ಕೊಳ್ಳೇಗಾಲದಲ್ಲಿ ಪ್ರಥಮ ಬಾರಿಗೆ ಇಂಡೋರ್ ಕರಾಟೆ ಕ್ಲಾಸ್ ಆರಂಭ

| Published : Nov 03 2025, 01:45 AM IST

ಕೊಳ್ಳೇಗಾಲದಲ್ಲಿ ಪ್ರಥಮ ಬಾರಿಗೆ ಇಂಡೋರ್ ಕರಾಟೆ ಕ್ಲಾಸ್ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ತರಗತಿ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಾಧ್ಯಾಪಕ ಪುಟ್ಟಸ್ವಾಮಿ, ಜಿಲ್ಲೆಯಲ್ಲಿ ಪ್ರಥಮವಾಗಿ ಕೊಳ್ಳೇಗಾಲದಲ್ಲಿ ಕರಾಟೆ ಇಂಡೋರ್ ಕ್ಲಾಸ್ ತರಬೇತಿ ಪ್ರಾರಂಭವಾಗಿರುವುದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಂತಸ ತಂದಿದೆ.

ಕೊಳ್ಳೇಗಾಲ: ಅಶುತೋಷ್ ಆರ್ಟ್ಸ್ ಆ್ಯಂಡ್ ಫಿಟ್ನೆಸ್ ಸೊಸೈಟಿ ಇವರ ಸಹಯೋಗದಿಂದ ಕೊಳ್ಳೇಗಾಲದಲ್ಲಿ ಪ್ರಪ್ರಥಮ ಬಾರಿಗೆ

ಕರಾಟೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇಂಡೋರ್ ಕರಾಟೆ ತರಬೇತಿ ತರಗತಿ ಭಾನುವಾರ ಪ್ರಾರಂಭಿಸಲಾಗಿದೆ.

ಕೊಳ್ಳೇಗಾಲದ ಮಕ್ಕಳಿಗಾಗಿ ಹೆಚ್ಚಿನ ಕರಾಟೆ ತರಬೇತಿಯ ಅವಶ್ಯಕತೆ ಇದ್ದು, ಅದನ್ನು ಅರಿತ ಮಾಸ್ಟರ್ ಕರಾಟೆ ಅಕಾಡೆಮಿ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನ್ ಚಾಮರಾಜನಗರ ಅಧ್ಯಕ್ಷ, ಕರಾಟೆ ಶಿಕ್ಷಕ ಕೆ. ನಂಜುಂಡಸ್ವಾಮಿ ಅವರು ಇಂಡೋರ್ ಕ್ಲಾಸ್ ಪ್ರಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ತರಗತಿ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಾಧ್ಯಾಪಕ ಪುಟ್ಟಸ್ವಾಮಿ, ಜಿಲ್ಲೆಯಲ್ಲಿ ಪ್ರಥಮವಾಗಿ ಕೊಳ್ಳೇಗಾಲದಲ್ಲಿ ಕರಾಟೆ ಇಂಡೋರ್ ಕ್ಲಾಸ್ ತರಬೇತಿ ಪ್ರಾರಂಭವಾಗಿರುವುದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಂತಸ ತಂದಿದೆ ಎಂದರು.

ಆತ್ಮರಕ್ಷಣೆಗಾಗಿ ಕರಾಟೆ ಅವಶ್ಯ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕರಾಟೆ ಕಲೆಯನ್ನು ಕಲಿಯಬೇಕು, ಇದರಿಂದ ಸಾಕಷ್ಟು ಅನುಕೂಲಗಳಿವೆ,

ದೇಹದ ಸದೃಢತೆ ,ಆತ್ಮಸ್ಥೈರ್ಯ, ಜ್ಞಾಪಕ ಶಕ್ತಿ, ಶಿಸ್ತು, ಆತ್ಮ ರಕ್ಷಣೆ, ಆರೋಗ್ಯ, ಏಕಾಗ್ರತೆ ಎಲ್ಲವೂ ಕರಾಟೆ ಕಲಿಕೆಯಿಂದ ಸಾಧ್ಯ ಎಂದರು.

ಮೀನು ಉತ್ಪಾದನಾ ಕೇಂದ್ರದ ನಟರಾಜು, ಎಚ್. ಡಿ. ಕೋಟೆಯ ಅಶುತೋಷ್ ಆರ್ಟ್ಸ್ ಆ್ಯಂಡ್ ಫಿಟ್ನೆಸ್ ಅಧ್ಯಕ್ಷ ನವೀನ್ ಜೆ. ವರ್ಮ,

ಕಲಾವಿದ ಲೋಕೇಶ್, ಮಲ್ಲೇಶ್, ವಿಜಯಕುಮಾರ್, ಶಾಂತಕುಮಾರ್, ಜೆಸಿಬಿ ರಘು, ಬೃಂದಾ ಜ್ಯೂವೆಲ್ಲರಿ ಲೋಕೇಶ್, ಸಲೀಂ, ವಿನೋದ್ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.