ಹರಿಹರದ ಸಹಕಾರ ಕ್ರೆಡಿಟ್ ಸೊಸೈಟಿ; ಲೆಕ್ಕಪತ್ರಗಳ ಮಾಹಿತಿ ಸಲ್ಲಿಸಲು ಸೂಚನೆ

| Published : May 14 2025, 01:47 AM IST

ಹರಿಹರದ ಸಹಕಾರ ಕ್ರೆಡಿಟ್ ಸೊಸೈಟಿ; ಲೆಕ್ಕಪತ್ರಗಳ ಮಾಹಿತಿ ಸಲ್ಲಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರದ ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಈ ಸಂಸ್ಥೆಯು ಸಹಕಾರ ಸಂಘಗಳ ಕಾಯ್ದೆ ಹಾಗೂ ಬೈಲಾ ರೀತ್ಯಾ ಹಾಗೂ ಸ್ಥಾಪನೆ ಉದ್ದೇಶಗಳ ರೀತ್ಯಾ ಕಾರ್ಯ ಚಟುವಟಿಗಳನ್ನು ನಡೆಸದೇ ಸ್ಥಗಿತಗೊಂಡಿದೆ.

- ಸಹಕಾರ ಸಂಘಗಳ ಕಾಯ್ದೆ ರೀತ್ಯಾ ಕಾರ್ಯನಿರ್ವಹಿಸದೇ ಸ್ಥಗಿತ - - - ದಾವಣಗೆರೆ: ಹರಿಹರದ ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಈ ಸಂಸ್ಥೆಯು ಸಹಕಾರ ಸಂಘಗಳ ಕಾಯ್ದೆ ಹಾಗೂ ಬೈಲಾ ರೀತ್ಯಾ ಹಾಗೂ ಸ್ಥಾಪನೆ ಉದ್ದೇಶಗಳ ರೀತ್ಯಾ ಕಾರ್ಯ ಚಟುವಟಿಗಳನ್ನು ನಡೆಸದೇ ಸ್ಥಗಿತಗೊಂಡಿದೆ.

ಸದರಿ ಸಂಘವನ್ನು ಪುನಃಶ್ಚೇತನಗೊಳಿಸಲು ಯಾರು ಮುಂದೆ ಬಂದಿಲ್ಲ. ಈ ಸಹಕಾರ ಸಂಘದ ಲೆಕ್ಕ ಪುಸ್ತಕಗಳು, ಚರ ಮತ್ತು ಸ್ಥಿರಾಸ್ತಿ ಇರುವಿಕೆ ಬಗ್ಗೆ ಮಾಹಿತಿ ದೊರೆಯದ ಪ್ರಯುಕ್ತ ಸಂಘದ ಸಮಸ್ತ ಚರಾಸ್ತಿ ಪಡೆಯಲಾಗಿಲ್ಲ. ಸಂಘದ ಸಿಬ್ಬಂದಿಯಾಗಲಿ, ಸದಸ್ಯರಾಗಲಿ, ಆಡಳಿತ ಮಂಡಳಿ ನಿರ್ದೇಶಕರಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಸಂಘದ ಲೆಕ್ಕ ಪುಸ್ತಕಗಳ ಇರುವಿಕೆ ಬಗ್ಗೆ ಮಾಹಿತಿ ಇದ್ದಲ್ಲಿ ದಾಖಲೆಗಳ ಸಹಿತ ಸಲ್ಲಿಸಬಹುದು.

