ಬಿದಿರಿನ ಕಂಬಕ್ಕೆ ವಿದ್ಯುತ್ ಮೇನ್ ಲೈನ್ ಅಳವಡಿಕೆ!

| Published : Jul 01 2025, 12:47 AM IST

ಸಾರಾಂಶ

ಬಸವನಬಾಗೇವಾಡಿ: .ತಾಲೂಕಿನ ಕಾನ್ನಾಳ-ಜಾಯವಾಡಗಿ ರಸ್ತೆಯಲ್ಲಿನ ರಸ್ತೆ ಬದಿ ವಿದ್ಯುತ್ ಕಂಬದ ಬದಲಿಗೆ ಬಿದಿರಿನ ಕಂಬವನ್ನು ನೆಟ್ಟು ಆ ಕಂಬಕ್ಕೆ ವಿದ್ಯುತ್ ಮೇನ್‌ಲೈನ್‌ನ್ನು ಅದಕ್ಕೆ ತೂಗು ಹಾಕಿದ್ದಾರೆ. ಇದೀಗ ಮಳೆಗಾಲವಿರುವದರಿಂದ ಮಳೆ ಹಾಗೂ ಗಾಳಿ ಬೀಸುತ್ತಿದೆ. ಇಂತಹದರಲ್ಲಿ ವಿದ್ಯುತ್ ಮೇನ್ ಲೈನ್ ಕಂಬ ತಪ್ಪಿ ಬಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಬಸವನಬಾಗೇವಾಡಿ: .ತಾಲೂಕಿನ ಕಾನ್ನಾಳ-ಜಾಯವಾಡಗಿ ರಸ್ತೆಯಲ್ಲಿನ ರಸ್ತೆ ಬದಿ ವಿದ್ಯುತ್ ಕಂಬದ ಬದಲಿಗೆ ಬಿದಿರಿನ ಕಂಬವನ್ನು ನೆಟ್ಟು ಆ ಕಂಬಕ್ಕೆ ವಿದ್ಯುತ್ ಮೇನ್‌ಲೈನ್‌ನ್ನು ಅದಕ್ಕೆ ತೂಗು ಹಾಕಿದ್ದಾರೆ. ಇದೀಗ ಮಳೆಗಾಲವಿರುವದರಿಂದ ಮಳೆ ಹಾಗೂ ಗಾಳಿ ಬೀಸುತ್ತಿದೆ. ಇಂತಹದರಲ್ಲಿ ವಿದ್ಯುತ್ ಮೇನ್ ಲೈನ್ ಕಂಬ ತಪ್ಪಿ ಬಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮುಖ್ಯವಾಗಿ ಜೋರಾದ ಗಾಳಿ ಬಿಟ್ಟರೆ ವಿದ್ಯುತ್ ಕಂಬ ಸಹ ಮುರಿದು ಬೀಳುವ ಸ್ಥಿತಿಯಲ್ಲಿದೆ. ಅಂತಹದರಲ್ಲಿ ಕಟ್ಟಿಗೆ ಕಂಬ ಹಾಕಲಾಗಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅಪಾಯಕ್ಕು ಮುನ್ನ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದನ್ನು ಗಮನಿಸಿ ಕೂಡಲೇ ಕಟ್ಟಿಗೆ ಕಂಬ ತೆಗೆದು ಗುಣಮಟ್ಟದ ವಿದ್ಯುತ್ ಕಂಬ ಅಳವಡಿಸಬೇಕಿದೆ. ಈ ಬಗ್ಗೆ ರಾಜಶೇಖರ ಸಜ್ಜನ ಆಗ್ರಹಿಸಿದ್ದಾರೆ.