ಮಡಿಕೇರಿ: ಕೈಗಾರಿಕಾ ಜಾಗೃತಿ ಶಿಬಿರ

| Published : Dec 21 2024, 01:17 AM IST

ಸಾರಾಂಶ

ಒಂದು ದಿನದ ಕೈಗಾರಿಕಾ ಜಾಗೃತಿ ಶಿಬಿರ ನಡೆಯಿತು. ಸಮುದಾಯಕ್ಕೆ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ಒದಗಿಲಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆಯ ಮಂತ್ರಾಲಯದ ಆಶ್ರಯದಲ್ಲಿ ಎಂಎಸ್ಎಂಇ ಮಂಗಳೂರು ಘಟಕದ ಆಶ್ರಯದಲ್ಲಿ ಒಂದು ದಿನದ ಕೈಗಾರಿಕಾ ಜಾಗೃತಿ ಶಿಬಿರ ಏರ್ಪಡಿಸಲಾಯಿತು.

ಮಡಿಕೇರಿಯಲ್ಲಿ ನಡೆದ ಶಿಬಿರದಲ್ಲಿ ಬುಡಕಟ್ಟು ಜನಾಂಗ ನಾಯಕ ಬಿರ್ಸಾಮುಂಡ ಅವರ ಜನ್ಮದಿನಾಚರಣೆ ಅಂಗವಾಗಿ ಈ ಶಿಬಿರವನ್ನು ಏರ್ಪಡಿಸಲಾಗಿದ್ದು ಶಿಬಿರದಲ್ಲಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಸುಮನ್ ಎಸ್ ರಾಜು ಮಡಿಕೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ನಟರಾಜ್ ಮತ್ತಿತರರು ಪಾಲ್ಗೊಂಡು ಶಿಬಿರಕ್ಕೆ ಚಾಲನೆ ನೀಡಿದರು.

ಉಪನಿರ್ದೇಶಕರಾದ ನಟರಾಜ್, ಇಲಾಖೆಯ ವತಿಯಿಂದ ಬುಡಕಟ್ಟು ಸಮುದಾಯಕ್ಕೆ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು.

ಸಹಾಯಕ ನಿರ್ದೇಶಕಿ ಸುಮನ್ ಎಸ್ ರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರು ದಿನದ ಮಹತ್ವ ಹಾಗೂ ಆರೋಗ್ಯ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಮೂಡಾ ನಿರ್ದೇಶಕಿ ಮಿನಾಜ್ ಪ್ರವೀಣ್ ಪ್ರಮುಖರಾದ ನಜ್ಮಾ ಇದ್ದರು.

ಜಿಲ್ಲೆಯ ಸುಮಾರು 90 ಕ್ಕೂ ಅಧಿಕ ಬುಡಕಟ್ಟು ಸಮುದಾಯದ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಸಂಸ್ಥೆಯ ಮುತ್ತಪ್ಪ ಪ್ರಾರ್ಥಿಸಿದರು. ವಿನುತಾ ವಂದಿಸಿದರು.