ಕಾಸರಗೋಡಿನ ಗೋಕುಲಂ ಗೋಶಾಲೆಯಲ್ಲಿ ಇನ್ನು ರಿಸರ್ಚ್ ಲ್ಯಾಬ್

| Published : May 14 2025, 12:00 AM IST

ಸಾರಾಂಶ

ಭಾರತೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಭಾರತೀಯ ನೃತ್ಯ ಹಾಗೂ ಸಂಗೀತ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿಶ್ವ ಪ್ರಸಿದ್ಧಿ ಗಳಿಸಿರುವ ಗಡಿನಾಡು ಕಾಸರಗೋಡು ಬೆಕಲ್ ಗೋಕುಲಂ ಗೋಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಗೋವಿನ ಕುರಿತು ಮತ್ತು ಪಂಚಗವ್ಯದ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲು ರಿಸರ್ಚ್ ಲ್ಯಾಬ್ ಪ್ರಾರಂಭವಾಗಲಿದೆ.

ಮಂಗಳೂರು: ಭಾರತೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಭಾರತೀಯ ನೃತ್ಯ ಹಾಗೂ ಸಂಗೀತ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿಶ್ವ ಪ್ರಸಿದ್ಧಿ ಗಳಿಸಿರುವ ಗಡಿನಾಡು ಕಾಸರಗೋಡು ಬೆಕಲ್ ಗೋಕುಲಂ ಗೋಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಗೋವಿನ ಕುರಿತು ಮತ್ತು ಪಂಚಗವ್ಯದ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲು ರಿಸರ್ಚ್ ಲ್ಯಾಬ್ ಪ್ರಾರಂಭವಾಗಲಿದೆ.

ಕಳೆದ 11 ದಿನಗಳ ಕಾಲ ಗೋಶಾಲೆಯಲ್ಲಿ ನಡೆದ ವೈಶಾಖ ನೃತ್ಯೋತ್ಸವ 25ರ ಸಮಾರೋಪ ಸಮಾರಂಭದಲ್ಲಿ ಸೆಂಟ್ರಲ್ ಯೂನಿವರ್ಸಿಟಿಯ ಉಪಕುಲಪತಿ ಪ್ರೊ. ಸಿದ್ಧು ಅಲ್ಗೂರು ಈ ವಿಷಯವನ್ನು ಘೋಷಿಸಿದರು.

ಬೆಂಗಳೂರು ಸಿಎಂಆರ್‌ ಯೂನಿವರ್ಸಿಟಿ, ಕೇರಳದ ಸೆಂಟ್ರಲ್ ಯೂನಿವರ್ಸಿಟಿ ಮತ್ತು ಗೋಶಾಲೆಯ ಸಹಯೋಗದಲ್ಲಿ ಸಂಶೋಧನೆ ನಡೆಯಲಿದೆ. ಗೋಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೆಂಟ್ರಲ್ ಕಲ್ಚರಲ್ ಡಿಪಾರ್ಟ್‌ಮೆಂಟ್ ಮತ್ತು ಸೆಂಟ್ರಲ್ ಯೂನಿವರ್ಸಿಟಿ ಇವುಗಳು ತಮ್ಮ ಸಹಭಾಗಿತ್ವವನ್ನು ನೀಡಲಿವೆ.ಪರಂಪರಾ ವಿದ್ಯಾಪೀಠದ ಈ ವರ್ಷದ ‘ಕಲಾ ಪೋಷಕ ಪ್ರಶಸ್ತಿ’ಯನ್ನು ಮಾಜಿ ಉದುಮ ಶಾಸಕ ಮತ್ತು ಪೂರಕ್ಕಳಿ ಅಕಾಡೆಮಿ ಅಧ್ಯಕ್ಷ ಕೆ. ಕುಞರಾಮನ್ ಅವರಿಗೆ ನೀಡಿ ಗೌರವಿಸಲಾಯಿತು.11 ದಿನಗಳ ಕಾಲ ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದ ವೈಶಾಖ ನೃತ್ಯೋತ್ಸವ ಪ್ರಸಿದ್ಧ ಚಲನಚಿತ್ರ ನಟಿ ಮತ್ತು ನೃತ್ಯಾಂಗನಿಯಾದ ರಚನಾ ನಾರಾಯಣಂ ಕುಟ್ಟಿ ಅವರ ‘ಮಾನ್‌ಸೂನ್ ಅನುರಾಗ’ ಎಂಬ ನೃತ್ಯ ರೂಪಕದ ಮೂಲಕ ಮುಕ್ತಾಯಗೊಂಡಿತು.