ಎಚ್‌ಐವಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿ: ಎಂ.ಎಚ್. ಸುಬೇದಾರ್

| Published : Jan 31 2024, 02:15 AM IST

ಸಾರಾಂಶ

ಬಾಗಲಕೋಟೆ: ಎಚ್ಐವಿ ಸೋಂಕಿತರನ್ನು ಕೀಳಾಗಿ ಕಾಣದೆ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಮಾಜದಲ್ಲಿ ಗೌರವಿತವಾಗಿ ಕಾಣಬೇಕು ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಮೆಲ್ವಿಚಾರಕ ಎಂ.ಎಚ್. ಸುಬೇದಾರ್ ಹೇಳಿದರು. ಬಿ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರೆಡ್ ರಿಬ್ಬನ್ ಕ್ಲಬ್, ಎನ್.ಸಿ.ಸಿ ಎನ್ನೆಸ್ಸೆಸ್‌ ಘಟಕ ಹಾಗೂ ಬಾಗಲಕೋಟೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣದ ಘಟಕಗಳ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಚ್ಐವಿ ಸೋಂಕಿತರನ್ನು ಕೀಳಾಗಿ ಕಾಣದೆ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಮಾಜದಲ್ಲಿ ಗೌರವಿತವಾಗಿ ಕಾಣಬೇಕು ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಮೆಲ್ವಿಚಾರಕ ಎಂ.ಎಚ್. ಸುಬೇದಾರ್ ಹೇಳಿದರು.

ಬಿ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರೆಡ್ ರಿಬ್ಬನ್ ಕ್ಲಬ್, ಎನ್.ಸಿ.ಸಿ ಎನ್ನೆಸ್ಸೆಸ್‌ ಘಟಕ ಹಾಗೂ ಬಾಗಲಕೋಟೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣದ ಘಟಕಗಳ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾನಾಡಿದರು.

ಏಡ್ಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಎಚ್ಐವಿ ಹರಡುವ ಮಾರ್ಗಗಳು ಅದನ್ನು ತಡೆಗಟ್ಟುವ ಕ್ರಮ ಹಾಗೂ ರಕ್ತದಾನದ ಮಹತ್ವ ತಿಳಿಸಿಕೊಟ್ಟರು. ಸದೃಢ ಯುವಕರು ರಾಷ್ಟ್ರದ ಸಂಪತ್ತು. ಎಚ್ಐವಿ ಬಗ್ಗೆ ತಾವು ತಿಳಿದುಕೊಂಡು ಇತರರಿಗೂ ತಿಳಿಸಿ ಕೊಡಬೇಕು.ಎಚ್ಐವಿ ಸೋಂಕಿತರನ್ನು ಕೀಳಾಗಿ ಕಾಣದೆ ಅವರಿಗೆ ಆತ್ಮ ಸ್ಥೈರ್ಯ ತುಂಬಿ ಸಮಾಜದಲ್ಲಿ ಗೌರವಿತವಾಗಿ ಕಾಣಬೇಕೆಂದು ಎಂದರು.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ನಂಜುಂಡಸ್ವಾಮಿ, ಎನ್ನೆಸ್ಸೆಸ್‌ ಘಟಕದ ಅಧಿಕಾರಿಗಳಾದ ಡಾ.ಎಂ.ಎಂ. ಹುದ್ದಾರ, ಎನ್.ಸಿ.ಸಿ ಮತ್ತು ಆರ್.ಆರ್.ಸಿ ಘಟಕದ ಮುಖ್ಯಸ್ಥ ಪ್ರೊ.ಸಂಗಮೇಶ ಮೇಟಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕರಾದ ಜಿ.ಎಂ. ನಾವದಗಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ಡಾ.ಬಿ.ವಿ. ಖೋತ, ಪ್ರೊ.ಎಂ.ಎಚ್. ಜನ್ನಪ್ಪಗೋಳ ಉಪಸ್ಥಿತರಿದ್ದರು. ಕುಮಾರ ವಾದಿರಾಜ ಗುಮಾಸ್ತೆ ಸ್ವಾಗತಿಸಿದರು, ಕುಮಾರ್ ಅಗಸ್ತ್ಯ ಮಾದರ ವಂದಿಸಿದರು. ಕುಮಾರಿ ಐಶ್ವರ್ಯ ಮಠದ ಕಾರ್ಯಕ್ರಮ ನಿರೂಪಿಸಿದರು.