಿರಾ ಕ್ಯಾಂಟೀನ್‌ ಸುಳ್ಳು ಲೆಕ್ಕ ಕಡಿವಾಣಕ್ಕೆ ಡಿಜಿಟಲ್‌ ಬಿಲ್‌ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿರಾ ಕ್ಯಾಂಟೀನ್‌ನಲ್ಲಿ ಸುಳ್ಳು ಊಟದ ಲೆಕ್ಕ ಕೊಡುವ ಗುತ್ತಿಗೆ ಕಂಪನಿಗಳಿಗೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದೆ. ಕ್ಯಾಂಟೀನ್‌ಗಳಲ್ಲಿ ಡಿಜಿಟಲ್‌ ಬಿಲ್‌ ಆರಂಭಸಲು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಗೆ ವಿತರಿಸುವ ಆಹಾರದ ಸುಳ್ಳು ಲೆಕ್ಕಕ್ಕೆ ಕಡಿವಾಣ ಹಾಕು ನಿಟ್ಟಿನಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಮೊದಲ ಹಂತದಲ್ಲಿ ಆರ್‌ ಆರ್‌. ನಗರ ವಿಧಾನಸಭಾ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ ನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಜ್ಜಾಗಿದೆ.

ಅಲ್ಲಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ, ಗುತ್ತಿಗೆದಾರರ ಸಮಸ್ಯೆಗಳು, ಶುಚಿತ್ವ, ಬೇಡಿಕೆ ಕುರಿತು ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಲು ಪಾಲಿಕೆ ಆಲೋಚನೆ ನಡೆಸಿದೆ.

ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 11 ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಇಲ್ಲಿನ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಮಾಹಿತಿಯನ್ನು ಕಲೆಹಾಕಲಿದೆ. ಒಂದು ವೇಳೆ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದರೆ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಆರ್ಡರ್ ಪ್ರಕ್ರಿಯೆ ವ್ಯವಸ್ಥೆ ಚಾಲನೆಗೆ ಬರುವ ನಿರೀಕ್ಷೆಯಿದೆ.

ನೂತನ ವ್ಯವಸ್ಥೆ ಜಾರಿಯಿಂದ ಆಹಾರದ ಬೇಡಿಕೆ, ಗುಣಮಟ್ಟ, ಗ್ರಾಹಕರ ಅನಿಸಿಕೆ ಸಂಗ್ರಹಕ್ಕೆ ಅನುಕೂಲವಾಗಲಿದೆ. ಗ್ರಾಹಕರು ಆರ್ಡರ್ ಮಾಡಿದರೆ ಅದು ಪ್ರಧಾನ ಕಚೇರಿಗೂ ಆರ್ಡರ್ ಮಾಹಿತಿ ರವಾನೆ ಆಗಲಿದೆ. ಇಂದಿರಾ ಕ್ಯಾಂಟೀನ್‌ಗಳ ಕಾರ್ಯನಿರ್ವಹಣೆ ಮಾಹಿತಿ ಸಿಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.