ಪ್ರಗತಿಪರ ಚಿಂತನೆಗಳಿಂದ ಸಮಗ್ರ ಕೃಷಿ ಪದ್ಧತಿ ಸಾಧ್ಯ

| Published : Jan 07 2024, 01:30 AM IST

ಸಾರಾಂಶ

ಸೂಲಿಬೆಲೆ: ಇಸ್ರೇಲ್ ಮಾದರಿ ಎಂಬ ಪದ ಬಳಸುವ ಮುನ್ನಾ ಹೊಸಕೋಟೆ ತಾಲೂಕು ಜನತೆ ಕೃಷಿ ಕ್ಷೇತ್ರದಲ್ಲಿ ಏನು ಕಡಿಮೆ ಇಲ್ಲ ಎಂಬುದು ಸಾಬೀತು ಮಾಡಬೇಕು, ಪ್ರಗತಿಪರ ಚಿಂತನೆಗಳಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ಎಲ್ಲವೂ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ: ಇಸ್ರೇಲ್ ಮಾದರಿ ಎಂಬ ಪದ ಬಳಸುವ ಮುನ್ನಾ ಹೊಸಕೋಟೆ ತಾಲೂಕು ಜನತೆ ಕೃಷಿ ಕ್ಷೇತ್ರದಲ್ಲಿ ಏನು ಕಡಿಮೆ ಇಲ್ಲ ಎಂಬುದು ಸಾಬೀತು ಮಾಡಬೇಕು, ಪ್ರಗತಿಪರ ಚಿಂತನೆಗಳಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ಎಲ್ಲವೂ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೋಬಳಿಯ ದೊಡ್ಡಕೋಲಿಗ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಕೃಷಿ, ತೋಟಗಾರಿಕೆ, ರೇಷ್ಮ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಕಂಬಳೀಪುರ ಗ್ರಾಪಂ, ದೊಡ್ಡಕೋಲಿಗ ಡೇರಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಮಾರೋಪ ಕೃಷಿ ನವಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸಕೋಟೆ ತಾಲೂಕಿನಲ್ಲಿ ಹೂವು, ಹಣ್ಣು, ತಕರಾರಿ, ಜೇನುಕೃಷಿ, ರೇಷ್ಮೆ ಕೃಷಿಯಂತಹ ಬೆಳೆಗಳನ್ನು ಬೆಳೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಬೆಂಗಳೂರು ನಗರದ ಕಸ ಹಾಗೂ ನೀರು ಬಳಸಿ ಕಸವನ್ನು ರಸ ಮಾಡಿ ನಾವೇ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದೇವೆ. ಇದು ತಾಲೂಕಿನ ಪ್ರಗತಿ ಪರ ರೈತರ ಸಾಧನೆ ಎಂದು ಹೇಳಿದರು.

ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಪ್ರಯೋಗಾಲಯದಿಂದ ಕೃಷಿ ಬೆಳೆಗಳತ್ತ ಬಂದಿರುವ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುಮಾರು 90 ದಿನಗಳ ಕಾಲ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ಭವಿಷ್ಯದಲ್ಲಿ ಇವರು ವಿವಿಧ ಉದ್ಯೋಗವಕಾಶಗಳನ್ನು ಪಡೆಯುವ ಮೂಲಕ ರೈತರಿ ಸಹಕಾರಿಯಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ರೇಷ್ಮೆ ಮತ್ತು ಪಶುಪಾಲನೆ ರೈತರಿಗೆ ಲಾಭ ತರುವ ಉಪಕಸುಬುಗಳಾಗಿದ್ದು ರೈತರ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು, ರೈತ ದೇಶದ ಬೆನ್ನಲಬು ಇವರನ್ನು ಗೌರವಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕುಲ ಸಚಿವ ಎಸ್.ವಿ.ಸುರೇಶ್ ಮಾತನಾಡಿ, ಭಾರತ ದೇಶ ಆಹಾರ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಿದರೂ ಕೂಡ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನದಲ್ಲಿರುವುದು ವಿಷಾಧನೀಯ ಸಂಗತಿ ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಆಹಾರ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆರ್ಥಿಕ ವ್ಯವಸ್ಥೆ ಏರುಪೇರು ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಹಸಿರು ಕ್ರಾಂತಿ ದ್ವಿಗುಣವಾಗಬೇಕು. 2050ಕ್ಕೆ ದೇಶದಲ್ಲಿ ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ಹೆಚ್ಚಿನ ಸಾಧನೆಯಾಗಬೇಕು. ಸಂಶೋದನೆಗಳು ಹೆಚ್ಚಾಗಬೇಕು. ರೈತರಲ್ಲಿ ಅರಿವು ಹೆಚ್ಚಾಗಬೇಕು. ಇತರೆ ದೇಶಗಳ ಮಾದರಿಯಲ್ಲಿ ನಾವು ಮಾದರಿ ದೇಶವಾಗಬೇಕು. ರೈತರ ಏಳಿಗೆಗೆ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಅರಿವು ಮೂಡಿಸಲಾಗುತ್ತದೆ ಕೃಷಿ ಇಲಾಖೆಯ ಅನೇಕ ಕಾರ್ಯಕ್ರಮಗಳನ್ನು ಜನರ ಬಾಗಿಲಿಗೆ ಮುಟ್ಟಿಸುತ್ತಿದ್ದೇವೆ, ರೈತ ಸ್ನೇಹಿ ಚಟುವಟಿಕೆಗಳನ್ನು ಸಹ ಹೆಚ್ಚು ಮಾಡಿದ್ದೇವೆ. ವೈಜ್ಞಾನಿಕ ದರ ನಿಗದಿ ಸಮಸ್ಯೆ ಭೂತವಾಗಿ ಕಾಡುತ್ತಿದ್ದು ಇದು ತೊಲಗಬೇಕು ಎಂದು ಹೇಳಿದರು.

