ಸಾರಾಂಶ
ಮಗುವಿನ ಚಲನ-ವಲನ ಕಡೆ ಗಮನ ಇರಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಶೈಕ್ಷಣಿಕ ಸಾಧನೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು.
ಕೊಪ್ಪಳ: ಪಾಲಕರು, ಶಿಕ್ಷಕರು ಮಕ್ಕಳಿಗೆ ಶೈಕ್ಷಣಿಕವಾಗಿ ಸಾಧನೆಗೈಯಲು ಅಚಲ ಆತ್ಮವಿಶ್ವಾಸ ತುಂಬಬೇಕು ಎಂದು ನಗರದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಪಾಟೀಲ್ ಹೇಳಿದರು.
ಸಮೀಪದ ಭಾಗ್ಯನಗರದ ಜ್ಞಾನ ಬಂಧು ಶಿಕ್ಷಣ ಸಂಸ್ಥೆಯ ೧೫ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳ ಕಲಿಕೆಯ ಜೊತೆಯಲ್ಲಿ ಸದಾ ಕಾಳಜಿಯಿಂದ ನೋಡಿಕೊಳ್ಳಬೇಕು. ಮಗುವಿನ ಚಲನ-ವಲನ ಕಡೆ ಗಮನ ಇರಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಶೈಕ್ಷಣಿಕ ಸಾಧನೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಜಿ.ಎಸ್. ಮಾತನಾಡಿ, ಮಕ್ಕಳ ಮನಸು ಅತ್ಯಂತ ವಿಶಾಲವಾದದ್ದು. ಎಲ್ಲವನ್ನು ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಅದನ್ನು ಸರಿಯಾಗಿ ಉಪಯೋಗಿಸಕೊಳ್ಳೆಬೇಕು ಎಂದರು.
ಶಾಲಾ ಉಪ ಪ್ರಾಂಶುಪಾಲೆ ಜ್ಯೋತಿ ಎಸ್.ಎಸ್ ಸಂಸ್ಥೆಯ ಶೈಕ್ಷಣಿಕ ವರ್ಷದ ಸಾಧನೆಯನ್ನು ಮತ್ತು ಮಕ್ಕಳ ಪ್ರಗತಿ ಕುರಿತು ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು ಮಾತನಾಡಿ, ಯಾವ ದೇಶದಲ್ಲಿ ಶಾಲೆಗಳಿಗಿಂತ ದೇವಾಲಯಗಳ ಘಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶದಲ್ಲಿ ಅಜ್ಞಾನ ಮತ್ತು ಬಡತನವಿರುತ್ತದೆ. ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶದಲ್ಲಿ ಶ್ರೀಮಂತಿಕೆ ಇರುತ್ತದೆ ಎಂದು ಡಾ.ಅಂಬೇಡ್ಕರ್ ಹೇಳಿದ್ದು, ಶಿಕ್ಷಣದ ಪ್ರಗತಿಗೆ ಆದ್ಯತೆ ಹೆಚ್ಚು ನೀಡಬೇಕು ಎಂದರು.
೨೦೨೨-೨೩ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಶ್ರಮಿಸಿದ ಶಿಕ್ಷಕ ವೃಂದಕ್ಕೆ, ಶಾಲೆಯ ಉತ್ತಮ ವಿದ್ಯಾರ್ಥಿಗಳನ್ನು ಸನ್ಮಾನಿಸಿಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಾಲಾ ಪ್ರಾಂಶುಪಾಲ ಲಿಲಿಯನ್ ಅಂಟೋನಿ, ಭಾಗ್ಯನಗರದ ಪಪಂ ಸದಸ್ಯರು, ಸಂಸ್ಥೆಯ ಸಿಬ್ಬಂದಿ, ಮಕ್ಕಳು, ಪಾಲಕರು ಇತರರಿದ್ದರು.