ಕೊಕ್ಕೋ ಪ್ರೂನಿಂಗ್, ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ

| Published : Feb 06 2024, 01:39 AM IST / Updated: Feb 06 2024, 04:50 PM IST

WorkShop
ಕೊಕ್ಕೋ ಪ್ರೂನಿಂಗ್, ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಪೆರಾಜೆ ಗ್ರಾಮ ಪಂಚಾಯಿತಿಯ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ರೈತ ಸದಸ್ಯರ ತೋಟಗಳಲ್ಲಿ ಕೊಕ್ಕೋ ಪ್ರೂನಿಂಗ್ (ಸವರುವಿಕೆ) ಮತ್ತು ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪೆರಾಜೆ ಗ್ರಾಮ ಪಂಚಾಯಿತಿಯ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ರೈತ ಸದಸ್ಯರ ತೋಟಗಳಲ್ಲಿ ಕೊಕ್ಕೋ ಪ್ರೂನಿಂಗ್ (ಸವರುವಿಕೆ) ಮತ್ತು ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಬಿ. ಅವರು ವಹಿಸಿ ‘ಅಡಕೆ ಹಳದಿ ರೋಗದಿಂದ ಸಮಸ್ಯೆಗೊಳಗಾದ ನಾವುಗಳು ಪ್ರಮುಖ ಪರ್ಯಾಯ ಬೆಳೆಯಾದ ಕೊಕ್ಕೋವನ್ನು ಕ್ರಮಬದ್ಧವಾಗಿ ಬೆಳೆಸಿ ಅಧಿಕ ಇಳುವರಿ ಪಡೆಯುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ’ ಎಂದು ಹೇಳಿದರು. ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿ ಚಂದ್ರಶೇಖರ ಕೆ. ವಿಷಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪಿ.ಎಂ., ಗ್ರಾ.ಪಂ. ಅಧ್ಯಕ್ಷರಾದ ಚಂದ್ರಕಲಾ ಬಳ್ಳಡ್ಕ, ಗ್ರಾ.ಪಂ. ಉಪಾಧ್ಯಕ್ಷರಾದ ನಂಜಪ್ಪ ನಿಡ್ಯಮಲೆ, ಸಂಘದ ನಿರ್ದೇಶಕರಾದ ದೀನರಾಜ ದೊಡ್ಡಡ್ಕ, ಧನಂಜಯ ಕೋಡಿ, ಜಯರಾಮ ನಿಡ್ಯಮಲೆ ಬಿ, ಜಯರಾಮ ಪಿ ಟಿ, ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ ಬಂಗಾರಕೋಡಿ, ಹೊನ್ನಪ್ಪ ಅಮಚೂರು, ಸೀತಾರಾಮ ಕದಿಕಡ್ಕ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ ಎಂ, ಪ್ರಮೀಳಾ ಎನ್. ಬಂಗಾರಕೋಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗ್ರಾ.ಪಂ. ಸದಸ್ಯರಾದ ಸುಭಾಷ್ಚಂದ್ರ ಬಂಗಾರಕೋಡಿ, ಸುರೇಶ ಪೆರುಮುಂಡ ಹಾಗೂ ಸಂಘದ ರೈತ ಸದಸ್ಯರು ಉಪಸ್ಥಿತರಿದ್ದರು.

ಪೆರಾಜೆ ಗ್ರಾಮದ ಅಡ್ಕದ ಐನ್ ಮನೆ ವಠಾರ, ಕುಶಾಲಪ್ಪ ಅಡ್ಕ ಹಾಗೂ ನಂದಕುಮಾರ್ ಅಡ್ಕ, ತಿರುಮಲೇಶ್ವರಿ ಬೊಮ್ಮನಮನೆ ಹಾಗೂ ಗಣಪಯ್ಯ, ಭಾಸ್ಕರ ದೊಡ್ಡಡ್ಕ ರವರ ತೋಟದಲ್ಲಿ ಪ್ರಾತ್ಯಕ್ಷಿಕೆ, ತರಬೇತಿ ನೀಡಲಾಯಿತು. ಈ ಸಂದರ್ಭ ರೈತ ಸದಸ್ಯರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.