ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿರಾ ಗಾಂಧಿ ಕಟ್ಟೆ ಅಭಿವೃದ್ಧಿಗೊಳಿಸಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪ್ರತಿಮೆ ಅನಾವರಣವನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವುದಕ್ಕೆ ವಿಜಯನಗರ ಜಿಲ್ಲೆಯ ಪ್ರಗತಿಪರ ಚಿಂತಕರು, ರೈತಪರ, ದಲಿತಪರ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.ಇಂದಿರಾ ಗಾಂಧಿ ಅವರು ಎಪ್ಪತ್ತರ ದಶಕದಲ್ಲಿ ಹೊಸಪೇಟೆ ನಗರಕ್ಕೆ ಆಗಮಿಸಿದಾಗ ಈ ಭಾಗದ ಅಭಿವೃದ್ಧಿಗಾಗಿ ವಿಜಯನಗರ ಉಕ್ಕು ಕಾರ್ಖಾನೆಗೆ ಶಿಲಾನ್ಯಾಸ ಮಾಡಿದ್ದರು. ಅದೇ ವಿಜಯನಗರ ಉಕ್ಕು ಕಾರ್ಖಾನೆ ಇಂದು ಜಿಂದಾಲ್ ಉಕ್ಕು ಸಂಸ್ಥೆ ಜೆ.ಎಸ್.ಡಬ್ಲೂ. ಕಾರ್ಖಾನೆಯಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿದೆ ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿದ್ದಾಗ ದೇಶದ ಜನರಿಗೆ ಇಪ್ಪತ್ತು ಅಂಶಗಳ ಕಾರ್ಯಕ್ರಮ ನೀಡಿ ಉಳುವವನೆ ಭೂಮಿಯ ಒಡೆಯ ಎಂದು ಘೋಷಣೆಮಾಡಿ ಹಲವಾರು ಬಡ ಕೃಷಿಕರಿಗೆ ಭೂಮಿ ಸಿಗುವಂತೆ ಮಾಡಿದರು. ಪ್ರಮುಖವಾಗಿ ಸರ್ವರಿಗೂ ಶಿಕ್ಷಣ ಸಿಗುವಂತೆ ಕಡ್ಡಾಯ ಶಿಕ್ಷಣ ಘೋಷಣೆ ಮಾಡಿ ದೇಶದ ಕೋಟ್ಯಂತರ ದಲಿತ ಸಮುದಾಯಕ್ಕೆ ಅಕ್ಷರ ಜ್ಞಾನ ನೀಡಿದ ಉಕ್ಕಿನ ಮಹಿಳೆ ನಿಜವಾದ ದುರ್ಗಾಮಾತೆಯಾಗಿದ್ದರು ಎಂದು ಚಿಂತಕರು ತಿಳಿಸಿದರು.
ಈ ಐತಿಹಾಸಿಕ ಕಟ್ಟಡಕ್ಕೆ ಜೀವ ಕಳೆ ತುಂಬಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್, ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಹುಡಾ ಅಧ್ಯಕ್ಷ ಎಚ್ ಎನ್ ಎಫ್ ಇಮಾಮ್ ನಿಯಾಜಿ ಹಾಗೂ ಈ ಕಟ್ಟೆಗೆ ಅಧಿಕೃತವಾಗಿ ಇಂದಿರಾ ಗಾಂಧಿ ಕಟ್ಟೆ ಎಂದು ಘೋಷಣೆ ಮಾಡಿ ಠರಾವು ಪಾಸ್ ಮಾಡಿದ ಹೊಸಪೇಟೆ ನಗರಸಭೆಯ ಎಲ್ಲಾ ಸದಸ್ಯರಿಗೆ ಮತ್ತು ಈ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಕೂಡ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಶ್ಲಾಘಿಸಿದೆ.ವಿಜಯನಗರ ಜಿಲ್ಲಾ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂಘ, ಹೊಸಪೇಟೆ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ವಿದ್ಯಾರ್ಥಿ ಯುವಜನ ಸಂಘಟನೆಗಳು, ದಲಿತಪರ ಸಂಘಟನೆಗಳ ಮುಖಂಡರಾದ ಸೋಮಶೇಖರ್ ಬಣ್ಣದಮನೆ, ಸೂರ್ಯನಾರಾಯಣ, ಸಣ್ಣಮಾರೆಪ್ಪ, ಯರ್ರಿಸ್ವಾಮಿ, ವಾಸುದೇವ್, ಇಂತಿಯಾಜ್, ಸಣ್ಣ ಈರಪ್ಪ, ರಾಮಚಂದ್ರ, ವಿನಾಯಕ ಶೆಟ್ಟರ್, ಶಿವಕುಮಾರ್, ಜಯಣ್ಣ ಪಟ್ಟಿ, ಪ್ರಮೋದ್ ಶೆಟ್ಟಿ, ಗಿರೀಶ್, ಪ್ರಕಾಶ್, ಪಂಪಣ್ಣ, ಹನುಮಂತಪ್ಪ, ಸಜ್ಜಾದ್ ಖಾನ್, ಖಾಜಾ ಹುಸೇನ್,
ಶಿವಕುಮಾರ್ ಮತ್ತು ಮಹಾಂತೇಶ್ ಮತ್ತಿತರರಿದ್ದರು.