ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ಪ್ರತಿಭಟನೆ

| Published : Jan 26 2024, 01:45 AM IST

ಸಾರಾಂಶ

ಡಾ.ಅಂಬೇಡ್ಕರ್ ಪುತ್ಥಳಿಗೆ ದುಷ್ಕರ್ಮಿಗಳು ಅವಮಾನ ಎಸಗಿದ್ದು, ಪ್ರಜಾಪ್ರಭುತ್ವ ಸರ್ಕಾರ ಇರುವ ಪ್ರತಿಯೊಬ್ಬ ನಾಗರಿಕರು ತಲೆ ತಗ್ಗಿಸುವಂತಹ ಘಟನೆ ಎಂದು ದಲಿತ ಸಾಮೂಹಿಕ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಕಲಬುರಗಿ ಜಿಲ್ಲೆಯ ಕೋಟನೂರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಹಾಗೂ ಸಮಾಜಘಾತುಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ದಲಿತ ಸಾಮೂಹಿಕ ಸಂಘಟನೆ ಒಕ್ಕೂಟದಿಂದ ನಗರದ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಪ್ರತಿಭಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಡಾ.ಅಂಬೇಡ್ಕರ್ ಪುತ್ಥಳಿಗೆ ದುಷ್ಕರ್ಮಿಗಳು ಅವಮಾನ ಎಸಗಿದ್ದು, ಪ್ರಜಾಪ್ರಭುತ್ವ ಸರ್ಕಾರ ಇರುವ ಪ್ರತಿಯೊಬ್ಬ ನಾಗರಿಕರು ತಲೆ ತಗ್ಗಿಸುವಂತಹ ಘಟನೆಯನ್ನು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗಪರ ಚಿಂತಕರು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಕರ್ನಾಟಕ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ದಾಖಲಿಸಿಕೊಂಡು ಕೂಡಲೇ ಇಂತಹ ನಾಚಿಕೆಗೇಡು ಕೃತ್ಯ ಮಾಡಿದ ಮತ್ತು ಇದಕ್ಕೆ ಪ್ರೇರೇಪಿಸಿದ ಸಮಾಜಘಾತುಕರನ್ನು ಪೋಲಿಸ್ ಪತ್ತೆ ಹಚ್ಚಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವೆಂಕಟೇಶ ಹೊಸ್ಮನಿ, ರಾಹುಲ್ ಹುಲಿಮನಿ, ಮಾಳಪ್ಪ ಕಿರದಳ್ಳಿ, ನಾಗಣ್ಣ ಕಲ್ಲದೇವನಹಳ್ಳಿ, ಮಾನಪ್ಪ ಶೆಳ್ಳಗಿ, ಮಲ್ಲಯ್ಯ ಕಮತಗಿ, ನಿಂಗಣ್ಣ ಗೋನಾಲ, ಜಟ್ಟೆಪ್ಪ ನಾಗರಾಳ, ಶಿವಲಿಂಗ ಹಸನಾಪುರ, ತಿಪ್ಪಣ್ಣ ಶೆಳ್ಳಗಿ, ವೈಜುನಾಥ್ ಹೊಸ್ಮನಿ, ಎಂ. ಪಟೇಲ, ಅಜ್ಮೀರ್, ಅಹಮದ್ ಪಠಾಣ್ ಸೇರಿದಂತೆ ಇತರರಿದ್ದರು.