ಹಾಲು ಉತ್ಪಾದಕ ಸಂಘಗಳಲ್ಲಿ ಕಂಪ್ಯೂಟರ್‌ ಅಳವಡಿಸಿ

| Published : Jun 17 2024, 01:36 AM IST

ಹಾಲು ಉತ್ಪಾದಕ ಸಂಘಗಳಲ್ಲಿ ಕಂಪ್ಯೂಟರ್‌ ಅಳವಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಎಲ್ಲ 172 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಂಪ್ಯೂಟರ್‌ ಅಳವಡಿಸಿಕೊಳ್ಳುವಂತೆ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ ಎಲ್ಲ 172 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಂಪ್ಯೂಟರ್‌ ಅಳವಡಿಸಿಕೊಳ್ಳುವಂತೆ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ತಿಳಿಸಿದರು.

ಇಲ್ಲಿನ ತುಮುಲ್‌ ಉಪ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹಾಲು ಉತ್ಪಾದಕ ಸಂಘಗಳಿಗೆ ಕಂಪ್ಯೂಟರ್‌ ಮತ್ತು ಮೇವಿನ ಜೋಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ಸಂಘಗಳಲ್ಲಿ ಕಂಪ್ಯೂಟರ್‌ ಅಳವಡಿಸಲು ಹಿಂದೇಟು ಹಾಕುತ್ತಿರುವ ದೂರು ಕೇಳಿ ಬಂದಿದ್ದು, ರೈತರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಕಡಿಮೆ ದರದಲ್ಲಿ ರಾಜ್ಯಾದಾದ್ಯಂತ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಂಪ್ಯೂಟರ್ ಅಳವಡಿಸಲಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಂಘಗಳಲ್ಲಿ ಕಂಪ್ಯೂಟರ್‌ ಅಳವಡಿಸಲು ಜಾರಿಗೊಳಿಸಿದೆ. ಆದ ಕಾರಣ ಪ್ರತಿ ಸಂಘವು ಕಂಪ್ಯೂಟರ್ ಅಳವಡಿಸಿಕೊಂಡು ರೈತರಿಗೆ ಅನುಕೂಲ ಮಾಡಬೇಕೆಂದು ತಿಳಿಸಿದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಸಿಎಂ ಸಿದ್ದರಾಮಯ್ಯ ಮನವೊಲಿಸಿ ಸರ್ಕಾರ ಇಲ್ಲಿವರೆಗೂ ಬಾಕಿ ಉಳಿಸಿಕೊಂಡಿದ್ದ ರೈತರ ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇನ್ನೇರೆಡು ದಿನಗಳಲ್ಲಿ ಹಣ ರೈತರ ಖಾತೆಗೆ ಜಮೆ ಆಗಲಿದೆ ಎಂದರು.

ತಾಲೂಕಿನಲ್ಲಿ ಹಾಲಿನ ಗುಣಮಟ್ಟಕೆ ಹೆಚ್ಚು ಒತ್ತು ನೀಡಬೇಕಿದೆ. ಇತ್ತಿಚೆಗೆ ಮಳೆ ಬಿದ್ದ ಕಾರಣ ಹಾಲು ಉತ್ಪದಾನೆಯಲ್ಲಿ ಏರಿಕೆ ಕಂಡಿದ್ದು, ಒಕ್ಕೂಟದಲ್ಲಿ ಅಧಿಕಾರಿಗಳು ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಲು ಎಂದರು.

ತುಮುಲ್‌ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಹಾಲು ಉತ್ಪಾದಕರ ಸಂಘಗಳಲ್ಲಿ ಎಎಂಸಿ ಸಾಫ್ಟ್‌ವೇರ್‌ ಅಳವಡಿಸುವ ಕಾರ್ಯ ನಡೆದಿದ್ದು, ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಈಗ ತಾಲೂಕಿನಲ್ಲಿ 150 ಮೆಟ್ರಿಕ್‌ ಟನ್‌ ಜೋಳ ವಿತರಿಸಲಾಗುತ್ತಿದ್ದು, ಇದರ ಜೊತೆಗೆ ಇನ್ನೂ 20 ಟನ್‌ ಜೋಳ ವಿತರಣೆಗೆ ಸಚಿವರು ಸೂಚನೆ ನೀಡಿದ್ದು, ಅದನ್ನು ಸಹ ವಿತರಿಸಲಾಗುವುದು ಎಂದರು.

ರಾಜ್ಯಕ್ಕೆ 78 ಕೋಟಿ ರು. ಪ್ರೋತ್ಸಾಹ ಧನ ಬಿಡುಗಡೆಯಾಗಿದ್ದು ಜಿಲ್ಲೆಗೆ 5.54 ಕೋಟಿ ಪ್ರೋತ್ಸಾಹ ಧನ ಮಂಜೂರಾಗಿದೆ. ತಾಲೂಕಿಗೆ 80 ಲಕ್ಷ ರು. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ತುಮುಲ್‌ ಆಡಳಿತಾಧಿಕಾರಿ ಡಾ.ಉಮೇಶ್‌, ,ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ತುಮುಲ್‌ ಮಾಜಿ ಅಧ್ಯಕ್ಷ ಬಿ.ನಾಗೇಶಬಾಬು, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆದಿನಾರಾಯಣರೆಡ್ಡಿ, ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ಸಣ್ಣಪ್ಪಯ್ಯ, ಮುಖಂಡ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ವಿಸ್ತರಣಾಧಿಕಾರಿಗಳಾದ ಸಿ.ರಂಜಿತ್‌, ಸಹನಾಸ್ವಾಮಿ, ವೈದ್ಯ ಡಾ.ಅಭಿಲಾಷ್‌ ,ವ್ಯವಸ್ಥಾಪಕ ಲಕ್ಷ್ಮೀಕಾಂತ್‌ ಇದ್ದರು.