ಕಾನೂನು ರೀತಿಯಲ್ಲೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ: ಎಚ್.ಕೆ.ಕನ್ನಪ್ಪ

| Published : Jan 26 2024, 01:45 AM IST

ಕಾನೂನು ರೀತಿಯಲ್ಲೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ: ಎಚ್.ಕೆ.ಕನ್ನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಯಾವುದೇ ಜನಾಂಗಗಳ ಮೇಲೆ ದೌರ್ಜನ್ಯ ಮಾಡಿಲ್ಲ. ಗ್ರಾಮದಲ್ಲಿ ಎಲ್ಲಾ ಸಮಾಜದವರೊಂದಿಗೆ ಗೌರವಯುತ, ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದೇವೆ. ನಾವು ರಸ್ತೆ ಮಧ್ಯದಿಂದ ಕಾನೂನು ರೀತಿಯೇ ೨೧ ಮೀ. ಅಂತರದಲ್ಲಿ ಪ್ರತಿಮೆ ಸ್ಥಾಪಿಸಿದ್ದೇವೆ ಇದಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಹರಿಹರ

ಸೌಹಾರ್ದಯುತ ಮತ್ತು ಕಾನೂನಾತ್ಮಕವಾಗಿ ಸರ್ಕಾರದ ಅನುಮತಿ ಪಡೆದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಎಚ್.ಕೆ.ಕನ್ನಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀರಲಿಂಗೇಶ್ವರ ಟ್ರಸ್ಟ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಹಾಗೂ ಸಮಾಜದ ಬಾಂಧವರು ತೀರ್ಮಾನಿಸಿದಂತೆ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗುವುದು. ಪ್ರತಿಮೆ ಸ್ಥಾಪನೆ ಅನುಮತಿ ಕೋರಿ ಈಗಾಗಲೇ ಟ್ರಸ್ಟ್ ಹಾಗೂ ಯುವಕ ಸಂಘದಿಂದ ಎಲ್ಲಾ ದಾಖಲೆಗಳ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದು ಅನುಮತಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಏಕಪಕ್ಷೀಯವಾಗಿ ತಾಲೂಕು ಆಡಳಿತವು ೧೪೪ ಸೆಕ್ಷನ್ ಜಾರಿ ತಂದು ೩ ದಿನ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಜೊತೆಗೆ ಪ್ರತಿಮೆ ತೆರವುಗೊಳಿಸಿ ೭೦ಕ್ಕೂ ಹೆಚ್ಚು ಮಂದಿಯ ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತದ ನಡೆಯ ಸಮಾಜದವರು ಸೇರಿ ಟ್ರಸ್ಟ್ , ಯುವಕ ಸಂಘದಿಂದ ಖಂಡಿಸುತ್ತೇವೆ ಎಂದು ತಿಳಿಸಿದರು.

ಕುರುಬ ಸಮಾಜದ ಮುಖಂಡ ಯು.ಕೆ.ಅಣ್ಣಪ್ಪ ಮಾತನಾಡಿ, ನಾವು ಯಾವುದೇ ಜನಾಂಗಗಳ ಮೇಲೆ ದೌರ್ಜನ್ಯ ಮಾಡಿಲ್ಲ. ಗ್ರಾಮದಲ್ಲಿ ಎಲ್ಲಾ ಸಮಾಜದವರೊಂದಿಗೆ ಗೌರವಯುತ, ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದೇವೆ. ನಾವು ರಸ್ತೆ ಮಧ್ಯದಿಂದ ಕಾನೂನು ರೀತಿಯೇ ೨೧ ಮೀ. ಅಂತರದಲ್ಲಿ ಪ್ರತಿಮೆ ಸ್ಥಾಪಿಸಿದ್ದೇವೆ ಇದಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಸಲ್ಲಿಸಿದ್ದೇವೆ. ಜಿಲ್ಲಾಡಳಿತ ಪುನರ್ ಪರಿಶೀಲಿಸಿ ಕಾನೂನಾತ್ಮಕವಾಗಿ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿದ್ದೇವೆ. ಜಿಲ್ಲಾಧಿಕಾರಿಯವರಿಂದ ಅನುಮತಿಗಾಗಿ ಕಾಯುತ್ತಿದ್ದು, ಅನುಮತಿ ದೊರೆಯಬಹುದೆಂಬ ವಿಶ್ವಾಸವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕೆ.ಪಿ.ಗಂಗಾಧರ್, ಎಚ್.ಎಸ್.ಕರಿಯಪ್ಪ, ಚಂದ್ರಪ್ಪ ಬಣಕಾರ್, ಮಲೆಬೆನ್ನೂರು ಬೀರಪ್ಪ, ಸಿ.ಎಸ್.ಹೇಮಂತ ರಾಜ್ ಹಾಗೂ ಕುರುಬ ಸಮಾಜದ ಹಿರಿಯರು, ಯುವಕರು ಉಪಸ್ಥಿತರಿದ್ದರು.

,,,,,,,,