ಶಿಕ್ಷಣ, ನೇಮಕಾತಿ, ಬಡ್ತಿಯಲ್ಲಿ ದಕ್ಷಿಣ ಕರ್ನಾಟಕ್ಕೆ ಅನ್ಯಾಯ

| Published : May 30 2024, 12:47 AM IST

ಶಿಕ್ಷಣ, ನೇಮಕಾತಿ, ಬಡ್ತಿಯಲ್ಲಿ ದಕ್ಷಿಣ ಕರ್ನಾಟಕ್ಕೆ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಶಿಕ್ಷಣ, ಉದ್ಯೋಗ ನೇಮಕಾತಿ ಮತ್ತು ಬಡ್ತಿಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಬಾರಿ ಅನ್ಯಾಯವಾಗುತ್ತಿದ್ದು, ಸಂವಿಧಾನ ತಿದ್ದುಪಡಿ 371ನೇ ಜೆ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಿದ್ದರೆ ಕರ್ನಾಟಕ ಏಕೀಕರಣದ ಚಳವಳಿಯ ಮತ್ತೊಂದು ಮಜಲು ಈ ರಾಜ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ.ಕುಮಾರ್ ಎಚ್ಚರಿಕೆ ನೀಡಿದರು.

ಕನಕಪುರ: ಶಿಕ್ಷಣ, ಉದ್ಯೋಗ ನೇಮಕಾತಿ ಮತ್ತು ಬಡ್ತಿಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಬಾರಿ ಅನ್ಯಾಯವಾಗುತ್ತಿದ್ದು, ಸಂವಿಧಾನ ತಿದ್ದುಪಡಿ 371ನೇ ಜೆ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಿದ್ದರೆ ಕರ್ನಾಟಕ ಏಕೀಕರಣದ ಚಳವಳಿಯ ಮತ್ತೊಂದು ಮಜಲು ಈ ರಾಜ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ.ಕುಮಾರ್ ಎಚ್ಚರಿಕೆ ನೀಡಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಉಪ ತಹಸೀಲ್ದಾರ್ ವಸಂತ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, 2014ರಲ್ಲಿ ಸರ್ಕಾರ ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನ 371 ಜೆ ಜಾರಿಗೊಳಿಸಿದಾಗ ಕೇಂದ್ರ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿ ಮಾಡುತ್ತದೆ ಎಂದು ನಾವೆಲ್ಲರೂ ಸ್ವಾಗತಿಸಿದ್ದೆವು. ಆದರೆ ದಕ್ಷಿಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದರು.

ಸಂವಿಧಾನ ತಿದ್ದುಪಡಿ 371 ಜೆ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದ ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳ ಜನ ಸರ್ಕಾರಿ ಹುದ್ದೆಗಳಲ್ಲಿ ಶೇ.0ರಷ್ಟು ಮೀಸಲಾತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ದಕ್ಷಿಣ ಕರ್ನಾಟಕದ 24 ಜಿಲ್ಲೆಗೆ ಶೇ.50ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಇಲ್ಲಿ ಸಾಕಷ್ಟು ಅಸಮಾನತೆ ಇದ್ದು, ದಕ್ಷಿಣ ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ನೌಕರರು ಹಲವು ವರ್ಷ ಸೇವೆ ಸಲ್ಲಿಸಿದರೂ ಮುಂಬಡ್ತಿ ಸಿಗದೇ ಅದೇ ಹುದ್ದೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಆದರೆ ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳಿಂದ ಆಯ್ಕೆಯಾದ ಅಧಿಕಾರಿಗಳು ಅಲ್ಪಾವಧಿಯಲ್ಲೇ ತಹಸೀಲ್ದಾರ್ ಆಗಿ ಮುಂಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ದಕ್ಷಿಣ ಕರ್ನಾಟಕಕ್ಕೆ ಬಾರಿ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹತ್ತು ವರ್ಷಗಳಲ್ಲಿ 90 ಸಾವಿರ ಹುದ್ದೆಗಳು ಹೈದರಾಬಾದ್ ಕರ್ನಾಟಕದ ಪಾಲಾಗಿವೆ. ದಕ್ಷಿಣ ಕರ್ನಾಟಕದ ಸರ್ಕಾರಿ ನೌಕರರು ಹಲವಾರು ವರ್ಷ ಸೇವೆ ಸಲ್ಲಿಸಿದರೂ ಮುಂಬಡ್ತಿ ಸಿಗುವುದಿಲ್ಲ. ಇನ್ನು 10 ವರ್ಷ ಕಳೆದರೆ ದಕ್ಷಿಣ ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರು ನಿವೃತ್ತಿ ಹೊಂದುತ್ತಾರೆ. ರಾಜ್ಯದ ಎಲ್ಲಾ ಕಾರ್ಯಾಂಗದ ಹುದ್ದೆಗಳ ಅಧಿಕಾರ ಹೈದರಾಬಾದ್ ಕರ್ನಾಟಕದ ಅಧಿಕಾರಿಗಳ ನಿಯಂತ್ರಣದಲ್ಲಿರಲಿದೆ. ಈಗಲು ನಾವು ಮೈಮರೆತು ಅನ್ಯಾಯವನ್ನು ಸರಿಪಡಿಸದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರದಲ್ಲಿ ಈ ಭಾಗದವರೇ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಾಗಿದ್ದು ನೇಮಕಾತಿ ಮತ್ತು ಬಡ್ತಿಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯ ಸರಿಪಡಿಸಬೇಕು. ಇಲ್ಲದಿದ್ದರೆ ಕರ್ನಾಟಕ ಏಕೀಕರಣದ ನಂತರ ಅಂತಹುದೇ ಮತ್ತೊಂದು ಹೋರಾಟದ ಮಜಲನ್ನು ಪಡೆಯುವುದರ ಜೊತೆಗೆ ಪ್ರತ್ಯೇಕತೆಗೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ .ಹಾಗಾಗಿ ಸರ್ಕಾರ ಕೂಡಲೇ ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಗೌರವ ಅಧ್ಯಕ್ಷ ಚಿಕ್ಕ ಕೆಂಪೇಗೌಡ, ಹಸಿರು ಪ್ರತಿಷ್ಠಾನ ಲಕ್ಷ್ಮೀ ಶ್ರೀನಿವಾಸ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ರೈತ ಮುಖಂಡ ಚೀಲೂರು ಮುನಿರಾಜು, ಕೆ.ಆರ್ ಸುರೇಶ್, ರೈತ ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್, ಸಾಹಿತಿ ಕೂ.ಗಿ. ಗಿರಿಯಪ್ಪ, ಅಜ್ಗರ್ ಖಾನ್, ಯುವಶಕ್ತಿ ವೇದಿಕೆ ಶ್ರೀನಿವಾಸ್ ಸೇರಿದಂತೆ ಪ್ರಗತಿಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02: ನೇಮಕಾತಿ ಮತ್ತು ಬಡ್ತಿಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ನೇಗಿಲಯೋಗಿ ಟ್ರಸ್ಟ್ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರುಗಳು ಕನಕಪುರ ಉಪ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.