ಅಂತರ್‌ ಕಾಲೇಜು ರಂಗ ಸ್ಪರ್ಧೆಗೆ ಚಾಲನೆ

| Published : Feb 04 2024, 01:30 AM IST

ಅಂತರ್‌ ಕಾಲೇಜು ರಂಗ ಸ್ಪರ್ಧೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಮಟ್ಟದ ಅಂತರ್‌ ಕಾಲೇಜು ರಂಗಸ್ಪರ್ಧೆ ‘ರಂಗ ಸೌರಭ 24’ಕ್ಕೆ ಚಾಲನೆ ಸಿಕ್ಕಿದೆ. ಈ ಬಾರಿ 20ಕ್ಕೂ ಹೆಚ್ಚು ಕಾಲೇಜು ಕಲಾತಂಡಗಳು ಪಾಲ್ಗೊಂಡಿವೆ. ಫೆಬ್ರವರಿ 10ರಂದು ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರೋಪದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಮಟ್ಟದ ಅಂತರ್‌ ಕಾಲೇಜು ರಂಗಸ್ಪರ್ಧೆ ‘ರಂಗ ಸೌರಭ 24’ಕ್ಕೆ ಚಾಲನೆ ಸಿಕ್ಕಿದೆ. ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ನಟ ಹಾಗೂ ರಂಗಕರ್ಮಿ ಶರತ್‌ ಲೋಹಿತಾಶ್ವ, ನಟ ಪ್ರಮೋದ್‌ ಶೆಟ್ಟಿ, ಭಾರತ ಯಾತ್ರಾ ಕೇಂದ್ರದ ಸಂಚಾಲಕ, ಹಿರಿಯ ನಟ ಕೆ.ವಿ.ನಾಗರಾಜಮೂರ್ತಿ, ರಂಗಸೌರಭದ ಪದಾಧಿಕಾರಿಗಳಾದ ಎ.ಪದ್ಮನಾಭ, ಆರ್.ಪಿ.ಉಮಾಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭಾರತ ಯಾತ್ರಾ ಕೇಂದ್ರದ ಕೆ.ವಿ.ನಾಗರಾಜಮೂರ್ತಿ ನೇತೃತ್ವದ ಈ ರಂಗಸ್ಪರ್ಧೆಯಲ್ಲಿ ಈ ಬಾರಿ 20ಕ್ಕೂ ಹೆಚ್ಚು ಕಾಲೇಜು ಕಲಾತಂಡಗಳು ಪಾಲ್ಗೊಂಡಿವೆ. ಹತ್ತು ದಿನಗಳ ಕಾಲ ರಂಗ ಸ್ಪರ್ಧೆಗಳು ನಡೆಯಲಿವೆ.

ಫೆಬ್ರವರಿ 10ರಂದು ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತ ರಂಗತಂಡಗಳ ಘೋಷಣೆ, ಬಹುಮಾನ ವಿತರಣೆ ನಡೆಯಲಿದೆ ಎಂದು ಭಾರತ ಯಾತ್ರಾ ಕೇಂದ್ರದ ಪ್ರಕಟಣೆ ತಿಳಿಸಿದೆ.