ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಾಲಾ ಕಾಲೇಜುಗಳಲ್ಲಿ ವನಮಹೋತ್ಸವ ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ,ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಲಿಂ,ಚಂದ್ರಶೇಖರ ಶಿವಾಚಾರ್ಯ ಆಂಗ್ಲಮಾಧ್ಯಮ ಶಾಲೆ ಆವರಣದಲ್ಲಿ ಶುಕ್ರವಾರ ಪರಿಸರ ದಿನಾಚರಣೆಯಲ್ಲಿ 75 ವಿವಿಧ ತಳಿಯ ಪವಿತ್ರ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾಥಿಗಳು ತಮ್ಮ ತಮ್ಮ ಮನೆಗಳ ಮುಂದೆ,ಶಾಲಾ ಆವರಣ, ರಸ್ತೆ ಇಕ್ಕೆಲಗಳಲ್ಲಿ ಮತ್ತು ಶಾಲಾ ಕಾಲೇಜುಗಳ ಸುತ್ತಮುತ್ತ ಗಿಡಗಳನ್ನು ನಡೆಬೇಕು ಆಗ ಮಾತ್ರ ನಮ್ಮ ಸುಮುತ್ತಮುತ್ತಲಿನ ಪರಿಸರ ಹಸಿರಾಗಿ ಕಾಣುವುದು ಅದಕ್ಕೆ ನಮ್ಮ ಇಚ್ಛಾಶಕ್ತಿ ಮುಖ್ಯ ಎಂದರು.

ಗಿಡ,ಮರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದರಿಂದ ವಾತಾವರಣದಲ್ಲಿ ಅಧಿಕ ಪ್ರಮಾಣದ ಶುದ್ಧ ಆಮ್ಲಜನಕ ಬಿಡುಗಡೆಯಾಗುತ್ತದೆ. ಇದು ಭೂಮಿಯ ಮೇಲೆ ಇರುವ ಎಲ್ಲಾ ಜೀವಿಗಳಿಗೂ ಅಗತ್ಯವಾಗಿದೆ. ಆದ್ದರಿಂದ, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು, ಜೊತೆಗೆ ಅವುಗಳು ಬೆಳೆಯುವ ತನಕ ಮಕ್ಕಳಂತೆ ಫೋಷಣೆ ಮಾಡಬೇಕು ಆಗ ಮಾತ್ರ ವನಮೋಹತ್ಸವ, ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.


ಗಿಡ, ಮರಗಳನ್ನು ಅವ್ಯಾಹತವಾಗಿ ನಾಶ ಮಾಡುತ್ತಿರುವ ಕಾರಣದಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಜೊತೆಗೆ ಪರಿಸರದಲ್ಲಿನ ಅದಷ್ಟೋ ಕೆರೆ ಕಟ್ಟೆಗಳನ್ನು ಕಣ್ಮರೆಯಾಗುತ್ತಿವೆ, ಅತಿಯಾದ ಪ್ಲಾಸ್ಟಿಕ್ ಬಳೆ,ಹೊಗೆ ಸೂಸುವ ವಾಹನಗಳ ಬಳಕೆ ಇದೂ ಕೂಡ ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿ ತಮ್ಮ ಮನೆಗಳ ಮೂಂದೆ ಸಸಿ ನೆಟ್ಟು ಅವುಗಳನ್ನು ಜವಾಬ್ದಾರಿಯಿಂದ ಪಾಲನೆ ಮಾಡಬೇಕು ಎಂದು ಹೇಳಿದರು

ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಅವಶ್ಯಕತೆ ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿ ವರ್ಷ ಕನಿಷ್ಠ ಒಂದೊಂದು ಗಿಡ ನೆಡುವುದರ ಮೂಲಕ ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ನೆಲಹೊನ್ನೆ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ, ಮಹೇಶ್ ಹುಡೇದ್, ರಘು ಕತ್ತಿಗೆ, ಶಾಲಾ ಶಿಕ್ಷಕ- ಶಿಕ್ಷಕರಿಯರು, ಶಾಲಾ ಮಕ್ಕಳು ಹಾಜರಿದ್ದರು.