ಇದೇ ವೇಳೆ ಕೃಷಿ ವಸ್ತು ಪ್ರದರ್ಶನ ವೇದಿಕೆಯಲ್ಲಿ ಟಿ-ಸ್ಟೇನ್ ಅಂಡ್ ಕಂಪನಿಯ ರಾಸಾಯನಿಕ ಗೊಬ್ಬರ ಮಳಿಗೆಯನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ಪ್ರಗತಿಪರ ರೈತರಾದ ರಾಜಣ್ಣ ಹಾಗೂ ಚಂದ್ರೇಗೌಡರನ್ನು ಸಂಸದ ಬಿ.ಎನ್.ಬಚ್ಚೇಗೌಡರು ಸನ್ಮಾನಿಸಿದರು.

ಗ್ರಾಪಂ ಅಧ್ಯಕ್ಷೆ ಮಮತಾಗೋಪಾಲ್, ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಎನ್.ಜಿ.ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ತಮ್ಮೇಗೌಡ, ಬಮುಲ್ ನಿರ್ದೇಶಕ ಕೆ.ಎಂ.ಮಂಜುನಾಥ್, ಮುತ್ಸಂದ್ರ ಆನಂದಪ್ಪ, ನಗರೇನಹಳ್ಳಿ ನಾಗರಾಜಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಡಾ.ಡಿ.ಟಿ.ವೆಂಕಟೇಶ್, ಕೃಷಿ ಅಧಿಕಾರಿ ರೇಣುಕಾಪ್ರಸನ್ನ, ಗ್ರಾಪಂ ಸದಸ್ಯರಾದ ಶಿವಕುಮಾರ್‌, ಬೈರೇಗೌಡ, ರವಿ, ಅವೀನ್, ಪೂಜಾರಮೇಶ್, ಅಶ್ವಿನಿಸುರೇಶ್, ಕೃಷಿ ವಿಸ್ತರಣಾ ವಿಭಾಗ ಅಧಿಕಾರಿ ಡಾ.ಎಚ್.ಕೆ.ಪಂಕಜ, ವಿದ್ಯಾರ್ಥಿ ತಂಡದ ನಾಯಕ ತಿಪ್ಪೇಸ್ವಾಮಿ. ಟಿ-ಸ್ಟೇನ್ ಅಂಡ್ ಕಂಪನಿ ವ್ಯವಸ್ಥಾಪಕ ಕಾರ್ತಿಕಕುಮಾರ್, ಸೇಲ್ಸ್‌ ಮ್ಯಾನೇಜರ್ ಬೋಪಣ್ಣ, ಡೇರಿ ಅಧ್ಯಕ್ಷ ರಾಜಣ್ಣ ಇತರರಿದ್ದರು.

ಕೋಟ್‌................

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಆಹಾರ ಉತ್ಪನಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಸಾವಯವ ಗೊಬ್ಬರ ಬಳಸುವುದು ಕಡ್ಡಾಯವಾಗಬೇಕು. ಆಹಾರ ಉತ್ಪನ್ನಗಳ ಹೆಚ್ಚಳಕ್ಕಾಗಿ ಪ್ರಗತಿಪರ ಚಿಂತನೆಗಳು ಹಾಗೂ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.

-ಎಸ್.ವಿ.ಸುರೇಶ್, ಕುಲ ಸಚಿವರು, ಕೃಷಿ ವಿಶ್ವವಿದ್ಯಾಲಯ

ಚಿತ್ರ; ೦೬ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

ಸೂಲಿಬೆಲೆ ಹೋಬಳಿಯ ದೊಡ್ಡಕೋಲಿಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಕೃಷಿ ನವಯಾನವನ್ನು ಸಂಸದ ಬಚ್ಚೇಗೌಡ, ಮತ್ತಿತರ ಗಣ್ಯರು ಉದ್ಘಾಟಿಸಿದರು.

ಚಿತ್ರ; ೦೬ ಸೂಲಿಬೆಲೆ ೨ ಜೆಪಜೆ ನಲ್ಲಿದೆ ಟಿ-ಸ್ಟೇನ್ ಅಂಡ್ ಕಂಪನಿಯ ರಾಸಾಯನಿಕ ಗೊಬ್ಬರ ಮಳಿಗೆಯನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.