ಸಾರಾಂಶ
ಕುದೂರು: ಕುದೂರು ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಹೈಕೋರ್ಟ್ ತಡೆಯಾಜ್ಞೆಯಿಂದ ಜನವರಿ 7ರಂದು ನಡೆಯಬೇಕಿದ್ದ ಸಭೆ ರದ್ದಾಗಿದೆ.
ಕುದೂರು: ಕುದೂರು ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಹೈಕೋರ್ಟ್ ತಡೆಯಾಜ್ಞೆಯಿಂದ ಜನವರಿ 7ರಂದು ನಡೆಯಬೇಕಿದ್ದ ಸಭೆ ರದ್ದಾಗಿದೆ.
16 ತಿಂಗಳ ಹಿಂದೆ ಕುದೂರು ಗ್ರಾಪಂಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕುಸುಮಾ ಹೊನ್ನರಾಜ್ ಮೇಲೆ ಯಾವುದೇ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಆರೋಪ ಇಲ್ಲದಿದ್ದರೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡುತ್ತಿಲ್ಲ ಎಂದು ಸದಸ್ಯರು ದೂರು ನೀಡಿದ್ದರು. ಇದನ್ನು ಪರಿಗಣಿಸಿ ಜನವರಿ 7ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಲು ರಾಮನಗರ ಉಪವಿಭಾಗಾಧಿಕಾರಿಗಳು ದಿನಾಂಕ ನಿಗದಿ ಮಾಡಿದ್ದರು.ಹಾಲಿ ಅಧ್ಯಕ್ಷರು ಅವಿಶ್ವಾಸ ಗೊತ್ತುವಳಿ ತರಲು ನ್ಯಾಯಾಲಯದ ಮೊರೆ ಹೋಗುತ್ತಾರೆಂದು ಸದಸ್ಯ ಗಿರೀಶ್ ಅಧ್ಯಕ್ಷರನ್ನೊಳಗೊಂಡು ಅವರ ಪರ 8 ಜನರಿಗೆ ನ್ಯಾಯಾಲಯದಿಂದ ಕೆವಿಎಟ್ ತಂದಿದ್ದರು. ಇದರಿಂದ ಚುರುಕಾದ ಅಧ್ಯಕ್ಷರು ನ್ಯಾಯಾಲಯದ ಮೊರೆಹೋಗಿ ಪಂಚಾಯ್ತಿ ಮತ್ತು ಅಧಿಕಾರಿಗಳ ಕ್ರಮದ ಮೇಲೆ ತಡೆಯಾಜ್ಞೆ ತಂದಿದ್ದಾರೆ.
ಕೋಟ್ .....................ವಿನಾಕಾರಣ ಅಧ್ಯಕ್ಷರ ಬದಲಾವಣೆ ಪ್ರಹಸನಕ್ಕೆ ಮುಂದಾಗುವುದು ಸರಿಯಲ್ಲ. ಭಾರತದ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದೆ. ಯಾವುದೇ ಹಗರಣ, ತೊಂದರೆ ಇಲ್ಲದಿದ್ದರೂ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿರುವುದು ಸರಿಯಲ್ಲ. ಮುಂದಾದರು ಎಲ್ಲರು ಒಟ್ಟಾಗಿ ಗ್ರಾಮದ ಒಳಿತಿಗೆ ಕೆಲಸ ಮಾಡುವಂತಾಗಲಿ.
-ಎ.ಮಂಜುನಾಥ್. ಮಾಜಿ ಶಾಸಕರುಕೋಟ್ ................
ಇದು ಸತ್ಯಕ್ಕೆ ಸಂದ ಜಯ. ಯಾರ ಮನಸಿಗೂ ನೋವಾಗಬಾರದೆಂದು ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ನನ್ನ ಪ್ರತಿ ಹೆಜ್ಜೆಯನ್ನು ಸೂಕ್ಷ್ಮವಾಗಿ ಇಡುತ್ತಾ ಆಡಳಿತ ಮಾಡುತ್ತಿದ್ದರೂ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದು ನಿಜಕ್ಕೂ ಬೇಸರ ತರಿಸಿತ್ತು. ಹೈಕೋರ್ಟ್ ತಡೆಯಾಜ್ಞೆ ನೀಡಿ ಸತ್ಯ ಎತ್ತಿಹಿಡಿದಿದೆ.- ಕುಸುಮಾ ಹೊನ್ನರಾಜ್, ಅಧ್ಯಕ್ಷರು, ಕುದೂರು ಗ್ರಾಪಂ
31ಕೆಆರ್ ಎಂಎನ್ 4,5.ಜೆಪಿಜಿ4.ಕುದೂರು ಗ್ರಾಮಪಂಚಾಯ್ತಿ
5.ಕುಸುಮಾ ಹೊನ್ನರಾಜ್. ಅಧ್ಯಕ್ಷರು. ಕುದೂರು ಗ್ರಾಮಪಂಚಾಯ್ತಿ---------------------------