ವಿಜಯ ಶಾಲೆಯಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸಿ ಟಿ ಮಳಲಿಗೌಡರ ಸ್ಮರಣಾರ್ಥ ನಡೆದ ಅಂತರ ಶಾಲಾ ಗಣಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಗಣಿತದಲ್ಲಿ ಎಲ್ಲ ಸಮಸ್ಯೆಗಳಿಗೂ ಎರಡು ರೀತಿ ಪರಿಹಾರಗಳಿವೆ. ಅವುಗಳೆಂದರೆ ವಿಶ್ಲೇಷಣಾತ್ಮಕ ಪರಿಹಾರ ಮತ್ತು ಸಂಖ್ಯಾತ್ಮಕ ಪರಿಹಾರ. ವಿಶ್ಲೇಷಣಾತ್ಮಕ ಪರಿಹಾರ ಕಂಡುಹಿಡಿಯಬೇಕಾದರೆ ನಿಮಗೆ ಅದರ ನಿಖರತೆಯ ಅರಿವಿನ ಅಗತ್ಯವಿದೆ. ಗಣಿತದಲ್ಲಿ ಬಹಳ ಉತ್ತಮವಾದ ವೃತ್ತಿ ಅವಕಾಶಗಳಿವೆ ಎಂದು ಡಾ. ಜಗದೀಶ ಆರ್ ಡಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನಗಣಿತ ಕೇವಲ ಸಂಖ್ಯೆಯಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಗಣಿತ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಜಗದೀಶ ಆರ್ ಡಿ ವಿದ್ಯಾರ್ಥಿಗಳಿಗೆ ತಿಳಿಸಿದರು.ನಗರದ ವಿಜಯ ಶಾಲೆಯಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸಿ ಟಿ ಮಳಲಿಗೌಡರ ಸ್ಮರಣಾರ್ಥ ನಡೆದ ಅಂತರ ಶಾಲಾ ಗಣಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಗಣಿತದಲ್ಲಿ ಎಲ್ಲ ಸಮಸ್ಯೆಗಳಿಗೂ ಎರಡು ರೀತಿ ಪರಿಹಾರಗಳಿವೆ. ಅವುಗಳೆಂದರೆ ವಿಶ್ಲೇಷಣಾತ್ಮಕ ಪರಿಹಾರ ಮತ್ತು ಸಂಖ್ಯಾತ್ಮಕ ಪರಿಹಾರ. ವಿಶ್ಲೇಷಣಾತ್ಮಕ ಪರಿಹಾರ ಕಂಡುಹಿಡಿಯಬೇಕಾದರೆ ನಿಮಗೆ ಅದರ ನಿಖರತೆಯ ಅರಿವಿನ ಅಗತ್ಯವಿದೆ. ಗಣಿತದಲ್ಲಿ ಬಹಳ ಉತ್ತಮವಾದ ವೃತ್ತಿ ಅವಕಾಶಗಳಿವೆ. ಪ್ರಾಥಮಿಕ ಹಂತದಿಂದಲೇ ಗಣಿತ ಕಲಿಯುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಂಸ್ಥಾಪಕ ನಿರ್ದೇಶಕರಾದ ತಾರ ಎಸ್ ಸ್ವಾಮಿಯವರು ಮಾತನಾಡುತ್ತ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಸಿ.ಟಿ. ಮಳಲಿಗೌಡರ ಸವಿನೆನಪಿಗಾಗಿ ನಾವು
ಸಿಟಿಎಂ ಸ್ಮಾರಕ ಅಂತರ ಶಾಲಾ ಗಣಿತ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅವರ ಸರಳತೆ, ಶಿಸ್ತುಬದ್ಧ ಜೀವನ, ಪ್ರಾಮಾಣಿಕತೆ ಮತ್ತು ಕರ್ತವ್ಯ ತತ್ಪರತೆ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಾಗಿವೆ ಎಂದು ಸ್ಮರಿಸಿದರು. ರಸಪ್ರಶ್ನೆ ಸ್ಪರ್ಧೆಯ ಪ್ರವೇಶ ಸುತ್ತಿನಲ್ಲಿ ನಗರದ ವಿವಿಧ ಶಾಲೆಗಳ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ತಂಡದ ವಿದ್ಯಾರ್ಥಿಗಳು ಆರು ಸುತ್ತುಗಳಲ್ಲಿ ಗಣಿತಕ್ಕೆ ಸಂಬಂಧಿಸಿದ ವಿವಿಧ ಬಗೆಯ ಪ್ರಶ್ನೆಗಳಿಗೆ ಅತ್ಯುತ್ಸಾಹದಿಂದ ಉತ್ತರಗಳನ್ನು ವಿಶ್ಲೇಶಿಸಿ ಹೇಳುತ್ತಿದದ್ದು ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಅಂತಿಮವಾಗಿ ಅತಿಹೆಚ್ಚು ಅಂಕ ಪಡೆದ ನೇತಾಜಿ ಪಬ್ಲಿಕ್ ಶಾಲೆಯ ಹರಿಪ್ರೀತ್ ಗೌಡ ಜೆ ಎಲ್ ಮತ್ತು ಮಧುರ ಭಾರದ್ವಾಜ್ ಕೆ ಎಂ ಪ್ರಥಮ ಸ್ಥಾನವನ್ನು ಗಳಿಸಿ ಮೂರುಸಾವಿರ ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ವಿದ್ಯಾಸೌಧ ಶಾಲೆಯ ಅನನ್ಯ ಹೆಚ್ ಗೌಡ ಮತ್ತು ಮೋನಿಶ ಆರ್ ಶ್ಯಾಗಲೆ ಪಡೆದುಕೊಂಡು ಎರಡು ಸಾವಿರ ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ತೃತೀಯ ಸ್ಥಾನವನ್ನು ಎಸ್ ಆರ್ ಎಸ್ ಪ್ರಜ್ಞಾಶಾಲೆಯ ಮೊಕ್ಷಿತ ಜೆ ಬಿ ಮತ್ತು ತನ್ವಿತ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೈ ಎನ್ ಸುಬ್ಬಸ್ವಾಮಿ, ಪ್ರಾಂಶುಪಾಲ ನಂದೀಶ ಕೆ,ಎಸ್. ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.