ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಕಳೆದ 7 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಿದ್ಧಗಂಗಾ ಆಸ್ಪತ್ರೆ ಇದೀಗ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಕಾರ್ಯಾನಿರ್ವಹಿಸುವ ಯುನೈಟೆಡ್ ಇಮೇಜಿಂಗ್ ಸಂಸ್ಥೆಯ ಉತ್ಪನ್ನವಾದ ಎಂಆರ್‌ಐ ಘಟಕವನ್ನು ಸ್ಥಾಪಿಸುವ ಮೂಲಕ ಚಿಕಿತ್ಸಾ ವಿಭಾಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರೋಗಿಗಳಿಗೆ ಕಡಿಮೆ ಸಮಯದಲ್ಲಿ ಪರೀಕ್ಷೆ ಮಾಡುವ ಹಾಗೂ ತ್ವರಿತಗತಿಯಲ್ಲಿ ನಿಖರ ಫಲಿತಾಂಶವನ್ನು ನೀಡುವ ಎಂಆರ್‌ಐ ಘಟಕ ಇದಾಗಿದ್ದು ತುಮಕೂರು ಜಿಲ್ಲೆಯಲ್ಲಿಯೇ ಎಐ ಸೌಲಭ್ಯ ಹೊಂದಿರುವ ಏಕೈಕ ಎಂಆರ್‌ಐ ಘಟಕ ಇದಾಗಿದೆ.ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನೂತನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಉನ್ನತ ಸೇವೆ ನೀಡುವಲ್ಲಿ ಎಂದೂ ರಾಜಿಯಾಗದ ನಮ್ಮ ಆಸ್ಪತ್ರೆ ಇದೀಗ ಎಂಆರ್ ಐ ಸೇವೆಯನ್ನೂ ಆರಂಭಿಸಿರುವುದು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ತೀರ್ಮಾನಗಳಿಗೆ ಶೀಘ್ರವಾಗಿ ನೆರವಾಗಲಿದೆ. ಒಂದೇ ಸೂರಿನಡಿ ಎಲ್ಲಾ ರೀತಿಯ ಸೌರ್ಯವಗಳು ಒದಗಿಸುವ ಮೂಲಕ ಜನರಿಗೆ ಮತ್ತಷ್ಟು ಆರೋಗ್ಯದ ಭರವಸೆ ನೀಡಲು ಇದು ಪ್ರೇರಣೆಯಾಗಿದೆ ಎಂದರು.ಸಿದ್ದಗಂಗಾ ವೈದ್ಯಕೀಯ ಮಹಾ ವಿದ್ಯಾಯಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ ಎಸ್. ಮಾತನಾಡಿ ಯಾವುದೇ ಆಸ್ಪತ್ರೆ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಚೇತರಿಕೆಯಲ್ಲಿ ಗಮನಾರ್ಹ ಬೆಳವಣಿಗೆ ಕಾಣುತ್ತದೆ. ಇದೀಗ ಎಂಆರ್ ಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ರೋಗಿಗಳ ಚಿಕಿತ್ಸೆ ನೀಡುವ ವಿಷಯದಲ್ಲಿ ನಮ್ಮ ಬದ್ಧತೆಯನ್ನು ಹೆಚ್ಚಿಸಿಕೊಂಡಿದ್ದೇವೆ ಎಂದರು.ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಜನರಿಗೆ 24 ಗಂಟೆಯೂ ತುರ್ತು ಸೇವೆ ನೀಡುವ ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ನಾವು ಎಲ್ಲಾ ರೀತಿಯ ಅತ್ಯಾಧುನಿಕ ಸೌರ್ಯಮಗಳನ್ನು ಒಳಗೊಂಡಿದೆ, ಇದೀಗ ಎಂಆರ್ ಐ ಸೇವೆ ಆರಂಭಿಸಿರುವುದು ಆಸ್ಪತ್ರೆಯ ವೈದ್ಯಕೀಯ ಸೌರ್ಯ ಗಳಲ್ಲಿ ಪರಿಪರ್ಣತೆ ಸಾಧಿಸುವಂತೆ ಮಾಡಿದೆ. ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಎಂಆರ್ ಐ ಪರೀಕ್ಷೆ ದೊರೆಯಲಿದ್ದು ಇಂದಿನಿಂದಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು.ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ರಾದ ಡಾ.ಶಾಲಿನಿ ಮಾತನಾಡಿ ಯಾವುದೇ ದೈಹಿಕ ಸಮಸ್ಯೆಗಳ ಕುರಿತು ಸ್ಪಷ್ಟತೆ ಪಡೆಯಲು ಹಾಗೂ ಕೂಲಂಕುಷವಾಗಿ ಅಧ್ಯಯನ ಮಾಡಲು ಎಂಆರ್‌ಐ ತಂತ್ರಜ್ಞಾನ ಬಹಳಷ್ಟು ಅನುಕೂಲಕರ. ಇದು ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವುದರ ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೂ ನೆರವಾಗಲಿದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವಕುಮಾರ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ರೇಡಿಯಾಲಜಿಸ್ಟ್ ಗಳಾದ ಡಾ.ಧೃವ, ಡಾ.ಪ್ರಸಾದ್, ಡಾ.ತಿಲಕ್, ಡಾ.ಸಮೀಹ ಮುಂತಾದವರಿದ್ದರು.