ಇಂಡಿಗನತ್ತಕ್ಕೆ ಬೇಕಿದೆ ಮೂಲಸೌಕರ್ಯ: ಸರ್ಪಭೂಷಣ ಶ್ರೀ

| Published : May 27 2024, 01:08 AM IST

ಸಾರಾಂಶ

ಚುನಾವಣೆಯ ದಿನದಂದು ಅರಿವಿಗೆ ಬಾರದಂತೆ ಅಹಿತಕರ ಘಟನೆ ನಡೆದುಹೋಗಿದೆ. ಸರ್ಕಾರ, ಅಧಿಕಾರಿವರ್ಗ ಈಗಲಾದರೂ ಇಲ್ಲಿನ ಜನರಿಗೆ ಮೂಲಸೌಕರ್ಯ ಕೊಡಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಮಹಾಸಭಾ ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಹಾಗೂ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಹನೂರು

ಚುನಾವಣೆಯ ದಿನದಂದು ಅರಿವಿಗೆ ಬಾರದಂತೆ ಅಹಿತಕರ ಘಟನೆ ನಡೆದುಹೋಗಿದೆ. ಸರ್ಕಾರ, ಅಧಿಕಾರಿವರ್ಗ ಈಗಲಾದರೂ ಇಲ್ಲಿನ ಜನರಿಗೆ ಮೂಲಸೌಕರ್ಯ ಕೊಡಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಮಹಾಸಭಾ ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಹಾಗೂ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ ಹೇಳಿದರು.ತಾಲೂಕಿನ ಇಂಡಿಗನತ್ತದಲ್ಲಿ ಆಹಾರ ಕಿಟ್ ವಿತರಣೆ ಬಳಿಕ ಮಾತನಾಡಿ, ಕಾನೂನಿನ ಚೌಕಟ್ಟಿನೊಳಗೆ ನಾವೆಲ್ಲರೂ ಬದುಕಬೇಕು. ಮನುಷ್ಯನಿಗೆ ತಾಳ್ಮೆ ಮುಖ್ಯ, ಸಾವಧಾನದಿಂದ ನೀವು ಮತದಾನ ಬಹಿಷ್ಕಾರ ಮಾಡಬಹುದಿತ್ತು, ನೀವು ಹೋರಾಡಿರುವುದು ಮೂಲಸೌಕರ್ಯಕ್ಕಾಗಿ ಆದ್ದರಿಂದ ಈಗಲಾದರೂ ನಿಮಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟರು‌.

ಮನುಷ್ಯನಿಗೆ ಹಸಿವಾದಾಗ ಕೆಲವರು ನ್ಯಾಯಯುತವಾಗಿ ಕೇಳುತ್ತಾರೆ. ಕೆಲವರು ಶಕ್ತಿ ಉಪಯೋಗಿಸಿ ಪಡೆಯುತ್ತಾರೆ, ಆದರೆ ನೀವು ಯಾರನ್ನೂ ಕೇಳಲಿಲ್ಲ, ಇಲ್ಲಿನ ಕಷ್ಟ ಅರಿತು ಸ್ವಯಂ ಪ್ರೇರಣೆಯಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ, ನೂರಾರು ವರ್ಷಗಳಿಂದ ಪ್ರಕೃತಿ ಮಡಿಲಲ್ಲಿ ಇದ್ದು ಮಾದಪ್ಪನ ಮಕ್ಕಳಂತೆ ಜೀವಿಸುತ್ತಿದ್ದೀರಿ, ನಿಮಗೆ ಶೀಘ್ರ ಒಳ್ಳೆಯ ದಿನಗಳು ಬರಲಿ ಎಂದು ಆಶಿಸಿದರು.

76 ವರ್ಷಗಳಿಂದ ಅಧಿಕಾರಿಗಳು, ನಾಯಕರು ಕನಿಷ್ಠ ಮೂಲಸೌಕರ್ಯ ಕೊಡದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಈಗಲಾದರೂ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಕಷ್ಟವನ್ನು ಅರಿತು ಸಮಸ್ಯೆ ಪರಿಹರಿಸಲಿ ಜೊತೆಗೆ ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಖಾನಾಪುರ ಉಮೇಶ್ ಮಾತನಾಡಿ, ಘಟನೆ ನಡೆದ ದಿನದಿಂದಲೂ ಸಹ ಸಂಘ ಮತ್ತು ಸಮುದಾಯ ನಿಮ್ಮ ಜೊತೆಯಲ್ಲಿ ಇದೆ. ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಇರಬೇಕು ಎಂದು ತಿಳಿಸಿದರು. ಸಮುದಾಯ ಮುಖಂಡ ಮುರುಗೇಶ್ ಮಾತನಾಡಿ, ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ನಮ್ಮನ್ನು ನಾವು ಕಾಪಾಡಿಕೊಳ್ಳಲು ಘಟನೆ ನಡೆದ ದಿನದಿಂದಲೂ ಸಹ ಜಿಲ್ಲಾ ಮಹಾಸಭಾ ಸಮುದಾಯ ನಮಗೆ ಧೈರ್ಯ ತುಂಬಿದೆ ಜೊತೆಗೆ ಎಲ್ಲಾ ವಿಧದಲ್ಲಿಯೂ ಸಹ ಸಹಕಾರ ನೀಡುತ್ತಿದೆ ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಶಾಂತಿಯುತವಾಗಿ ಇರಬೇಕು ಎಂದರು.

ಇದೇ ವೇಳೆಯಲ್ಲಿ ಹಂಗಳ ಮಠದ ಷಡಕ್ಷರ ಸ್ವಾಮೀಜಿ, ಸಾಲೂರು ಮಠದ ಕಿರಿಯ ಮಹದೇವ ಸ್ವಾಮೀಜಿ, ಜಿಲ್ಲಾಧ್ಯಕ್ಷ ಮೂಡಲಪುರ ನಂದೀಶ್, ಉಪಾಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ಪ್ರಧಾನ ಕಾಯದರ್ಶಿ ನಾಗೇಂದ್ರ, ಚಂದ್ರಶೇಖರ್, ಕಾರ್ಯದರ್ಶಿ ಅನಾಪುರ ಉಮೇಶ್, ಮಹದೇವಸ್ವಾಮಿ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ, ಅಜ್ಜಿಪುರ ಮುರಡೇಶ್ವರಸ್ವಾಮಿ, ಪ್ರೀತಂ ನಾಗಪ್ಪ, ಬೇಡಗಂಪಣ ಸಮುದಾಯದ ಗೌರವಾಧ್ಯಕ್ಷ ಪುಟ್ಟಣ್ಣ, ಮುಖಂಡರಾದ ಮುರುಗೇಶ್ ಸಿದ್ದರಾಜು ಪುರಾಣಿ ಮಾದೇಶ್ ಇದ್ದರು.