ಗಣಪತಿ ದೇವಾಲಯದಲ್ಲಿ ಗೌರಮ್ಮ ಮೂರ್ತಿ ಸ್ಥಾಪನೆ

| Published : Aug 29 2025, 01:00 AM IST

ಸಾರಾಂಶ

ಪಟ್ಟಣದ ಗಣಪತಿ ದೇವಾಲಯದಲ್ಲಿ ಪ್ರಥಮಬಾರಿಗೆ ಗೌರಮ್ಮ ಮೂರ್ತಿಯನ್ನು ತಲಕಾಡಿನ ಕಾವೇರಿ ನದಿ ತೀರದಲ್ಲಿ ಮರಳಿನಲ್ಲಿ ತಯಾರಿಸಿ ತಂದು ಪ್ರತಿಷ್ಠಾಪಿಸಲಾಗಿದೆ. ಸಂಕಷ್ಟಹರ ಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರಥಮ ಬಾರಿಗೆ ಕಾವೇರಿ ನದಿಯಿಂದ ಮರಳು ಗೌರಮ್ಮನನ್ನು 8 ಗಂಟೆಗೆ ಪ್ರತಿಷ್ಠಾಪಿಸಿದ ಬಳಿಕ ಗೌರಿ ಮೂರ್ತಿಗೆ ವಿಧಿ, ವಿಧಾನಗಳೊಂದಿಗೆ ಪೂಜೆ ಮಾಡಲಾಯಿತು. ಮಹಾ ಮಂಗಳಾರತಿ ಬಳಿಕ ಗೌರಿಗೆ ಬಾಗಿನ ಅರ್ಪಣೆ, ಭಕ್ತಾಧಿಗಳಿಂದ ಪೂಜಾ ಕಾರ್ಯ ನಡೆಯಿತು.

ಕೊಳ್ಳೇಗಾಲ: ಪಟ್ಟಣದ ಗಣಪತಿ ದೇವಾಲಯದಲ್ಲಿ ಪ್ರಥಮಬಾರಿಗೆ ಗೌರಮ್ಮ ಮೂರ್ತಿಯನ್ನು ತಲಕಾಡಿನ ಕಾವೇರಿ ನದಿ ತೀರದಲ್ಲಿ ಮರಳಿನಲ್ಲಿ ತಯಾರಿಸಿ ತಂದು ಪ್ರತಿಷ್ಠಾಪಿಸಲಾಗಿದೆ. ಸಂಕಷ್ಟಹರ ಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರಥಮ ಬಾರಿಗೆ ಕಾವೇರಿ ನದಿಯಿಂದ ಮರಳು ಗೌರಮ್ಮನನ್ನು 8 ಗಂಟೆಗೆ ಪ್ರತಿಷ್ಠಾಪಿಸಿದ ಬಳಿಕ ಗೌರಿ ಮೂರ್ತಿಗೆ ವಿಧಿ, ವಿಧಾನಗಳೊಂದಿಗೆ ಪೂಜೆ ಮಾಡಲಾಯಿತು. ಮಹಾ ಮಂಗಳಾರತಿ ಬಳಿಕ ಗೌರಿಗೆ ಬಾಗಿನ ಅರ್ಪಣೆ, ಭಕ್ತಾಧಿಗಳಿಂದ ಪೂಜಾ ಕಾರ್ಯ ನಡೆಯಿತು.

ಪ್ರಪ್ರಥಮ ಬಾರಿಗೆ ವೀರಶೈವ ಸಮಾಜ ಗೌರಮ್ಮನ ಸ್ಥಾಪಿಸಿದ್ದ ಹಿನ್ನೆಲೆ ಬಾಗಿನ ನೀಡಲು ವಿವಿಧೆಡೆ ತೆರಳುತ್ತಿದ್ದ ಮಹಿಳಾ ಭಕ್ತರಿಗೆ ಇದರಿಂದ ಹೆಚ್ಚಿನ ಅನುಕೂಲವಾಯಿತು. ಗೌರಿ ಮೂರ್ತಿ ಸ್ಥಾಪಿಸುವ ಜೊತೆಗೆ ಗಣೇಶನನ್ನು ಪ್ರತಿಷ್ಠಾಪಿಸಿ ವಿಧಿ, ವಿಧಾನಗಳೊಂದಿಗೆ ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಗಿಯಿತು. ಆ.30 ಶನಿವಾರ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಬಳಿಕ ಕಾವೇರಿ ನದಿ ತೀರದಲ್ಲಿ ಗಣಪತಿ ವಿಸರ್ಜನೆ ಮಾಡಲಾಗುತ್ತದೆ. ಪೂಜೆ ವೇಳೆ ಪ್ರಧಾನ ಅರ್ಚಕ ಶಿವಕುಮಾರ್, ನಗರಸಭೆ ಸದಸ್ಯರಾದ ಸುಮ ಸುಬ್ಬಣ್ಣ, ಜಿ ಪಿ ಶಿವಕುಮಾರ್, ಮೋದಿ ಟೀ ಸ್ಟಾಲ್ ಮಹದೇವಸ್ವಾಮಿ, ಕುಮಾರಸ್ವಾಮಿ, ಚಂದನ್, ಮಂಜೇಶ ಇನ್ನಿತರಿದ್ದರು.