ಸಾರಾಂಶ
ಯಾದಗಿರಿ ನಗರದಲ್ಲಿರುವ ರಸಗೊಬ್ಬರ ಮಾರಾಟಗಾರರ ಮಳಿಗೆಗಳಿಗೆ ಜಿಲ್ಲಾ ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಶ್ರೀನಿವಾಸ್ ಬಿ.ವೈ. ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದಲ್ಲಿರುವ ರಸಗೊಬ್ಬರ ಮಾರಾಟಗಾರರ ಮಳಿಗೆಗಳಿಗೆ ಯಾದಗಿರಿ ಜಿಲ್ಲೆಯ ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಶ್ರೀನಿವಾಸ್ ಬಿ.ವೈ. ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅಂಗಡಿಗಳಲ್ಲಿರುವ ರಸಗೊಬ್ಬರ ದಾಸ್ತಾನು ಮತ್ತು ಯಂತ್ರದ ದಾಸ್ತಾನಿನಲ್ಲಿರುವ ವ್ಯತ್ಯಾಸಗಳನ್ನು ಪರಿಶೀಲಿಸಿ, ರಸಗೊಬ್ಬರ ಮಾರಾಟಗಾರರರಿಗೆ ಅಂಗಡಿಯಲ್ಲಿರುವ ದಾಸ್ತಾನು ಮತ್ತು ದಾಖಲೆ ದಾಸ್ತಾನು ತಾಳೆ ಹೊಂದಬೇಕೆಂದು ತಿಳಿಸಿದರು.
ಎಲ್ಲಾ ರೈತರಿಗೆ ಯಂತ್ರದ ಮುಖಾಂತರವೇ ರೈತರ ಹೆಬ್ಬೆರಳ ಗುರುತು ಸ್ಕ್ಯಾನಿಂಗ್ ಮಾಡಿ ಮತ್ತು ಆಧಾರ್ ಸಂಖ್ಯೆ ಪಡೆದು ವಿತರಿಸಬೇಕು. ಎಲ್ಲ ರೈತರಿಗೆ ಬಿಲ್ಲು ನೀಡಬೇಕು ಹಾಗೂ ರಸಗೊಬ್ಬರ, ಬೀಜ ಮತ್ತು ಕೀಟನಾಶಕಗಳ ಎಂ.ಆರ್.ಪಿ. ದರ, ದಾಸ್ತಾನು ವಿವರವನ್ನು ಅಂಗಡಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕೆಂದು ತಿಳಿಸಲಾಗಿದೆ ಎಂದಿದ್ದಾರೆ.ಈ ವೇಳೆ ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್. ರವಿ, ಉಪ ಕೃಷಿ ನಿರ್ದೇಶಕರಾದ ಮಂಜುಳಾ ಬಿ., ಸಹಾಯಕ ಕೃಷಿ ನಿರ್ದೇಶಕ ಸುರೇಶ್ ಬಿ. ಇದ್ದರು.