ಕನ್ನಡಪ್ರಭ ವಾರ್ತೆ ಮೈಸೂರುಮಹಿಳೆಯರಿಗೆ ಶಿಕ್ಷಣ ಮತ್ತು ಸಮಾನ ಅವಕಾಶಗಳು ದೊರೆತರೆ ದೇಶಕ್ಕೆ ದೊಡ್ಡ ಆಸ್ತಿಯಾಗುತ್ತಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ನಗರದ ವಿದ್ಯಾರಣ್ಯಪುರಂನ ಧರಂಸಿಂಗ್ ಕಾಲೋನಿ ಬಿ ಬ್ಲಾಕ್ ನಲ್ಲಿ ಭಾರತ್ ಭೀಮ್ ಸೇನೆ ಮಹಿಳಾ ಘಟಕ ಹಾಗೂ ತುಳಸಿ ಮಹಿಳಾ ಸ್ವಸಹಾಯ ಸಂಘ ಸಹಯೋಗದೊಂದಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಇಂದು ದೇಶದಲ್ಲಿ ಮಹಿಳೆಯರು ನೆಮ್ಮದಿಯ ಬದುಕನ್ನು ಕಟ್ಟಿಕೊಂಡು ಸ್ವಾವಲಂಬಿಗಳಾಗಿ ಪುರುಷರಿಗೆ ಸಮಾನವಾಗಿ ತಮ್ಮ ಹಕ್ಕುಗಳನ್ನು ಪಡೆದು ಎಲ್ಲಾ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರೆ ಅದು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಹಕ್ಕು. ಹೀಗಾಗಿ, ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬ ಮಹಿಳೆಯೂ ಸ್ಮರಿಸಲೇಬೇಕು ಎಂದರು.ಮಹಿಳಾ ದಿನಾಚರಣೆಯ ಮೂಲಕ ಮಹಿಳೆಯರು ಸಂಘಟಿತರಾಗಬೇಕು. ಆ ಮೂಲಕ ಒಗ್ಗಟ್ಟಿನ ಮಂತ್ರದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಣ ಮಹಿಳೆಯರ ಮೊದಲ ಆದ್ಯತೆಯಾಗಬೇಕು. ಪ್ರತಿಯೊಬ್ಬ ಹೆಣ್ಣಿಗೂ ಸರಿಯಾದ ಶಿಕ್ಷಣ ಮತ್ತು ಪೂರಕ ವಾತಾವರಣ ಕಲ್ಪಿಸಿದರೆ ದೇಶದ ಶಕ್ತಿಯಾಗಿ ರೂಪುಗೊಳ್ಳುವುದರಲ್ಲಿ ಯಾವ ಅನುಮಾನ ಇಲ್ಲ ಎಂದು ಅವರು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಜಯನಗರ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯೆ ಡಾ. ವೀಣಾ, ವಿದ್ಯಾರಣ್ಯಪುರಂ ಠಾಣೆಯ ಮುಖ್ಯಪೇದೆ ಧನಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಕೋಮಲ, ಗೀತಾ, ಆಟೋ ಚಾಲಕಿ ರೇಣುಕಾದೇವಿ, ಶಿಲ್ಪಾ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.ಭಾರತ್ ಭೀಮ್ ಸೇನೆ ಜಿಲ್ಲಾಧ್ಯಕ್ಷೆ ಮಹದೇವಮ್ಮ, ತುಳಸಿ ಮಹಿಳಾ ಸ್ವಸಹಾಯ ಸಂಘದ ಕಾರ್ಯದರ್ಶಿ ಮಂಜುಳಾ,ಸಂಸ್ಥಾಪಕ ರಾಜ್ಯಾಧ್ಯಕ್ಷ ದಿನೇಶ್, ಜಿಲ್ಲಾಧ್ಯಕ್ಷ ಯಶವಂತ್ ಕುಮಾರ್, ಸಮಾಜ ಸೇವಕರಾದ ಸುಹಾಸಿನಿ, ಶಿಕ್ಷಕಿ ನಿರ್ಮಲಾ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷೆ ವಿ.ಪಿ. ಸುಶೀಲ, ಸಮತಾ ಸೊಸೈಟಿ ಅಧ್ಯಕ್ಷೆ ದೀಪಾ ಬುದ್ದೆ, ಮೈತ್ರಿ ರಾಜ್, ಮೈಸೂರು ವಿವಿ ಉಪನ್ಯಾಸಕ ರಾಘವೇಂದ್ರ, ಪಾಲಿಕೆ ಮಾಜಿ ಸದಸ್ಯರಾದ ಶೋಭಾ ಸುನೀಲ್, ಎಂ. ಸುನಿಲ್, ಉಮಾಮಣಿ ಮಾದೇಗೌಡ, ಗ್ರಾಪಂ ಸದಸ್ಯರಾದ ಕಮಲಾ ನಟರಾಜ್ ಮೊದಲಾದವರು ಇದ್ದರು.----ಕೋಟ್....ಸಾಧನೆ ಎನ್ನುವಂತದ್ದು ಯಾರಿಗೂ ಸೀಮಿತವಲ್ಲ. ಸಮಾಜದಲ್ಲಿ ಯಾರು ಬೇಕಾದರೂ ಸಾಧನೆ ಮಾಡಬಹುದು. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕೇವಲ ಕಣ್ಣಿಗೆ ಕಾಣುವಂತಹ ಸಮಾಜದಲ್ಲಿ ಮುಖ್ಯವಾಹಿನಿಯಲ್ಲಿ ಇರುವವರನ್ನು ಗುರುತಿಸಿ ಅಭಿನಂದಿಸುತ್ತೇವೆ. ಆದರೆ, ಇದೆಲ್ಲ ಸಾಧನೆಗೆ ಪ್ರೇರಣೆಯಾದವಳು ಮನೆಯೊಳಗಿನ ಗೃಹಿಣಿ. ಹೀಗಾಗಿ, ಗೃಹಿಣಿಯರು ಕೂಡ ಇಂತಹ ದಿನಾಚರಣೆಯ ಅಭಿನಂದನೆಗೆ ಅರ್ಹರು.- ಡಾ. ವೀಣಾ, ಪ್ರಸೂತಿ ತಜ್ಞ ವೈದ್ಯರು, ಜಯನಗರ ಸರ್ಕಾರಿ ಆಸ್ಪತ್ರೆ-----------------eom/mys/shekar/
ಮಹಿಳೆಯರಿಗೆ ಶಿಕ್ಷಣ, ಅವಕಾಶ ದೊರೆತರೆ ದೇಶಕ್ಕೆ ಆಸ್ತಿ
ಇಂದು ದೇಶದಲ್ಲಿ ಮಹಿಳೆಯರು ನೆಮ್ಮದಿಯ ಬದುಕನ್ನು ಕಟ್ಟಿಕೊಂಡು ಸ್ವಾವಲಂಬಿಗಳಾಗಿ ಪುರುಷರಿಗೆ ಸಮಾನವಾಗಿ ತಮ್ಮ ಹಕ್ಕುಗಳನ್ನು ಪಡೆದು ಎಲ್ಲಾ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.