ಸೇವಾ ಚಟುವಟಿಕೆಗೆ ಆಸಕ್ತಿ ಅಗತ್ಯ: ಡಾ.ಎಸ್.ಎಚ್.ಪಂಚಾಕ್ಷರಿ

| Published : Jun 11 2024, 01:34 AM IST

ಸೇವಾ ಚಟುವಟಿಕೆಗೆ ಆಸಕ್ತಿ ಅಗತ್ಯ: ಡಾ.ಎಸ್.ಎಚ್.ಪಂಚಾಕ್ಷರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ತಾಲೂಕಿನ ಇಂಗಳದಾಳು ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರಕ್ಕೆ ಡಾ.ಎಸ್.ಎಚ್.ಪಂಚಾಕ್ಷರಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯಾರ್ಥಿಗಳಲ್ಲಿ ಪಠ್ಯಶಿಕ್ಷಣದ ಜೊತೆ ಸೇವಾ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಡಾ.ಎಸ್.ಎಚ್ ಪಂಚಾಕ್ಷರಿ ಹೇಳಿದರು.

ನಗರದ ಚಂದ್ರವಳ್ಳಿ ಎಸ್‌ಜೆಎಂ ಕಾಲೇಜು ವತಿಯಿಂದ ಇಂಗಳದಾಳು ಗ್ರಾಮದಲ್ಲಿ ಆಯೋಜಿಸಿರುವ ಎನ್ಎಸ್ಎಸ್ ಶಿಬಿರಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಹಳ್ಳಿ, ನಗರಗಳ ವ್ಯತ್ಯಾಸ, ಪರಿಸರ ಸಂರಕ್ಷಣೆ, ಸೇವೆ ಫಲ ಸೇರಿ ಸಮಾಜದ ವಿವಿಧ ಸ್ವರೂಪ ತಿಳಿಸುವ ಎನ್ಎಸ್ಎಸ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಕಾರಿಯಾಗಿವೆ. ಕಾಲೇಜು ಆಡಳಿತ ಮಂಡಳಿಯು ಎನ್‍ಎಸ್‍ಎಸ್ ಶಿಬಿರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಮುಖ್ಯಅತಿಥಿ ಐಕ್ಯೂಎಸಿ ಸಂಚಾಲಕ ಡಾ.ಹರ್ಷವರ್ಧನ್ ಮಾತನಾಡಿ, ಹಳ್ಳಿಗಳ ಉದ್ಧಾರವಾದರೆ ದೇಶವು ತನ್ನಿಂದ ತಾನೇ ಉದ್ಧಾರವಾಗುತ್ತದೆ ಎಂಬುದು ಗಾಂಧೀಜಿಯವರ ಆಶಯವಾಗಿದೆ. ವಿಶ್ವವಿದ್ಯಾನಿಲಯದ ಮಟ್ಟದ ವಿದ್ಯಾರ್ಥಿಗಳನ್ನು ಹಳ್ಳಿಗಳ ಅಧ್ಯಯನದತ್ತ ತೊಡಗಿಸುವುದುಎನ್ಎಸ್ಎಸ್ ಸ್ಥಾಪನೆ ಮೂಲಉದ್ದೇಶ. ಗ್ರಾಮಗಳಲ್ಲಿ ಸ್ವಚ್ಛತೆ, ಪರಿಸರ ನೈರ್ಮಲ್ಯ ಬಗ್ಗೆ ಜಾಗೃತಿ ಮೂಡಿಸುವುದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಆದರ್ಶಮೌಲ್ಯ ಬಿತ್ತುವುದಾಗಿದೆ. ಅದರಂತೆ ಇಂಗಳದಾಳು ಗ್ರಾಮದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಕಾಲೇಜಿನಿಂದ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಇಂಥ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಇತಿಹಾಸ ಪ್ರಾಧ್ಯಾಪಕ ಪ್ರೊ.ಎಸ್.ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಮಾಜಿ ಸದಸ್ಯ

ಟಿ.ಕೆ ರಾಮಪ್ಪ, ಗ್ರಾಪಂ ಸದಸ್ಯರಾದ ಬೃಂದ ವಸಂತಕುಮಾರ್, ಪ್ರಕಾಶ್ ಎಂ, ಪ್ರೊ.ಎಚ್.ಎಂ. ಮಂಜುನಾಥಸ್ವಾಮಿ, ಅಧೀಕ್ಷಕ ಶ್ರೀನಿವಾಸಮೂರ್ತಿ, ಉಪನ್ಯಾಸಕ ಲಕ್ಷ್ಮಿಕಾಂತ್, ಗ್ರಾಮದ ಹಿರಿಯ ಮುಖಂಡರು ವೇದಿಕೆಯಲ್ಲಿದ್ದರು.