ಸಾರಾಂಶ
- ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಶಿಕ್ಷಾರ್ಹ ಅಪರಾಧ ಪೋಸ್ಟರ್ ಬಿಡುಗಡೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹೆಣ್ಣು ಭ್ರೂಣ ಹತ್ಯೆ ಪ್ರಕರಣ ಕಂಡು ಬಂದರೆ ಸಾರ್ವಜನಿಕರು ಸಹಾಯವಾಣಿ (ದೂರವಾಣಿ ಸಂಖ್ಯೆ 08262-295750)ಗೆ ಮಾಹಿತಿ ನೀಡುವ ಮೂಲಕ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಸಂತೋಷ್ ನೇತಾ ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರ ತಂದ ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧ ಎಂಬ ಪೋಸ್ಟರ್‌ನ್ನು ನಗರದ ಸ್ಪಂದನ ಆಸ್ಪತ್ರೆಯಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು.ಕಳೆದ 10 ವರ್ಷಗಳ ಹಿಂದೆ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಆದರೆ, ಈಗ 1000 ಪುರುಷರ ಸಂಖ್ಯೆಗೆ 970 ಮಹಿಳೆಯರ ಸಂಖ್ಯೆ ಇದ್ದು, ಇದು ನಾಗರಿಕರಾದ ನಾವು ತಲೆ ತಗ್ಗಿಸುವ ವಿಚಾರ. ಇದಕ್ಕೆ ಸೂಕ್ತ ಪರಿಹಾರ ಕಂಡು ಕೊಳ್ಳಲು ಸಲಹಾ ಸಮಿತಿ ರಚಿಸಿ, ಬೇರೆ ರೂಪದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ಧರಿಸಲಾಗಿದೆ. ಹಣ್ಣು ಭ್ರೂಣ ಹತ್ಯೆ ತಡೆಯಲು ಬದಲಾವಣೆ ತರಬೇಕೆಂಬುದು ಸಲಹಾ ಸಮಿತಿ ಉದ್ದೇಶ ಎಂದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ನಾಲ್ಕು ಡಿಜಿಟ್ ಇರುವ ಸಂಖ್ಯೆಯನ್ನು ಭ್ರೂಣ ಹತ್ಯೆ ಪ್ರಕರಣ ಪತ್ತೆ ಹಚ್ಚಲು ಬಳಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಈ ರೀತಿ ಪ್ರಕರಣಗಳು ನಡೆದರೆ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಸಮಯ ನಿಗಧಿ ಮಾಡಿ, ಯಾವುದೇ ಸ್ಕ್ಯಾನಿಂಗ್ ಸೆಂಟರ್, ಆಸ್ಪತ್ರೆ, ಕ್ಲಿನಿಕ್‌ಗಳ ಬಗ್ಗೆ ಅನುಮಾನವಿದ್ದರೆ ಈ ಮೇಲ್ಕಂಡ ಸಹಾಯ ವಾಣಿಗೆ ದೂರು ನೀಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅವರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸ ಲಾಗುವುದು. ದೂರು ನೀಡಿದ ಸ್ಥಳದಲ್ಲಿ ಘಟನೆ ನಡೆದಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿ ಯಾಗುತ್ತದೆ. ಇದಕ್ಕೆ ಸಾರ್ವಜನಿಕರು ಸಮಿತಿಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಮುಂದಿನ 5 ವರ್ಷಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕನಿಷ್ಠ ಒಂದು ಸಾವಿರಕ್ಕೆ ತರಬೇಕೆಂದು ಸಲಹಾ ಸಮಿತಿ ಗುರಿ ಹೊಂದಿದೆ. ಹೆಣ್ಣು ಭ್ರೂಣ ಹತ್ಯೆಯ ಖಚಿತ ಮಾಹಿತಿ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು,ಇದಕ್ಕೆ ದಂಡ ರೂಪದಲ್ಲಿ ಶಿಕ್ಷೆ, ಪದೇ ಪದೇ ಪ್ರಕರಣ ನಡೆದರೆ ಜೈಲು ವಾಸ ವ್ಯವಸ್ಥೆ ಕಾನೂನಿನಲ್ಲಿದೆ. ಯಾವ ವೈದ್ಯರು, ವೈದ್ಯೇತರ ಸಿಬ್ಬಂದಿ ಹೆಣ್ಣು ಭ್ರೂಣ ಪತ್ತೆ ಮಾಡಬಾರದೆಂದು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಎಚ್ಚರಿಕೆ ನೀಡಿದರು.ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುವುದರಿಂದ ಕೀರ್ತಿ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸಗಳಾಗಬೇಕು. ಈ ಕಾರ್ಯದಲ್ಲಿ ಸರ್ವರೂ ಸಹಕರಿಸಿದಾಗ ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಧ್ಯ. ಆಗ ಮಾತ್ರ ನಿಯಂತ್ರಣ ಮಾಡಬಹುದಾಗಿದೆ ಎಂದರು.
ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿ ಅಧ್ಯಕ್ಷ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಶಶಿಕಲಾ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ಕೆಲವು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ನೆಲಮಂಗಲ, ಮಂಡ್ಯ ಇಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿದ್ದನ್ನು ಪತ್ತೆ ಮಾಡಿ ಕೇಸು ದಾಖಲಿಸಲಾಗಿದೆ ಎಂದರು.2011ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 1,000 ಪುರುಷರಿಗೆ 1,008 ಮಹಿಳೆಯರಿದ್ದರು. ಆದರೆ, ಕಳೆದ 4 ವರ್ಷಗಳಿಂದ ಜನರಲ್ಲಿ ಅರಿವು ಮೂಡಿಸಿದ ಪರಿಣಾಮ ಗಣನೀಯವಾಗಿ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 59 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ವರ್ಷಕ್ಕೆ 3 ಬಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದೇವೆ. ಆರೋಗ್ಯಇಲಾಖೆ ಮಾನದಂಡಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಲಹಾ ಸಮಿತಿ ಉಪಾಧ್ಯಕ್ಷ ಎಂ.ಎಲ್. ರಘುನಂದನ್, ಸದಸ್ಯರಾದ ವಿನಯ್, ಪ್ರಕಾಶ್, ಡಾ.ಅನುರಾಧ ಪ್ಯಾಟ್ರಿಕ್, ಕಾವ್ಯ ಸಂತೋಷ್, ಬಿ.ಎಲ್. ಪ್ರವೀಣ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿ ಸದಸ್ಯರಾದ ಡಾ.ಪಾಂಡುರಂಗಯ್ಯ, ಡಾ. ಜಯಲಕ್ಷ್ಮಿ, ಡಾ. ವಿನಯ್, ಡಾ. ಸಚಿನ್, ಸುಧೀರ್, ಹರ್ಷ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 16 ಕೆಸಿಕೆಎಂ 5ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರತಂದ ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧ ಎಂಬ ಪೋಸ್ಟರ್‌ನ್ನು ಚಿಕ್ಕಮಗಳೂರಿನ ಸ್ಪಂದನ ಆಸ್ಪತ್ರೆಯಲ್ಲಿ ಡಾ. ಸಂತೋಷ್ ನೇತಾ ಗುರುವಾರ ಬಿಡುಗಡೆ ಮಾಡಿದರು. ಡಾ.ಎಂ. ಶಶಿಕಲಾ, ಕಾವ್ಯ ಸಂತೋಷ್, ಡಾ. ವಿನಯ್, ರಘುನಂದನ್ ಇದ್ದರು.)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))