ವೈದ್ಯರ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವಿಗೀಡಾಗಿದೆ ಎಂದು ವೈದ್ಯರ ವಿರುದ್ಧ ಪೋಷಕರು ಆರೋಪಿಸಿದ್ದಾರೆ.

ಮಡಿಕೇರಿ: ವೈದ್ಯರ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾಬಿಗೀಡಾಗಿದೆ ಎಂದು ವೈದ್ಯರ ವಿರುದ್ಧ ಪೋಷಕರು ಆರೋಪಿಸಿದ್ದಾರೆ. ಮಡಿಕೇರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ರಾತ್ರಿ ಪಾಳಿಯಲ್ಲಿದ್ದ ವೈದ್ಯರ ವಿರುದ್ಧ ಪೋಷಕರ ಆರೋಪ ಮಾಡಿದ್ದಾರೆ. ಬುಧವಾರ ಸಂಜೆ ಗೋಣಿಕೊಪ್ಪಲು ಸರ್ಕಾರಿ‌ ಆಸ್ಪತ್ರೆಯಿಂದ ಆಗಮಿಸಿದ್ದ ಗರ್ಭಿಣಿ ಸರೋಜ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆ ದಾಖಲಾಗಿದ್ದರು. ರಾತ್ರಿ ಪಾಳಿಯಲ್ಲಿದ್ದ ಹಿರಿಯ ವೈದ್ಯರು ಬೆಳಗ್ಗೆವರೆಗೂ ಗರ್ಭಿಣಿಯನ್ನು ಪರೀಕ್ಷಿಸಲಿಲ್ಲ. ಇದರಿಂದಲೇ ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಎಚ್ಒಡಿ ಡಾ. ಸೋಮಶೇಖರ್ ಆಗಮಿಸಿದ ಸಂದರ್ಭ ಪೋಷಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವೈದ್ಯರ ವಿರುದ್ಧ ತನಿಖೆ‌ ಮಾಡಿ ಕ್ರಮ‌ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.