ವಿವಿ ಅಂತರ್‌ ಕಾಲೇಜುಗಳ ಚೆಸ್‌: ಉಪ್ಪಿನಂಗಡಿ ಡಿಗ್ರಿ ಕಾಲೇಜು ಚಾಂಪಿಯನ್‌ ಶಿಪ್ ಪ್ರಶಸ್ತಿ

| Published : Mar 30 2024, 12:52 AM IST

ವಿವಿ ಅಂತರ್‌ ಕಾಲೇಜುಗಳ ಚೆಸ್‌: ಉಪ್ಪಿನಂಗಡಿ ಡಿಗ್ರಿ ಕಾಲೇಜು ಚಾಂಪಿಯನ್‌ ಶಿಪ್ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಂಡದ ಗೌತಮಿ ನಾಲ್ಕನೇ ಬೋರ್ಡ್‌ನ ವೈಯಕ್ತಿಕ ಟಾಪರ್ ಪ್ರಶಸ್ತಿಯನ್ನು ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಸರ್ಕಾರಿ ಕಾಲೇಜುಗಳು ಚೆಸ್ ಪಂದ್ಯಾವಳಿಯಲ್ಲಿ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ೧೬ ಕಾಲೇಜುಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವು ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಜುನಾಥ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ತಂಡಗಳೊಂದಿಗೆ ಗೆದ್ದು ಒಟ್ಟು ೧೫ ಅಂಕಗಳೊಂದಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ವಿಜೇತ ತಂಡದಲ್ಲಿ ಕಾಲೇಜಿನ ಕಾರ್ತಿಕ್.ಪಿ. ಮಹಮ್ಮದ್ ಮಿದ್ಲಾಜ್, ಕಾರ್ತಿಕ್ ಕೆ. ಅನುಷಾ ಹಾಗೂ ಗೌತಮಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ತಂಡದ ಗೌತಮಿ ನಾಲ್ಕನೇ ಬೋರ್ಡ್‌ನ ವೈಯಕ್ತಿಕ ಟಾಪರ್ ಪ್ರಶಸ್ತಿಯನ್ನು ಪಡೆದುಕೊಂಡರು.