ಕುಮಾರಪಟ್ಟಣ: ರಾಣಿಬೆನ್ನೂರು ತಾಲೂಕು ಚಳಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಕಾಳಿಕಾದೇವಿ, ವಿಶ್ವಕರ್ಮ, ಮೌನೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನೆ ಮೇ ೧೪ ಮತ್ತು ೧೫ರಂದು ಜರುಗಲಿದೆ.
೧೪ರಂದು ಬೆಳಗ್ಗೆ ೮ ಗಂಟೆಯಿಂದ ಬಾಜಾ, ಭಜಂತ್ರಿ, ಡೊಳ್ಳು, ಸಮಾಳ ವಾದ್ಯಗಳೊಂದಿಗೆ, ವೀರಾಚಾರಿ ಕಮ್ಮಾರ್ ತಂಡದವರಿಂದ ಪುರವಂತಿಕೆ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ, ವಿಶ್ವಕರ್ಮ, ಮೌನೇಶ್ವರ, ದೇವರುಗಳ ಶಿಲಾಮೂರ್ತಿಗಳ ಮೆರವಣಿಗೆಯು ಸಾಗಿ ಮಧ್ಯಾಹ್ನ ೧೨ ಗಂಟೆಗೆ ಕಾಳಿಕಾ ದೇವಿ ದೇವಸ್ಥಾನಕ್ಕೆ ಬಂದು ತಲುಪಲಿದೆ.ನಂತರ ಸಂಜೆ ೬:೩೦ರಿಂದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ವಾಸ್ತು ಹೋಮ, ಅಗೋರ ಸುದರ್ಶನ ಹೋಮಗಳು, ಆಲಯ ಸುದ್ದಿ ಕಾರ್ಯಗಳು, ರಾತ್ರಿ ೯:೩೦ ರಿಂದ ಬಸನ ಕಾರ್ಯಕ್ರಮ ಜರಗಲಿವೆ. ೧೫ರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಕಾಳಿಕಾದೇವಿ, ವಿಶ್ವಕರ್ಮಗುರು ಮುನೇಶ್ವರ ಪ್ರತಿಷ್ಠಾಪನೆ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರುತ್ತದೆ. ಬೆಳಗ್ಗೆ ೧೧ ಗಂಟೆಗೆ ಧರ್ಮಸಭೆ ಕಾರ್ಯಕ್ರಮ ಜರುಗಲಿದ್ದು, ಸಾನಿಧ್ಯವನ್ನು ವಿಶ್ವಕರ್ಮ ಮಹಾ ಸಂಸ್ಥಾನ ಮಠ ಸಾವಿತ್ರಿ ಪೀಠ ವಡ್ಡನಾಳದ ಶತಶ್ರೀ ಶಂಕ್ರನಾತ್ಮನಂದ ಸರಸ್ವತಿ ಮಹಾಸ್ವಾಮಿಗಳು, ನವಲಗುಂದದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಮಹಾಸ್ವಾಮಿಗಳು, ಹುಲಗೂರಿನ ಮೌನೇಶ್ವರ ಮಠದ ಮೌನೇಶ್ವರ ಸ್ವಾಮಿಗಳು, ರಾಣಿಬೆನ್ನೂರಿನ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು ವಹಿಸುವರು.ಧರ್ಮಸಭೆಯ ಅಧ್ಯಕ್ಷತೆಯನ್ನು ಚಂದ್ರಚಾರಿ ಪತ್ತಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಪ್ರಕಾಶ್ ಕೋಳಿವಾಡ್, ಮಾಜಿ ಶಾಸಕರಾದ ಅರುಣ್‌ಕುಮಾರ್ ಪೂಜಾರ್, ಚಳಗೇರಿ ವಿಶ್ವಕರ್ಮ ಸಮಾಜದ ಹಿರಿಯರಾದ ಜಕಣಾಚಾರಿ ಮಾಯಾಚಾರಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಮಂಜುನಾಥ್‌ಗೌಡ ಶಿವಣ್ಣನವರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಂತೋಷ್‌ಕುಮಾರ್ ಪಾಟೀಲ, ತಾಲೂಕು ವಿಶ್ವಕರ್ಮ ಮಹಾಮಂಡಲ ಸದಸ್ಯರು, ಜಿಲ್ಲಾ ವಿಶ್ವಕರ್ಮ ಸದಸ್ಯರು, ಗ್ರಾಮದ ಮುಖಂಡರಾದ ರಾಯಪ್ಪ ತೆಬದ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಜಟ್ಟೆಪ್ಪಕರೆಗೌಡ್ರು, ರಾಜು ಪಾಟೀಲ್ ಆಗಮಿಸುವರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.ನಾಳೆಯಿಂದ ಕಾಳಿಕಾದೇವಿ, ವಿಶ್ವಕರ್ಮ, ಮೌನೇಶ್ವರ ದೇವರ ಪ್ರತಿಷ್ಠಾಪನೆ
ಚಳಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಕಾಳಿಕಾದೇವಿ ವಿಶ್ವಕರ್ಮ ಮೌನೇಶ್ವರಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ದೇವಸ್ಥಾನ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.