ಇಂದಿರಾಗಾಂಧಿ 108ನೇ ಜನ್ಮ ಜಯಂತಿ ಆಚರಣೆ

| Published : Nov 20 2025, 12:00 AM IST

ಸಾರಾಂಶ

ಇಂದಿರಾಗಾಂಧಿ ಅವರ 108 ನೇ ಜನ್ಮಜಯಂತಿ ಕಾರ್ಯಕ್ರಮ ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಮರಳೂರಿನ ಎಸ್.ಎಸ್.ಐ.ಟಿ ಹಿಂಭಾಗದಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 108 ನೇ ಜನ್ಮಜಯಂತಿ ಕಾರ್ಯಕ್ರಮ ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಇಂದಿರಾಗಾಂಧಿ ಯವರ ಆಡಳಿತದ ಕಾಲಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳು, ಅದರಿಂದ ಜನರಿಗಾದ ಅನುಕೂಲಗಳ ಕುರಿತು ಗುಣಗಾನ ಮಾಡಿದರು.ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ, ತಮ್ಮ ಹುಟ್ಟಿನಿಂದ ಜೀವಿತದ ಅವಧಿಯವರೆಗೂ ಭಾರತಕ್ಕಾಗಿ ದುಡಿದು, ಮಡಿದವರು ಇಂದಿರಾಗಾಂಧಿ. ಅವರು ಜಾರಿಗೆ ತಂದ ಗರೀಬಿ ಹಠಾವೋ, 20 ಅಂಶಗಳ ಕಾರ್ಯಕ್ರಮಗಳು ಭಾರತದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಿ,ದೇಶದ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಕೈಗಾರಿಕೆಯಲ್ಲಿ ಅಭಿವೃದ್ದಿ ಹೊಂದಲು ಭದ್ರ ಬುನಾದಿಯನ್ನು ಹಾಕಿದರು ಎಂದರು.ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೂ, ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಕಾರ್ಪೋರೇಟ್ ನೀತಿಗಳಿಂದ ಮೋದಿ ದೇಶವನ್ನು ಅದೋಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ.ಇದರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗೂಡಿ ಪ್ರತಿಭಟಿಸಬೇಕಾಗಿದೆ ಎಂದರು.ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ, ಭಕ್ತರಿಂದ ವಿಶ್ವಗುರು ಎಂದು ಕರೆಯಿಸಿಕೊಳ್ಳುವ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೂ, ವಿರೋಧಪಕ್ಷದ ನಾಯಕರಿಂದಲೇ ದುರ್ಗಿಯ ಅವತಾರ ಎಂದು ಕರೆಯಿಸಿಕೊಂಡ ಇಂದಿರಾಗಾಂಧಿ ಅವರ ಆಡಳಿತಕ್ಕೂ ಸಾಕಷ್ಟು ವ್ಯತ್ಯಾಸವಿದೆ.ಅಮೇರಿಕಾದ ಬ್ಲಾಕ್ ಮೇಲ್‌ ತಂತ್ರಕ್ಕೆ ಎಂದಿಗೂ ಬಗ್ಗದ ಇಂದಿರಾ, ಬಾಂಗ್ಲಾ ವಿಭಜನೆ ವೇಳೆ ಅಮೇರಿಕದ ಬೆದರಿಕೆಗೆ ಹೆದರದೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ, ಬಾಂಗ್ಲಾ ಉದಯಕ್ಕೆ ಕಾರಣರಾದರು ಎಂದರು.ಮುಖಂಡರಾದ ಅಸ್ಲಾಂ ಪಾಷ ಮಾತನಾಡಿ, ದೇಶದಲ್ಲಿ ಬಡತನವನ್ನು ನೀಗಿಸಬೇಕು ಎಂಬ ಕಾರಣಕ್ಕೆ ವಿದೇಶದಿಂದ ಕೆಂಪು ಜೋಳ ತಂದು ನೀಡುವ ಮೂಲಕ ಹಸಿವು ನೀಗಿಸಿದರು. ವಿಧವಾ ವೇತನ, ವೃದ್ದಾಪ್ಯ ವೇತನದಂತಹ ಮಾಶಾಸನಗಳ ಮೂಲಕ ಅಶಕ್ತರು, ಬಡವರಿಗೆ ಸಹಾಯ ಹಸ್ತ ಚಾಚಿದ್ದು ಇಂದಿರಾಗಾಂಧಿ, ಪಕ್ಷಅಧಿಕಾರದಲ್ಲಿದ್ದಾಗ ಪಕ್ಷಕ್ಕಾಗಿದುಡಿದ ಹಿರಿಯರಿಗೆ ಸ್ಥಾನಮಾನ ಸಿಗಬೇಕೆಂದರು. ಮುಖಂಡರಾದ ವಾಲೆಚಂದ್ರಯ್ಯ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಚಂ ದ್ರಶೇಖರಗೌಡ ಮಾತನಾಡಿ, ಇಂದು ಭಾರತ ಪ್ರಪಂಚದ 3ನೇ ದೊಡ್ಡ ಅರ್ಥಿಕ ಶಕ್ತಿಯಾಗಿ ರೂಪಗೊಂಡಿದ್ದರೆ, ಇದಕ್ಕೆಕಾರಣ ಕಾಂಗ್ರೆಸ್ ಪಕ್ಷದ ಆಡಳಿತ. ಒಂದು ಗುಂಡು ಸೂಜಿಗೂ ವಿದೇಶದಕಡೆಗೆ ನೋಡಬೇಕಿದ್ದ ಕಾಲದಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ಆಹಾರ, ಶಿಕ್ಷಣ, ಕೈಗಾರಿಕಾ, ಹೈನುಗಾರಿಕೆಗಳ ಮೂಲಕ ದೇಶಕ್ಕೆ ಭದ್ರ ಬುನಾದಿ ಹಾಕಿದರು ಎಂದರು.ಮುಖಂಡರಾದ ರೇವಣ್ಣ ಸಿದ್ದಯ್ಯ ಇಂದಿರಾಗಾಂಧಿಅವರ ಆಡಳಿತ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್.ಸಿ.ಹನುಮಂತಯ್ಯ,ಕೆಂಪಣ್ಣ, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಮಹೇಶ್,ಬಿ.ಎಸ್.ದಿನೇಶ್, ಸೇವಾದಳದ ಶಿವಪ್ರಸಾದ್, ಅಮ್ಜಾದ್ ವುಲ್ಲಾ,ಮಹಮದ್ ಮುಜಾಹಿದ್,ದೀಪಕ್, ಮಂಜುನಾಥ್,ಶಿವಾಜಿ, ಮೆಹಬೂಬ್ ಪಾಷ, ಆಟೋರಾಜು, ಮೊಹಮ್ಮದ್ ಜೈದ್ಮುಬೀನಾಭಾನು, ಸೌಭಾಗ್ಯ, ಸುಜಾತ, ಯಶೋಧ, ಭಾಗ್ಯ, ನಟರಾಜಶೆಟ್ಟರು, ಮುರುಳಿ, ಸುಲ್ತಾನ್, ಆದಿಲ್, ಲಕ್ಷ್ಮಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.