ಸಾರಾಂಶ
ಒಳ ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಒಳ ಮೀಸಲಾತಿ ಜಾರಿಗಾಗಿ ಆ.15ರಂದು ಕಪ್ಪು ಬಾವುಟ ಪ್ರದರ್ಶನ, ಒಳ ಮೀಸಲಾತಿ ಸಿಗುವವರೆಗೂ ಹೋರಾಟ ನಿಶ್ಚಿತವಾಗಿದೆ. ಹೋರಾಟದಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಎಚ್ಚರಿಸಿದೆ.
- 15ರಂದು ಕಪ್ಪು ಬಾವುಟ ಪ್ರದರ್ಶನ: ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ - - -
ಕನ್ನಡಪ್ರಭ ವಾರ್ತೆ ದಾವಣಗೆರೆಒಳ ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಒಳ ಮೀಸಲಾತಿ ಜಾರಿಗಾಗಿ ಆ.15ರಂದು ಕಪ್ಪು ಬಾವುಟ ಪ್ರದರ್ಶನ, ಒಳ ಮೀಸಲಾತಿ ಸಿಗುವವರೆಗೂ ಹೋರಾಟ ನಿಶ್ಚಿತವಾಗಿದೆ. ಹೋರಾಟದಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಎಚ್ಚರಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ ಮಾತನಾಡಿ, ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿಳಂಬ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದರು.ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ, ಇದೀಗ ನಾಗಮೋಹನ ದಾಸ್ ಆಯೋಗ ಸಹ ರಾಜ್ಯದಲ್ಲಿ ಮಾದಿಗ ಮತ್ತದರ ಉಪ ಜಾತಿಗಳು ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹವೆಂದು ಸ್ಪಷ್ಟವಾಗಿ ಹೇಳಿದೆ. ಎಲ್ಲ ಆಯೋಗಗಳು ಮಾದಿಗ ಉಪ ಜಾತಿಗಳ ಗುಂಪಿಗೆ ಶೇ.6 ಮೀಸಲಾತಿ ನಿಗದಿಪಡಿಸುವಂತೆ ಶಿಫಾರಸು ಮಾಡಿವೆ. ಅದರಂತೆ ಮಾದಿಗರ ಪಾಲಿನ ಶೇ.6 ಮೀಸಲಾತಿಯನ್ನು ವಿಧಾನಸಭೆ ಅಧಿವೇಶನದ ಮೊದಲ ದಿನವೇ ಘೋಷಿಸಲಿ, ಉಳಿದ ಹಂಚಿಕೆ ಬೇಕಾದರೆ ನಿಧಾನವಾಗಿ ಮಾಡಲಿ ಎಂದು ಅವರು ತಾಕೀತು ಮಾಡಿದರು.
ಸಂಘದ ಡಿ.ಹನುಮಂತಪ್ಪ ಗಾಂಧಿ ನಗರ, ರಾಜು ಶಾಮನೂರು, ಅಂಜಿನಪ್ಪ ಶಾಮನೂರು, ಎಂ.ದುರುಗೇಶ, ಕರಿಯಪ್ಪ ಆವರಗೆರೆ, ಎಂ.ಪ್ರಭಾಕರ, ರಾಘವೇಂದ್ರ ಕಡೇಮನೆ ಇತರರು ಇದ್ದರು.- - -
-8ಕೆಡಿವಿಜಿ3: ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.