ಸಾರಾಂಶ
ದೇಶದ ಆರ್ಥಿಕ ಪ್ರಗತಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಮೂಲಾಧಾರವಾಗಿದ್ದು, ಇದು ಹೊಸ ಆವಿಷ್ಕಾರಗಳಿಗೆ ಮತ್ತು ಸೃಜನಶೀಲತೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ. ಕರಿಮುನ್ನಿಸಾ ಸಯ್ಯದ್ ಹೇಳಿದರು.
ಗದಗ:ದೇಶದ ಆರ್ಥಿಕ ಪ್ರಗತಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಮೂಲಾಧಾರವಾಗಿದ್ದು, ಇದು ಹೊಸ ಆವಿಷ್ಕಾರಗಳಿಗೆ ಮತ್ತು ಸೃಜನಶೀಲತೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ. ಕರಿಮುನ್ನಿಸಾ ಸಯ್ಯದ್ ಹೇಳಿದರು.
ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬೌದ್ಧಿಕ ಆಸ್ತಿ ಹಕ್ಕುಗಳು ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಡೀನ್ ಡಾ.ಅರುಂಧತಿ ಕುಲಕರ್ಣಿ ಮಾತನಾಡಿ, ಪೇಟೆಂಟಗಳು, ಟ್ರೇಡಮಾರ್ಕಗಳು, ಕೃತಿಸ್ವಾಮ್ಯ, ಕೈಗಾರಿಕಾ ವಿನ್ಯಾಸಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿದರು.
ಕೆಎಲ್ಇ ಸೊಸೈಟಿಯ ಎಸ್.ಎ. ಮಾನ್ವಿ, ಕಾನೂನು ಮಹಾವಿದ್ಯಾಲಯದ ಶಿವಮೂರ್ತಯ್ಯ ಜಿ.ರೇಶ್ಮಿ ಹಾಗೂ ಸಹಜಾನಂದ ಕೊಡತಗೇರಿ ಮಾತನಾಡಿದರು.ಪ್ರಾಂಶುಪಾಲ ಪ್ರೊ.ಸುಧಾ ಕೌಜಗೇರಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ. ಜಿತೇಂದ್ರ ಜಹಾಗೀರದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವರಾಜ.ಬಿ, ಪ್ರೊ. ಲಕ್ಷ್ಮಣ ಮುಳಗುಂದ, ಡಾ. ಸಾರಿಕಾ ಪಾಟೀಲ, ರಮೇಶ ಹುಲಕುಂದ, ಡಾ. ಅರುಣಕುಮಾರ, ಸಾವಿತ್ರಿ.ಟಿ, ಶ್ವೇತಾ ಪಾಲನಕರ, ಮಹಾಂತೇಶ, ಹುಸೇನಭಾಷಾ, ಡಾ. ಶ್ರೀಶ ವಿಠ್ಠಲ, ವಿಜಯಕುಮಾರ, ಮನೋಜಕುಮಾರ, ಸುಭಾಸ ಹರಿಹರ, ಬುಳ್ಳಪ್ಪ ಸೇರಿದಂತೆ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು. ಮಹಾನಂದಾ ಹಿರೇಮಠ ಹಾಗೂ ಭೀಮೇಶ ನಿರೂಪಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉಲ್ಲಾಸ ಶೆಟ್ಟಿ ಸ್ವಾಗತಿಸಿದರು. ಕಲಾ ವಿಭಾಗದ ಮುಖ್ಯಸ್ಥ ಹಾಗೂ ಎನ್.ಎಸ್.ಎಸ್ ಸಂಯೋಜಕ ಪ್ರೊ.ಅಪ್ಪಣ್ಣ ಹಂಜೆ ವಂದಿಸಿದರು.