ಸಮಾಪಕರು ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಹರಿಹರ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ, ಹರಿಹರ ಇವರಿಗೆ 15 ದಿನಗಳೊಳಗೆ ದಾಖಲೆಗಳನ್ನು ಸಲ್ಲಿಸಬೇಕು. ಈ ಅವಧಿಯೊಳಗೆ ಯಾವುದೇ ಅಹವಾಲು, ಮಾಹಿತಿ ಬಾರದೇ ಇದ್ದಲ್ಲಿ ಸಂಘದ ನೋಂದಣಿ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ನೋಂದಣಿ ರದ್ದತಿ ನಂತರ ಯಾವುದೇ ರೀತಿಯ ಜವಾಬ್ದಾರಿಗಳಿಗೆ ಸಮಾಪಕರು ಹೊಣೆಗಾರರಾಗುವುದಿಲ್ಲ. ಯಾವುದೇ ಅಹವಾಲು ಇಲ್ಲವೆಂದು ನಡಾವಳಿ ಜರುಗಿಸಿ, ನೋಂದಣಿ ರದ್ದತಿ ಮಾಡಲಾಗುವುದೆಂದು ಸಮಾಪನಾಧಿಕಾರಿ ತಿಳಿಸಿದ್ದಾರೆ.

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಈ ಹಕಾರ ಸಂಘವು ಸಹಕಾರ ಸಂಘಗಳ ಕಾಯ್ದೆ ಹಾಗೂ ಬೈಲಾ ರೀತ್ಯಾ ಹಾಗೂ ಸ್ಥಾಪನೆ ಉದ್ದೇಶಗಳ ರೀತ್ಯಾ ಕಾರ್ಯ ಚಟುವಟಿಗಳನ್ನು ನಡೆಸದೇ ಸ್ಥಗಿತಗೊಂಡಿದೆ. ಸದರಿ ಸಂಘವನ್ನು ಪುನಃಶ್ಚೇತನಗೊಳಿಸಲು ಯಾರು ಮುಂದೆ ಬಂದಿಲ್ಲ. ಈ ಸಹಕಾರ ಸಂಘದ ಲೆಕ್ಕ ಪುಸ್ತಕಗಳು, ಚರ ಮತ್ತು ಸ್ಥಿರಾಸ್ತಿ ಇರುವಿಕೆ ಬಗ್ಗೆ ಮಾಹಿತಿ ದೊರೆಯದ ಪ್ರಯುಕ್ತ ಸಂಘದ ಸಮಸ್ತ ಚರಾಸ್ತಿ ಪಡೆಯಲಾಗಿಲ್ಲ. ಸಂಘದ ಸಿಬ್ಬಂದಿಯಾಗಲಿ, ಸದಸ್ಯರಾಗಲಿ, ಆಡಳಿತ ಮಂಡಳಿ ನಿರ್ದೇಶಕರಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಸಂಘದ ಲೆಕ್ಕ ಪುಸ್ತಕಗಳ ಇರುವಿಕೆ ಬಗ್ಗೆ ಮಾಹಿತಿ ಇದ್ದಲ್ಲಿ ದಾಖಲೆಗಳ ಸಹಿತ ಸಲ್ಲಿಸಬಹುದು. ಸಮಾಪಕರು ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಹರಿಹರ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ, ಹರಿಹರ ಇವರಿಗೆ 15 ದಿನಗಳೊಳಗೆ ದಾಖಲೆಗಳನ್ನು ಸಲ್ಲಿಸಬೇಕು. ಈ ಅವಧಿಯೊಳಗೆ ಯಾವುದೇ ಅಹವಾಲು, ಮಾಹಿತಿ ಬಾರದೇ ಇದ್ದಲ್ಲಿ ಸಂಘದ ನೋಂದಣಿ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ನೋಂದಣಿ ರದ್ದತಿ ನಂತರ ಯಾವುದೇ ರೀತಿಯ ಜವಾಬ್ದಾರಿಗಳಿಗೆ ಸಮಾಪಕರು ಹೊಣೆಗಾರರಾಗುವುದಿಲ್ಲ. ಯಾವುದೇ ಅಹವಾಲು ಇಲ್ಲವೆಂದು ನಡಾವಳಿ ಜರುಗಿಸಿ, ನೋಂದಣಿ ರದ್ದತಿ ಮಾಡಲಾಗುವುದೆಂದು ಸಮಾಪನಾಧಿಕಾರಿ ತಿಳಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)