ನಗರದ ಸೋಮೆಕಟ್ಟೆ ಮಠದ ಆವರಣದಲ್ಲಿ ವಿಶೇಷ ಅಲಂಕೃತ ಮಂಟಪದಲ್ಲಿ ಸೋಮವಾರ ಗಣೇಶ ಹಬ್ಬದಂದುವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ 9ನೇ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ವೈಭವದಿಂದ ನೆರವೇರಿತು. ಇದರ ಅಂಗವಾಗಿ ಬೆಳಗಿನಿಂದಲೂ ವಿವಿಧ ಧಾರ್ಮಿಕ, ಪೂಜಾ ವಿಧಿವಿಧಾನಗಳು ನೆರವೇರಿದವು.
ಕನ್ನಡಪ್ರಭ ವಾರ್ತೆ ತುಮಕೂರು ನಗರದ ಸೋಮೆಕಟ್ಟೆ ಮಠದ ಆವರಣದಲ್ಲಿ ವಿಶೇಷ ಅಲಂಕೃತ ಮಂಟಪದಲ್ಲಿ ಸೋಮವಾರ ಗಣೇಶ ಹಬ್ಬದಂದುವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ 9ನೇ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ವೈಭವದಿಂದ ನೆರವೇರಿತು. ಇದರ ಅಂಗವಾಗಿ ಬೆಳಗಿನಿಂದಲೂ ವಿವಿಧ ಧಾರ್ಮಿಕ, ಪೂಜಾ ವಿಧಿವಿಧಾನಗಳು ನೆರವೇರಿದವು. ಅಲಂಕೃತ ಮಂಟಪದಲ್ಲಿ ಗಣೇಶನ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಗಣಪತಿ ಹೋಮ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸಾರ್ವಜನಿಕರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜೆ. ಲಕ್ಷ್ಮೀಕಾಂತ್, ಕಾರ್ಯದರ್ಶಿ ಪ್ರದೀಪ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಗಣೇಶೋತ್ಸವದ ಮಾರ್ಗದರ್ಶಕರಾದ ವೈ.ಎಚ್. ಹುಚ್ಚಯ್ಯ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಬಿ.ಎಸ್. ಮಂಜುನಾಥ್, ಜಿ.ಕೆ. ಶ್ರೀನಿವಾಸ್, ಕೆ. ವೇದಮೂರ್ತಿ, ಕಟ್ಟೆ ಸೋಮಣ್ಣ, ಸ್ವಚ್ಛ ಮಂಜುನಾಥ್, ಕುಮಾರ್, ಬಿಜೆಪಿ ಮುಖಂಡರಾದ ಟಿ.ಹೆಚ್. ಹನುಮಂತರಾಜು, ಧನುಷ್, ಪ್ರೀತಂಜೈನ್, ವಾಸವಿ, ಮಧುಸೂದನ್, ಶರತ್, ಓಂಕಾರೇಶ್ವರಿ, ವಸಂತ, ವೆಂಕಟೇಶಾಚಾರ್, ಕಟ್‌ವೆಲ್‌ರಂಗನಾಥ್, ವೆಂಕಟೇಶ್‌ಜೋಯಿಸ್, ಅಶೋಕ್‌ಕುಮಾರ್, ಕುಮಾರ್, ಪ್ರಮೋದ್, ರವೀಶ್ ಸೇರಿದಂತೆ ವಿಶ್ವ ಹಿಂದೂ ಪರಿಷದ್, ಭಜರಂಗದಳದ ಹಲವಾರು ಮುಖಂಡರು ಹಾಜರಿದ್ದರು.ಈ ಬಾರಿ ನಗರದ ಹಲವು ಸಂಘಗಳು ಪ್ರತಿಷ್ಠಾಪಿಸಿರುವ ಗಣಪತಿಗಳು ಒಳಗೊಂಡ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಜಿ. ಪ್ರದೀಪ್ ಹೇಳಿದರು.13 ದಿನಗಳ ಕಾಲ ಪ್ರತಿ ದಿನ ವಿವಿಧ ಸಾಂಸ್ಕೃತಿಕ, ಸಾಂಪ್ರದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ತಿಂಗಳ ೨೬ರಂದು ಗಣಪತಿ ವಿಸರ್ಜನಾ ಮಹೋತ್ಸವ ನಡೆಯಲಿದೆ. ಈ ಬಾರಿಯ ವಿಶೇಷವಾಗಿ ನಗರದ ವಿವಿಧೆಡೆ ಸಂಘಸಂಸ್ಥೆಗಳು ಪ್ರತಿಷ್ಠಾಪಿಸಿರುವ ಗಣಪತಿಗಳನ್ನು ಒಟ್ಟುಗೂಡಿಸಿ ಸಾಮೂಹಿಕ ವಿಸರ್ಜನಾಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ.